ಧಾರವಾಡ : ಲಾಕ್‌ಡೌನ್ ನಡುವೆಯೂ ನಿಜಾಮುದ್ದೀನ್ ಮದರಸಾದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿದ ಆರೋಪದ ಹಿನ್ನೆಲೆ 22 ಜನರ ಮೇಲೆ ಪ್ರಕರಣ ದಾಖಲಾಗಿದೆ.
ರಾಜನಗರದ ಶಿವಳ್ಳಿ ಪ್ಲಾಟ್‌ನಲ್ಲಿರುವ ಮದರಸಾದಲ್ಲಿ ರಂಜಾನ್ ಹಬ್ಬದಂದು 22 ಜನರು ಗುಂಪು ಸೇರಿ ಪ್ರಾರ್ಥನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಪ್ರಾರ್ಥನೆ ಸಲ್ಲಿಸಿದ 22 ಜನರ ಮೇಲೆ ಉಪನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಕೊರೊನಾ ಭೀತಿಯ ನಡುವೆಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ರಂಜಾನ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಮಸೀದಿ - ಮಂದಿರಗಳಲ್ಲಿ ಪ್ರಾರ್ಥನೆ ಹಾಗೂ ಜನ ಸೇರುವುದನ್ನು ನಿಷೇಧಿಸಿದ್ದರೂ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಸರ್ಕಾರದ ಆದೇಶ ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಲಾಗಿದೆ.