ETV Bharat / state

ನಿಖಿಲ್‌ ಕುಂದಗೋಳ ಆತ್ಮಹತ್ಯೆ ‌ಪ್ರಕರಣ: ನ್ಯಾಯ ಒದಗಿಸುವಂತೆ ಕುಟುಂಬಸ್ಥರ ಆಗ್ರಹ - ಹುಬ್ಬಳ್ಳಿ ಆತ್ಮಹತ್ಯೆ ಕೇಸ್

ನಿಖಿಲ್ ಕುಂದಗೋಳ ಆತ್ಮಹತ್ಯೆ ಪ್ರಕರಣದಲ್ಲಿ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದರು.

ನಿಖಿಲ್‌ ಕುಂದಗೋಳ ಆತ್ಮಹತ್ಯೆ ‌ಪ್ರಕರಣ
ನಿಖಿಲ್‌ ಕುಂದಗೋಳ ಆತ್ಮಹತ್ಯೆ ‌ಪ್ರಕರಣ
author img

By ETV Bharat Karnataka Team

Published : Nov 7, 2023, 9:26 PM IST

Updated : Nov 7, 2023, 10:29 PM IST

ಹುಬ್ಬಳ್ಳಿ: ನಿಖಿಲ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಮಗೆ ಸೂಕ್ತ ನ್ಯಾಯ‌ ಒದಗಿಸಬೇಕು.‌ ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳಾದ ಸಾತೇನಹಳ್ಳಿ, ಜಯಶ್ರೀ ಅವರನ್ನು ಅಮಾನತು ಮಾಡಬೇಕು ಹಾಗೂ ನಿಖಿ‌ಲ್ ಪತ್ನಿ ಮನೆಯವರನ್ನು ಕೂಡಲೇ ಬಂಧಿಸಬೇಕು ಎಂದು ನಿಖಿಲ್ ಕುಂದಗೋಳ ಕುಟುಂಬಸ್ಥರು ಒತ್ತಾಯಿಸಿದರು.

ನಗರಲ್ಲಿಂದು ನಿಖಿಲ್ ತಾಯಿ ಗೀತಾ ಕುಂದಗೋಳ, ಸಹೋದರ ರಘುವೀರ್ ಕುಂದಗೋಳ ಹಾಗೂ ತಂದೆ ಮೋಹನ್ ಕುಂದಗೋಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೌಟುಂಬಿಕ ಜಗಳವನ್ನು ನಾವು ಹಿರಿಯ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುತ್ತಿದ್ದೆವು . ಆದರೆ ಕೇಶ್ವಾಪೂರ ಠಾಣೆಯ ಇನ್ಸ್​ಪೆಕ್ಟರ್ ಯು ಹೆಚ್ ಸಾತೇನಹಳ್ಳಿ ಹಾಗೂ ಎಎಸ್​​ಐ ಜಯಶ್ರೀ ಮಧ್ಯಸ್ಥಿಕೆ ವಹಿಸಿ ನಿಖಿಲ್ ಹಾಗೂ ನಿಖಿಲ್ ಪತ್ನಿಗೆ ವಿಚ್ಛೇದನ ಕೊಡಿಸಲು ಮುಂದಾಗಿದ್ದರು. ನಮ್ಮ ಕೌಟುಂಬಿಕ ಕಲಹವನ್ನು ಸರಿ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದೀವಿ. ಆದರೆ ಪೊಲೀಸರು ಹಣಕ್ಕೆ ಬೇಡಿಕೆ ಇಟ್ಟು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

ಪೊಲೀಸರು ನಮ್ಮ ಮಗನಿಗೆ ಹಾಗೂ ಕುಟುಂಬಕ್ಕೆ ಮಾನಸಿಕ ‌ಕಿರುಕುಳ ನೀಡಿದ್ದಾರೆ. ಅಲ್ಲದೇ ನಮಗೂ ಕೂಡ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಮತ್ತು ನಿಖಿಲ್ ಪತ್ನಿ ಮನೆಯವರಿಂದಲೇ ನಮ್ಮ ಪುತ್ರ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆರೋಪಿಸಿ, ಕೂಡಲೇ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದರು.

ನಮ್ಮ ಮಗನಿಂದ ನಮ್ಮ ಮನೆಗೆ ಬೆಳಕು. ಆದ್ರೆ ನಮ್ಮ ಮಗನ ಅಗಲಿಕೆಯಿಂದಾಗಿ ಕುಗ್ಗಿ ಹೋಗಿದ್ದೇವೆ. ನಮಗೆ ಆದ ಅನ್ಯಾಯ ಯಾರಿಗೂ ಆಗಬಾರದು, ಪೊಲೀಸ್ ಕಮೀಷನರ್ ಅವರು ನಮಗೆ ನ್ಯಾಯ ನೀಡಬೇಕು ಎಂದು ಒತ್ತಾಯಿಸಿದರು.

ಕೇಶ್ವಾಪುರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ವಿರುದ್ಧ ಮತ್ತೊಂದು ಆರೋಪ: ನಿಖಿಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೇಶ್ವಾಪುರ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಸಾತೇನಹಳ್ಳಿ ಹಾಗೂ ಎಎಸ್​​ಐ ವಿರುದ್ಧ ದೂರು ದಾಖಲಾಗಿದೆ. ಈ ಬೆನ್ನಲ್ಲೇ ಇನ್ಸ್​ಪೆಕ್ಟರ್ ಸಾತೇನಹಳ್ಳಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ.

ಕೇಶ್ವಾಪುರ ನಿವಾಸಿ ಹರೀಶ್ ಪೂಜಾರಿ ಅವರು ಸಾತೇನಹಳ್ಳಿ ವಿರುದ್ಧ ಆರೋಪ ಮಾಡಿದ್ದಾರೆ. ನಮ್ಮ ಕೌಟುಂಬಿಕ ಜಗಳದಲ್ಲಿ ಇನ್ಸ್​ಪೆಕ್ಟರ್ ಮಧ್ಯ ಪ್ರವೇಶಿಸಿ ಬೆದರಿಕೆ ಹಾಕಿದ್ದಾರೆ ಎಂದು ಹರೀಶ್ ಪೂಜಾರಿ ದೂರಿದ್ದಾರೆ.

ಈ ಬಗ್ಗೆ ನಗರ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ‌ನೀಡಿದ್ದು, ಹರೀಶ್ ಕುಟುಂಬದ ಕುರಿತ ಕೇಸ್ ನಮ್ಮ ಗಮನಕ್ಕೆ ಬಂದಿದೆ. ಈ‌ ಕುರಿತಂತೆ ದೂರು ದಾಖಲಾಗಿದೆ.‌ ಅನ್ಯಾಯಕೊಳ್ಳಗಾದ ಕುಟುಂಬಕ್ಕೆ ನ್ಯಾಯ ದೊರಕಿಸುವ ಕೆಲಸ ಮಾಡಲಾಗುವದು. ಇನ್ಸ್​ಪೆಕ್ಟರ್ ಸಾತೇನಹಳ್ಳಿಯವರ ವಿರುದ್ಧ ನಿಖಿಲ್ ಆತ್ಮಹತ್ಯೆ ಕುರಿತಂತೆ ದೂರು ದಾಖಲಾಗಿದೆ. ಇದರ ಬಗ್ಗೆಯೂ ವಿಚಾರಣೆ ನಡೆದಿದೆ. ಇವೆರಡೂ ಪ್ರಕರಣಗಳ ಬಗ್ಗೆ ಚಾರ್ಜಶೀಟ್ ಸಲ್ಲಿಕೆಯಾಗಿದ್ದು, ಈಗ ಕೋರ್ಟ್ ಮಟ್ಟದಲ್ಲಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಕೌಟುಂಬಿಕ ಕಲಹ, ಯುವಕ ಆತ್ಮಹತ್ಯೆ; ಹುಬ್ಬಳ್ಳಿಯಲ್ಲಿ ಇನ್​ಸ್ಪೆಕ್ಟರ್ ಸೇರಿ 8 ಜನರ ವಿರುದ್ಧ ಕೇಸ್

Last Updated : Nov 7, 2023, 10:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.