ಧಾರವಾಡ: ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿರುವ ಶೆಟ್ಟಿ ಸಹೋದರರ ಮನೆಗಳ ಮೇಲೆ ನಿನ್ನೆ ಐಟಿ(ಆದಾಯ ತೆರಿಗೆ) ಇಲಾಖೆ ದಾಳಿ ನಡೆಸಿದ್ದು, ಇಂದು ಕೂಡ ವಿಚಾರಣೆ ಮುಂದುವರೆದಿದೆ. ನಿನ್ನೆ ತಡರಾತ್ರಿವರೆಗೆ ತೆರಿಗೆ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದರು.
ನಗರದ ದಾಸನಕೊಪ್ಪ ವೃತ್ತದ ಬಳಿಯ ಯು.ಬಿ.ಶೆಟ್ಟಿ ಮನೆ ಹಾಗೂ ವಿನಾಯಕ ನಗರದ ಸೀತಾರಾಮ ಶೆಟ್ಟಿ ಮನೆ ಮೇಲೆ ನಿನ್ನೆ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮನೆ ಹೊರಗೆ ಹಾಗೂ ಮನೆಯ ಆವರಣದಲ್ಲಿ ಪೊಲೀಸ್ ಕಾವಲು ಹಾಕಲಾಗಿತ್ತು. ಈಗ ಐವರು ಅಧಿಕಾರಿಗಳು ಸೀತಾರಾಮ ಶೆಟ್ಟಿ ನಿವಾಸಕ್ಕೆ ಆಗಮಿಸಿದ್ದಾರೆ. ಇಂದು ಸಹ ಆಸ್ತಿ ವಿವರವನ್ನು ಐಟಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಶೆಟ್ಟಿ ಬ್ರದರ್ಸ್ ಮನೆ ಮೇಲೆ IT ದಾಳಿ ಪ್ರಕರಣ: ತಡರಾತ್ರಿಯಾದ್ರೂ ದಾಖಲೆ ಪರಿಶೀಲನೆ