ETV Bharat / state

ಲಸಿಕೆ ಬಗ್ಗೆ ತಪ್ಪು ಮಾಹಿತಿ ಹರಡಿದ ಪರಿಣಾಮ ಕಂಪನಿಗಳು ಪ್ರೊಡಕ್ಷನ್ ಕಡಿಮೆ ಮಾಡಿವೆ: ಪ್ರಹ್ಲಾದ್ ಜೋಶಿ - ಮೋದಿ ಸರ್ಕಾರ

ಕೋರ್ಟ್ ನಿಯಮ ಜಾರಿಗೆ ತರುವ ಪೂರ್ವದಲ್ಲಿಯೇ ಮೋದಿ ಸರ್ಕಾರ ತಮ್ಮ ಕೆಲಸವನ್ನು ಮಾಡುತ್ತಿದೆ. ಯುದ್ದೋಪಾದಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಕೋವಿಡ್ ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನವನ್ನು ಕೂಡಾ ಕೃಗೊಂಡಿದ್ದೇವೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ
author img

By

Published : May 14, 2021, 4:42 PM IST

Updated : May 14, 2021, 6:05 PM IST

ಹುಬ್ಬಳ್ಳಿ: ಕೋವಿಡ್ ವ್ಯಾಕ್ಸಿನ್ ಭಾರತದಲ್ಲಿ ತಯಾರು ಮಾಡಲಾಗುತ್ತಿತ್ತು. ಆದರೆ, ಕೆಲವರು ವ್ಯಾಕ್ಸಿನ್ ಕುರಿತು ತಪ್ಪಾಗಿ ಮಾತನಾಡಿ, ಜನರ ದಾರಿ ತಪ್ಪಿಸುವ ಕೆಲಸ ಮಾಡಿದರು‌‌. ಇದರ ಪರಿಣಾಮ ಕಂಪನಿಗಳು ಪ್ರೊಡಕ್ಷನ್ ಕಡಿಮೆ ಮಾಡಿದವು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ತಪ್ಪು ತಿಳಿವಳಿಕೆಯ ಪರಿಣಾಮ ಪ್ರೊಡಕ್ಷನ್ ಮೇಲೆ ಪ್ರಭಾವ ಬೀರಿದೆ. ಜುಲೈ ತಿಂಗಳಲ್ಲಿ ಎಲ್ಲರಿಗೂ ವ್ಯಾಕ್ಸಿನ್ ದೊರಕುತ್ತದೆ ಎಂದರು. ನಗರದ ಪ್ರವಾಸಿ ಮಂದಿರದಲ್ಲಿ ಗಣಿ ಮಂತ್ರಾಲಯದ ಅಧೀನದಲ್ಲಿ ಬರುವ ಸಾರ್ವಜನಿಕ ಸ್ವಾಮ್ಯದ ಎಂಇಎಲ್ ಕಂಪನಿಯವರು ನೀಡಿರುವ 30 ಆಕ್ಸಿಜನ್ ಕಾನ್ಸನ್ಟ್ರೇಟರ್​ಗಳನ್ನು ಜಿಲ್ಲಾಡತಕ್ಕೆ ಹಸ್ತಾಂತರಿಸಿದ್ದಾರೆ.

ವ್ಯಾಕ್ಸಿನ್ ಡ್ರೈವ್ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ

ಇದೀಗ ರಾಜ್ಯದಲ್ಲಿ 1.9 ಕೋಟಿ ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಕೋರ್ಟ್ ನಿಯಮ ಜಾರಿಗೆ ತರುವ ಪೂರ್ವದಲ್ಲಿಯೇ ಮೋದಿ ಸರ್ಕಾರ ತಮ್ಮ ಕೆಲಸವನ್ನು ಮಾಡುತ್ತಿದೆ. ಯುದ್ದೋಪಾದಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಕೋವಿಡ್ ನಿಯಂತ್ರಣಕ್ಕೆ ಎಲ್ಲ ರೀತಿಯ ಪ್ರಯತ್ನವನ್ನು ಕೂಡಾ ಕೃಗೊಂಡಿದ್ದೇವೆ. ಆಕ್ಸಿಜನ್ ಕೊರತೆಯಾಗದಂತೆ ಪ್ರಯತ್ನ ಮಾಡಿದ್ದೇವೆ.

