ಹುಬ್ಬಳ್ಳಿ: ಡಾ. ಗಿರಿಧರ್ ಕಜೆಯವರು ತಯಾರಿಸಿದ ಆಯುರ್ವೇದ ಔಷಧಿಯನ್ನು ಕೊರೊನಾ ಸೋಂಕಿತರಿಗೆ ನೀಡುವಂತೆ ಆಗ್ರಹಿಸಿ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, ಕಜೆಯವರ ಔಷಧಿಯಿಂದ 10ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಿದ್ದರೂ ಸರ್ಕಾರ ಆಯುರ್ವೇದಿಕ್ ಔಷಧಿಯನ್ನು ಸೋಂಕಿತರಿಗೆ ನೀಡಲು ಮೀನಾಮೇಷ ಎಣಿಸುತ್ತಿದೆ. ಇದರ ಹಿಂದೆ ಅಲೋಪಥಿಕ್ ಔಷಧಿಯ ಮಾಫಿಯಾ ಕೈವಾಡವಿದೆ ಎಂದು ಮುತಾಲಿಕ್ ಆರೋಪಿಸಿದರು.
ಆದರೆ ಸರ್ಕಾರ ಯಾವುದೇ ಮಾಫಿಯಾ ಒತ್ತಡಕ್ಕೆ ಒಳಗಾಗದೇ ಕಜೆಯವರು ತಯಾರಿಸಿದ ಆಯುರ್ವೇದ ಔಷಧಿಯನ್ನು ಸೋಂಕಿತರಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದರು.