ETV Bharat / state

Jagadish Shettar: ಪೇಸಿಎಂ ಕಾಂಗ್ರೆಸ್ ಕಾರ್ಬನ್ ಕಾಪಿ, ಈಗ ಪೇ ಸಿಎಂಗೆ ಅರ್ಥವೇ ಇಲ್ಲ: ಜಗದೀಶ್ ಶೆಟ್ಟರ್ - ಬಿಜೆಪಿ ಅಧಿಕಾರಾವಧಿ

ಬಿಜೆಪಿ ಅಧಿಕಾರಾವಧಿಯಲ್ಲಿ ಎರಡ್ಮೂರು ವರ್ಷ ಕಾದಿರುವ ಗುತ್ತಿಗೆದಾರರು, ಈಗ ಕಾಂಗ್ರೆಸ್​ ಬಂದೊಡನೆ ಅರ್ಜೆಂಟ್​ ಮಾಡುತ್ತಿರುವುದೇಕೆ? ಎಂದು ವಿಧಾನ ಪರಿಷತ್​ ಸದಸ್ಯ ಜಗದೀಶ್​ ಶೆಟ್ಟರ್​ ಪ್ರಶ್ನಿಸಿದ್ದಾರೆ.

Former CM Jagadish Shettar
ಮಾಜಿ ಸಿಎಂ ಜಗದೀಶ್ ಶೆಟ್ಟರ್
author img

By

Published : Aug 12, 2023, 5:11 PM IST

Updated : Aug 12, 2023, 8:24 PM IST

ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಪೇಸಿಎಂ ಕಾಂಗ್ರೆಸ್​ನವರ ಕಾರ್ಬನ್ ಕಾಪಿ. ಅವರತ್ತು ಕಾಂಗ್ರೆಸ್​ನವರು ಮಾಡಿದ್ದನ್ನೇ ಬಿಜೆಪಿಯವರು ಇವತ್ತು ಕಾಪಿ ಮಾಡುತ್ತಿದ್ದಾರೆ. ಪೇಸಿಎಂ ಅವತ್ತಿಗೆ ಲೇಟೆಸ್ಟ್ ಆಗಿತ್ತು. ಈಗ ಪೇಸಿಎಂಗೆ ಅರ್ಥವೇ ಇಲ್ಲ. ಜನ‌ ಅದನ್ನು ನಂಬಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಟಾಂಗ್ ನೀಡಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ ನಾಲ್ಕು ವರ್ಷಗಳ ಬಳಿಕ ಅಭಿಯಾನ ಆರಂಭವಾಗಿತ್ತು. ಆದರೆ ಕಾಂಗ್ರೆಸ್​ ಬಂದ ಮೂರು ತಿಂಗಳಲ್ಲಿ ಬಿಜೆಪಿಯವರು ಮಾಡ್ತಾರೆ ಅಂದ್ರೆ ಅದಕ್ಕೆ ಅರ್ಥ ಇಲ್ಲ. ಬಿಜೆಪಿಯಲ್ಲಿದ್ದಾಗ ಎಲ್ಲ‌ ವಿಷಯಗಳನ್ನು ನಾನು ಕೋರ್ ಕಮಿಟಿಯಲ್ಲಿ ಹೇಳಿದ್ದೆ. ಹೊರಗಡೆ ಹೇಳೋಕೆ ಆಗದ ವಿಷಯವನ್ನು ಹೇಳಿದ್ದೆ, ಆದ್ರೆ ಅವರು ತಿಳಿದುಕೊಳ್ಳಲಿಲ್ಲ ಎಂದರು.