80 ಆಕ್ಸಿಜನ್ ಕಾನ್ಸನ್ಟ್ರೇಟರ್​​ ಖರೀದಿಸಲಾಗಿದೆ. ಅದರಲ್ಲಿ 30ನ್ನು ಜಿಲ್ಲಾಡಳಿತಕ್ಕೆ ವಿತರಿಸಲಾಗಿದ್ದು, ಇವುಗಳನ್ನು ಜಿಲ್ಲಾಡಳಿತ ಆಸ್ಪತ್ರೆಗಳಲ್ಲಿ ಉಪಯೋಗಕ್ಕೆ ನೀಡಲಿದೆ. ಇದರಿಂದ ಆಕ್ಸಿಜನ್ ಸಮಸ್ಯೆಯನ್ನು ತಾತ್ಕಾಲಿಕವಾಗಿ ನೀಗಿಸಬಹುದಾಗಿದೆ. ಒಂದಕ್ಕೆ 53 ಸಾವಿರ ರೂ. ಬೆಲೆ ನಿಗದಿ ಆಗಿದ್ದು, 5 ಲೀಟರ್​ನಲ್ಲಿ ಇಬ್ಬರಿಗೆ ನಾವು ಚಿಕಿತ್ಸೆ ಮಾಡಬಹುದಾಗಿದೆ. ಮೊದಲು ಶೇ.1ರಷ್ಟು ಮಾತ್ರ ಮೆಡಿಕಲ್​ಗೆ ಬಳಕೆಯಾಗುತ್ತಿತ್ತು, ಆದರೆ, ಶೇ. 7ರಷ್ಟು ಬಳಕೆಯಾಗುತ್ತಿದೆ. 230 ಟ್ಯಾಂಕರ್​​ಗಳನ್ನ ವಾಯು ಮಾರ್ಗದ ಮೂಲಕ ತರಿಸಲಾಗಿದ್ದು,
ಭಾರತೀಯ ವಾಯು ಸೇನೆಯ ಮೂಲಕ 1,142 ಮೆಟ್ರಿಕ್ಟ್ ಟನ್ ಸಾಗಿಸಲಾಗಿದೆ. ಕೊರೊನಾ ಸಮಯದಲ್ಲಿ 40ಕ್ಕೂ ಹೆಚ್ಚು ದೇಶಗಳು ಸಹಾಯ ಮಾಡುತ್ತಿವೆ ಎಂದಿದ್ದಾರೆ.

ರಾಜ್ಯದ 28 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಉತ್ಪಾದನೆಗೆ ಅನುಮೋದನೆ ಕೊಟ್ಟಿದ್ದೇವೆ. 38 ಲಕ್ಷ ರೆಮ್​​ಡಿಸಿವಿರ್ ಉತ್ಪಾದನೆಯಾಗುತ್ತಿತ್ತು. ಇದೀಗ 1 ಕೋಟಿ ಉತ್ಪಾದನೆಗೆ ಏರಿಸಲಾಗಿದೆ. ಮೊದಲು ಬಂದ ಅಲೆ ರೀತಿಯಲ್ಲೇ 2ನೇ ಅಲೆ ಇರುತ್ತೆ ಅಂತ ಹೇಳಲಾಗಿತ್ತು. ಆದರೆ ಇಷ್ಟು ಪ್ರಮಾಣದಲ್ಲಿ ಏರಿಕೆ ಆಗುತ್ತದೆ ಅಂತ ಗೊತ್ತಿರಲಿಲ್ಲ. ಇಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಕೊರತೆಯಾಗುತ್ತೆ ಅಂತ ಯಾರು ಹೇಳಿರಲಿಲ್ಲ. ಫೆಬ್ರವರಿಯಲ್ಲಿ ಆರಂಭವಾದಾಗ ಈ ರೀತಿ ಆಕ್ಸಿಜನ್ ಬೇಕಾಗುತ್ತೆ ಅಂತ ಗೊತ್ತಿರಲಿಲ್ಲ ಎಂದರು.

ಇದನ್ನೂ ಓದಿ: ಅಥಣಿಯಲ್ಲಿ 50 ಹಾಸಿಗೆಯ ಕೋವಿಡ್ ಆಸ್ಪತ್ರೆ ಉದ್ಘಾಟಿಸಿದ ಡಿಸಿಎಂ ಲಕ್ಷ್ಮಣ್ ಸವದಿ

Last Updated : May 14, 2021, 6:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.