ETV Bharat / state

ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ‌ ಶುರು, ಸಭಾಪತಿ ಮಾಡುವುದು ಪಕ್ಷಕ್ಕೆ ಬಿಟ್ಟದ್ದು: ಜಗದೀಶ್ ಶೆಟ್ಟರ್

''ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ‌ ಶುರುವಾಗಿದೆ. ಸಭಾಪತಿ ಮಾಡುವುದು ಕಾಂಗ್ರೆಸ್​ ಪಕ್ಷಕ್ಕೆ ಬಿಟ್ಟ ವಿಚಾರವಾಗಿದೆ'' ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದರು.

Jagdish Shettar
ಜಗದೀಶ್ ಶೆಟ್ಟರ್
author img

By

Published : Jun 24, 2023, 3:40 PM IST

ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಮಾತನಾಡಿದರು.

ಹುಬ್ಬಳ್ಳಿ: ''ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು, ನನ್ನ ರಾಜಕೀಯ ಜೀವನದಲ್ಲಿ ಹೊಸ ಅಧ್ಯಾಯ‌. ಮುಂದಿನ ದಿನಮಾನಗಳಲ್ಲಿ ಸಭಾಪತಿ ಮಾಡುವುದು ಕಾಂಗ್ರೆಸ್​ಗೆ ಬಿಟ್ಟ ವಿಚಾರ'' ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂಗಿತ ವ್ಯಕ್ತಪಡಿಸಿದ್ದಾರೆ.

ನಗರಕ್ಕೆ ವಿಧಾನ ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ಆಗಮಿಸಿದ ಬಳಿಕ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ವಿಧಾನ ಪರಿಷತ್​ನಲ್ಲಿ ಜನಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನನಗೊಂದು ಅವಕಾಶ ಮಾಡಿಕೊಟ್ಟಿದ್ದು, ಕಾಂಗ್ರೆಸ್ ಪಕ್ಷದ ರಾಷ್ಟ್ರ ಹಾಗೂ ರಾಜ್ಯದ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ'' ಎಂದರು.

''ವಿಧಾನ ಪರಿಷತ್ ಸದಸ್ಯ ಮಾಡುವಾಗ ಪಕ್ಷ ತಮಗೆ ಇನ್ನೂ ಉನ್ನತ ಸ್ಥಾನಮಾನಗಳನ್ನು ನೀಡುತ್ತೆ ಎಂದು ಹೇಳಿತ್ತು. ಈ ನಿಟ್ಟಿನಲ್ಲಿ ನನಗೆ ಸಭಾಪತಿ ನೀಡುವ ವಿಷಯವನ್ನು ನಮ್ಮ ಪಕ್ಷ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಕಾದು ನೋಡೋಣ'' ಎಂದು ತಿಳಿಸಿದರು.

''ಲೋಕಸಭಾ ಚುನಾವಣೆಯಲ್ಲಿ ಯಾವುದೇ ಜವಾಬ್ದಾರಿ ನೀಡಿದರೂ ನಾನು ಸಿದ್ಧನಿದ್ದೇನೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಈಗಾಗಲೇ ನಮ್ಮ ಪಕ್ಷದ ವರಿಷ್ಠರ ಜೊತೆಗೆ ಚರ್ಚೆ ಮಾಡಿದ್ದೇನೆ. ಎಲ್ಲೇ ಪ್ರವಾಸ ಮಾಡಿ ಎಂದರೂ ನಾನು ನನ್ನ ಸಮಯವನ್ನು ಕೊಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಗೆಲ್ಲಲು ನಾನೂ ಪ್ರಯತ್ನ ಮಾಡುತ್ತೇನೆ. ಚುನಾವಣೆಯಲ್ಲಿ ನಿಮ್ಮ ಉಪಯೋಗ ತೆಗೆದುಕೊಳ್ಳುತ್ತೇವೆ ಎಂದು ನಮ್ಮ ಕಾಂಗ್ರೆಸ್ ಪಕ್ಷ ಹೇಳಿದೆ.

ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ 11 ಲೋಕಸಭಾ ಕ್ಷೇತ್ರಗಳು ಇವೆ. ಅದರಲ್ಲಿ 6 ರಿಂದ 7 ಕ್ಷೇತ್ರದಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ನಮಗೆ ಈಗಾಗಲೇ ಜನರಿಂದ ಬೆಂಬಲ ಸಿಗಲಿದೆ'' ಎಂದು ಶೆಟ್ಟರ್​ ವಿಶ್ವಾಸ ವ್ಯಕ್ತಪಡಿಸಿದರು. ''ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಪರಿಷತ್​ನಲ್ಲಿ ಚರ್ಚೆ ಮಾಡುತ್ತೇನೆ. ಈ ಭಾಗದ ಅನೇಕ ಅಭಿವೃದ್ಧಿ ಕೆಲಸ ಕಾರ್ಯಗಳು ನೆನಗುದಿಗೆ ಬಿದ್ದಿವೆ. ಅವುಗಳನ್ನು ಆದಷ್ಟು ಬೇಗ ಪರಿಹಾರ ಮಾಡಲು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ಮಾಡುತ್ತೇನೆ'' ಎಂದು ಹೇಳಿದರು.

ನಾವು ಸೋತ ಬಿಜೆಪಿ ಅಭ್ಯರ್ಥಿಗಳನ್ನು ಸೆಳೆಯುತ್ತಿಲ್ಲ- ಶೆಟ್ಟರ್: ''ಬಿಜೆಪಿಯಲ್ಲಿ ಇದೀಗ ಬಹಳಷ್ಟು ಅಸಮಾಧಾನ ವ್ಯಕ್ತವಾಗಿದ್ದು, ಅಸಮಾಧಾನ ಯಾವಾಗ ಸ್ಫೋಟ ಆಗುತ್ತೊ ಎಂದು ಗೊತ್ತಾಗಲ್ಲ. ನಾವು ಸೋತ ಬಿಜೆಪಿ ಅಭ್ಯರ್ಥಿಗಳನ್ನು ಸೆಳೆಯುತ್ತಿಲ್ಲ'' ಎಂದ ಶೆಟ್ಟರ್​, ''ಒಳ ಒಪ್ಪಂದ ಮಾಡಿದವರು ಯಾರು? ಅವರ ಹೆಸರನ್ನು ಸಂಸದ ಪ್ರತಾಪ್ ಸಿಂಹ ಬಹಿರಂಗಪಡಿಸಲಿ. ಪಕ್ಷದ ನಾಲ್ಕು ಗೋಡೆಗಳ ಮಧ್ಯ ಚರ್ಚೆ ಮಾಡುವ ವಿಚಾರವನ್ನು ಅವರು ಬಹಿರಂಗ ಮಾಡಿದ್ದಾರೆ. ಬಹಿರಂಗವಾಗಿ ಅವರ ಹೆಸರನ್ನು ಹೇಳಿ ಬಿಡಲಿ. ಅವರು ಯಾರು ಎಂಬುದು ಜನರಿಗೆ ಗೊತ್ತಾಗಲಿ'' ಎಂದು ಸವಾಲ್ ಹಾಕಿದರು.

ಇದನ್ನೂ ಓದಿ: ನಾವು ಬಿಬಿಎಂಪಿ ಚುನಾವಣೆ ಮಾಡಲೇಬೇಕು.. ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಡಿಸಿಎಂ ಡಿಕೆಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.