ಲೋಕಸಭೆ ಚುನಾವಣೆಗೆ ನನಗೆ ಯಾವ ಟಾಸ್ಕ್ ಕೊಟ್ಟಿಲ್ಲ: ದೆಹಲಿ ಸಭೆಗೆ ನಾನು ಕೂಡ ಹೋಗಿದ್ದೆ. ಖುದ್ದು ರಾಹುಲ್ ಗಾಂಧಿ ಅವರೇ ಮೂರು ಗಂಟೆ ನಮ್ಮ ಜೊತೆ ಚರ್ಚೆ ಮಾಡಿದ್ದರು. ಲೋಕಸಭೆಯಲ್ಲಿ ಹೇಗೆ ನಾವು ಗೆಲ್ಲಬೇಕು ಅನ್ನೋದರ ಬಗ್ಗೆ ಚರ್ಚೆ ಆಯ್ತು. ಗ್ಯಾರಂಟಿ ಅನುಷ್ಠಾನದ ಬಗ್ಗೆಯೂ ಚರ್ಚೆ ಆಗಿದೆ. ರಾಜ್ಯ ರಾಜಕಾರಣದ ಬಗ್ಗೆ ಅವಲೋಕನ ಮಾಡಿ ರಾಹುಲ್ ಗಾಂಧಿ ತಿಳಿದುಕೊಂಡಿದ್ದಾರೆ. ನನಗೆ ಯಾವ ಟಾಸ್ಕ್ ಕೊಟ್ಟಿಲ್ಲ. ಕೆಲ ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಎಲ್ಲರದ್ದೂ ಒಂದೇ ಉದ್ದೇಶ, ಲೋಕಸಭೆಯಲ್ಲಿ ನಾವು 15 ರಿಂದ 20 ಸೀಟ್ ಗೆಲ್ಲಬೇಕು ಅನ್ನೋದು. ಬಿಜೆಪಿ ದಿನದಿಂದ ದಿನಕ್ಕೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ಶೆಟ್ಟರ್​ ಅಭಿಪ್ರಾಯಪಟ್ಟರು.

ಬಿಜೆಪಿ ಲೀಡರ್ ಲೆಸ್ ಪಾರ್ಟಿ ಆಗಿದೆ. ಮೂರು ತಿಂಗಳಾದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗುತ್ತಿಲ್ಲ. ಬಿಜೆಪಿಯ ದಯನೀಯ ಪರಿಸ್ಥಿತಿ ಬಗ್ಗೆಯೂ ಚರ್ಚೆ ಆಗಿದೆ. ನಾನು ಯಾವುದೇ ಕಂಡೀಷನ್ ಹಾಕಿಲ್ಲ. ನಾನು ನನಗೆ ಸೀಟ್ ಬೇಕು ಎನ್ನುವ ಯಾವ ಬೇಡಿಕೆಯನ್ನೂ ಇಟ್ಟಿಲ್ಲ. ಬಿಜೆಪಿ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಬಗ್ಗೆ ಚರ್ಚೆ ಆಗಿಲ್ಲ ಎಂದು ಶೆಟ್ಟರ್​ ಸ್ಪಷ್ಟಪಡಿಸಿದರು.

ಬೊಮ್ಮಾಯಿ ಅವರಿದ್ದಾಗ ಬೇಕಾಬಿಟ್ಟಿ ಕಾಮಗಾರಿ ಮಂಜೂರು ಮಾಡಿದ್ದಾರೆ. ಇದಕ್ಕೆ ಹಣಕಾಸು ಇಲಾಖೆಯ ಒಪ್ಪಿಗೆ ಇರಲಿಲ್ಲ. ಕಾಂಗ್ರೆಸ್​ ಸರ್ಕಾರ ಬಂದು ಮೂರು ತಿಂಗಳಾಗಿದೆ ಅಷ್ಟೇ. ಸರ್ಕಾರ ಬಂದು ಮೂರೇ ತಿಂಗಳಿಗೆ ಗುತ್ತಿಗೆದಾದರು ಬಿಲ್​ ಜಾರಿ ಮಾಡುವಂತೆ ಹಠ ಹಿಡಿದಿದ್ದಾರೆ. ಗುತ್ತಿಗೆದಾರರ ಬಿಲ್ ಬಾಕಿ ಇರೋದು ಕಳೆದ ಸರ್ಕಾರದ್ದು. ಇವಾಗ ಕಾಂಗ್ರೆಸ್​ ಸರ್ಕಾರದ ಮೇಲೆ ಆಪಾದನೆ ಮಾಡೋದು ದುರುದ್ದೇಶ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ. ಈಗ ಇರುವ ಪೆಂಡಿಂಗ್​ ಬಿಲ್​ಗಳೆಲ್ಲ ಬಿಜೆಪಿ ಸರ್ಕಾರದಲ್ಲಿನ ರಾಡಿ. ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಕಾಮಗಾರಿ ಬಾಕಿ‌ ಇಲ್ಲ. ಬಿಜೆಪಿ‌ ಸರ್ಕಾರದ ರಾಡಿನೇ ಇದೆಲ್ಲ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರಿಂದ ಮಾತ್ರ ಕಮಿಷನ್ ಆರೋಪ: ಡಿಸಿಎಂ ಡಿ ಕೆ ಶಿವಕುಮಾರ್

Last Updated : Aug 12, 2023, 8:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.