ETV Bharat / state

ಹುಬ್ಬಳ್ಳಿಯ ಸಿದ್ದಾರೂಢ ಮಠದಲ್ಲಿ ಲಕ್ಷದೀಪೋತ್ಸವ ವೈಭವ

ಉತ್ತರ ಕರ್ನಾಟಕದ ಜನರ ಆರಾಧ್ಯದೈವ, ಸಿದ್ದಾರೂಢರ ಮಠದಲ್ಲಿ ಕಾರ್ತಿಕ ಅಮಾವಾಸ್ಯೆಯ ಅಂಗವಾಗಿ ಸಂಭ್ರಮದ ಲಕ್ಷದೀಪೋತ್ಸವ ನೆರವೇರಿತು.

Lakshdeepotsava celebrated with grandeur at Siddharudh Mutt
ಸಿದ್ದಾರೂಢ ಮಠದಲ್ಲಿ ವೈಭವದಿಂದ ಜರುಗಿದ ಲಕ್ಷದೀಪೋತ್ಸ
author img

By

Published : Nov 24, 2022, 7:33 AM IST

ಹುಬ್ಬಳ್ಳಿ: ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಕಳೆಗುಂದಿದ್ದ ಸಿದ್ದಾರೂಢ ಮಠದಲ್ಲಿ ಈ ವರ್ಷ ಅದ್ದೂರಿಯಾಗಿ‌ ಲಕ್ಷದೀಪೋತ್ಸವ ಆಚರಿಸಲಾಯಿತು. ಭೂಮಿಯ ಕೈಲಾಸ ಎಂದೇ ಖ್ಯಾತಿ ಪಡೆದ ಸಿದ್ದಾರೂಢರ ಸನ್ನಿಧಿ ಕಾರ್ತಿಕ ಅಮವಾಸ್ಯೆಯ ಅಂಗವಾಗಿ ದೀಪಗಳ ಬೆಳಕಿನಲ್ಲಿ ಪ್ರಜ್ವಲಿಸಿತು‌. ಅಂಧಕಾರ ದೂರ ಮಾಡು, ಜ್ಞಾನದ ದೀಪವನ್ನು ಬದುಕಿನಲ್ಲಿ ಬೆಳಗಿಸು ಎಂದು ಲಕ್ಷಾಂತರ ಭಕ್ತರು ದೀಪ ಹಚ್ಚುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.

ಮಠದ ಆವರಣದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಲಕ್ಷ ದೀಪೋತ್ಸವಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಣ್ಣಿನ ಹಣತೆಯಲ್ಲಿ ಭಕ್ತರು ಎಣ್ಣೆ ಹಾಕಿ ದೀಪ ಹಚ್ಚಿ ಓಂಕಾರ ನಾದ ಮೊಳಗಿಸಿದರು. ಧಾರವಾಡ, ಹಾವೇರಿ, ಗದಗ ಹಾಗೂ ಬೆಳಗಾವಿ ಮೂಲಗಳಿಂದ ಭಕ್ತರು ಆಗಮಿಸಿದ್ದರು.

ಇದನ್ನೂ ಓದಿ: ಬೆಳಕಿನಲ್ಲಿ ಮಿನುಗುತ್ತಿರುವ ಅಯೋಧ್ಯೆ: ಇಲ್ಲಿದೆ ನೋಡಿ ದೀಪೋತ್ಸವದ ಸುಂದರ ಕ್ಷಣಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.