ETV Bharat / state

ಹುಬ್ಬಳ್ಳಿ ಲೈಫ್​​ಲೈನ್ ಆಸ್ಪತ್ರೆ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾವನಪ್ಪಿಲ್ಲ: ಡಿಹೆಚ್​ಒ ಸ್ಪಷ್ಟನೆ

ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ 30 ಜಂಬೂ ಸಿಲಿಂಡರ್ ಇವೆ. 2 ಕೆಎಲ್ ಸಾಮರ್ಥ್ಯದ ಒಂದು ಆಕ್ಸಿಜನ್ ಕಂಟೇನರ್ ಇದೆ. ಹಾಗೂ ನೈಸರ್ಗಿಕವಾಗಿ ಗಾಳಿ ಬಳಸಿಕೊಂಡು ಪ್ರತಿ ನಿಮಿಷಕ್ಕೆ‌ 85 ಸಾವಿರ ಲೀಟರ್‌ ಆಕ್ಸಿಜನ್ ಉತ್ಪಾದಿಸುವ‌ ಘಟಕ ಇದೆ. ಹೀಗಾಗಿ ಇದು ಆಕ್ಸಿಜನ್ ಕೊರತೆಯಿಂದ ಉಂಟಾದ ಸಾವಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದಿದ್ದಾರೆ.

ಹುಬ್ಬಳ್ಳಿ ಲೈಫ್​​ಲೈನ್ ಆಸ್ಪತ್ರೆ
ಹುಬ್ಬಳ್ಳಿ ಲೈಫ್​​ಲೈನ್ ಆಸ್ಪತ್ರೆ
author img

By

Published : May 4, 2021, 9:59 PM IST

ಧಾರವಾಡ: ಹುಬ್ಬಳ್ಳಿಯ ಲೈಫ್ ಲೈನ್ ಆಸ್ಪತ್ರೆಯಲ್ಲಿ ಬಹುದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಮಹಿಳೆ ಹಾಗೂ ಮೂವರು ಪುರುಷರು ಸೇರಿ 5 ಜನ ಕೋವಿಡ್ ಸೋಂಕಿತರು ಇಂದು ಸಂಜೆ ಮೃತರಾಗಿದ್ದು, ಇದಕ್ಕೆ ಆಕ್ಸಿಜನ್ ಕೊರತೆ ಕಾರಣವಲ್ಲ. ಆಸ್ಪತ್ರೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಆಕ್ಸಿಜನ್ ಸೌಲಭ್ಯವಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು,‌ ಮಾಹಿತಿ ತಿಳಿದ ತಕ್ಷಣ ಸ್ವತಃ ಬಂದು ಆಸ್ಪತ್ರೆಯಲ್ಲಿ ಪರಿಶೀಲನೆ‌ ಮಾಡಲಾಗಿದ್ದು, ಆಕ್ಸಿಜನ್ ಕೊರತೆ ಆಗಿರುವುದು ಕಂಡಿಬಂದಿಲ್ಲ, ಲೈಫ್ ಲೈನ್ ಆಸ್ಪತ್ರೆಯಲ್ಲಿ ಒಟ್ಟು 21 ಜನ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಆಕ್ಸಿಜನ್ ಇರುವ 30 ಜಂಬೂ ಸಿಲಿಂಡರ್ ಇವೆ. 2 ಕೆಎಲ್ ಸಾಮರ್ಥ್ಯದ ಒಂದು ಆಕ್ಸಿಜನ್ ಕಂಟೇನರ್ ಇದೆ. ಹಾಗೂ ನೈಸರ್ಗಿಕವಾಗಿ ಗಾಳಿ ಬಳಸಿಕೊಂಡು ಪ್ರತಿ ನಿಮಿಷಕ್ಕೆ‌ 85 ಸಾವಿರ ಲೀಟರ್‌ ಆಕ್ಸಿಜನ್ ಉತ್ಪಾದಿಸುವ‌ (O2 ಕಾನ್ಸನ್ ಟ್ರೇಟೆಡ್) ಘಟಕವನ್ನು ಲೈಫ್ ಲೈನ್ ಆಸ್ಪತ್ರೆ ಹೊಂದಿದೆ.

ಅಲ್ಲದೇ ಪ್ರತಿ ಐಸಿಯುದಲ್ಲಿ ಆಕ್ಸಿಜನ್ ಕೊರತೆ ಉಂಟಾದಲ್ಲಿ ಎಚ್ಚರಿಸಲು ಅಲಾರಮಿಂಗ್ ಸಿಸ್ಟಮ್‌ ಸಹ ಅಳವಡಿಸಲಾಗಿದೆ. ಆದ್ದರಿಂದ ಇಂದು ಸಂಭವಿಸಿರುವ ಕೋವಿಡ್ ಸೋಂಕಿತರ ಸಾವಿಗೆ ಆಕ್ಸಿಜನ್ ಕೊರತೆ ಕಾರಣವಲ್ಲ ಎಂಬುದು‌ ಪ್ರಾಥಮಿಕ‌ ತನಿಖೆಯಿಂದ ತಿಳಿದು ಬಂದಿದೆ.

ಮೃತರ ಸಾವು ಕುರಿತು ಡೆತ್ ಅಡಿಟ್ ಕಮಿಟಿಯಿಂದ ತನಿಖೆ ಮಾಡಲಾಗುವುದು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಯಶವಂತ ಮದೀನಕರ ಅವರು ಪ್ರಕಟಣೆಯಲ್ಲಿ ‌ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲೂ ಆಕ್ಸಿಜನ್ ಕೊರತೆಯಿಂದ ಉಸಿರು ಚೆಲ್ಲಿದ್ರಾ ಐವರು ಸೋಂಕಿತರು!?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.