ಹುಬ್ಬಳ್ಳಿ: ನಗರದ ದುರ್ಗದ ಬೈಲ್ ಹಾಗೂ ಹಳೆ ಹುಬ್ಬಳ್ಳಿ ಮಾರುಕಟ್ಟೆ ನವೀಕರಣದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮುಂದೆ ಮಾರುಕಟ್ಟೆಯಲ್ಲಿರುವ ಅಂಗಡಿಗಳ ಮಾಲೀಕರು ಅಳಲು ತೋಡಿಕೊಂಡರು. ಸ್ಮಾರ್ಟ್ ಸಿಟಿ ಯೋಜನೆಯಡಿ ಡಿಪಿಆರ್ ತಯಾರು ಮಾಡುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ಈ ಯೋಜನೆ ಅಡಿ ನವೀಕರಣಕ್ಕಾಗಿ ಸ್ಥಳೀಯರ ಜೊತೆಗೆ ಸಭೆ ಮಾಡದೇ ಏಕಪಕ್ಷೀಯವಾಗಿ ಉಸ್ತುವಾರಿ ಸಚಿವರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದಾಗ ಅಂಗಡಿ ಮಾಲೀಕರು ಹಾಗೂ ಸಚಿವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದಿದ್ದರೇ ಹೋರಾಟ ನಡೆಸುವುದಾಗಿ ಸ್ಥಳೀಯ ಅಂಗಡಿ ಮಾಲೀಕರು ಎಚ್ಚರಿಕೆ ನೀಡಿದರು.