ಧಾರವಾಡ: ಲಾಕ್ಡೌನ್ ಎಫೆಕ್ಟ್ ಹಿನ್ನೆಲೆ ಎನ್ಜಿಒವೊಂದರಿಂದ ಬಡವರಿಗೆ, ಪೊಲೀಸರಿಗೆ ಹಾಗೂ ರೋಗಿಗಳಿಗೆ ಪ್ರತಿದಿನ 3 ಸಾವಿರ ಚಪಾತಿಗ ವಿತರಣೆ ಮಾಡಲಾಗುತ್ತಿದೆ.
ಧಾರವಾಡದ ಹೆಚ್.ಕೆ.ಸುಮಂಗಲಾ ಚಾರಿಟೇಬಲ್ ಟ್ರಸ್ಟ್ನಿಂದ ಸಾಮಾಜಿಕ ಕಾರ್ಯ ಮಾಡಲಾಗುತ್ತಿದ್ದು, ದಿನಕ್ಕೆ 3 ಸಾವಿರ ಚಪಾತಿ ಹಾಗೂ ನೂರಾರು ಮಾಸ್ಕ್ ವಿತರಣೆ ಮಾಡಲಾಗ್ತಿದೆ. ಇಂದು ಧಾರವಾಡದ ಡಿವೈಎಸ್ಪಿ ಕಚೇರಿ ಪೊಲೀಸರಿಗೆ ಹಾಗೂ ಡಿಮಾನ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಪಾತಿ ಹಾಗೂ ಮಾಸ್ಕ್ ವಿತರಣೆ ಮಾಡಲಾಯಿತು.
ಬಡವರ ಪರವಾಗಿ ಸದಾ ಕಾಲ ನಮ್ಮ ಸೇವೆ ನಿರಂತರವಾಗಿ ನಡೆಯುತ್ತದೆ ಎಂದು ಎನ್ಜಿಒ ಚೇರ್ಮನ್ ಅರವಿಂದ ಹೇಳಿದ್ದಾರೆ.