ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅವ್ಯಾಹತವಾಗಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ. ಶೂಟೌಟ್ಗಳು ನಡೆಯುತ್ತಿದ್ದರೂ ಪೊಲೀಸರು ಇದನ್ನು ನಿಯಂತ್ರಣ ಮಾಡುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಕಾರಣ ಅವರ ಬಳಿ ರಿವಾಲ್ವರ್ ಇಲ್ಲದಿರುವುದು.
ಹೌದು, ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರ ಟೊಂಕದಲ್ಲಿರಬೇಕಾಗಿದ್ದ ಸರ್ವಿಸ್ ರಿವಾಲ್ವರ್ ಮಾಯವಾಗಿವೆ. ಹೀಗಾಗಿ ಆರಕ್ಷಕರು ಪೇಪರ್ ಹುಲಿಯಾಗಿದ್ದಾರೆ. ಹುಬ್ಬಳ್ಳಿ ಪೊಲೀಸರ ಬಳಿ ರಿವಾಲ್ವರ್ಗಳೇ ಇಲ್ಲವಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪೊಲೀಸ್ ಅಧಿಕಾರಿಗಳು ರಿವಾಲ್ವರ್ಗಳನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಆದರೆ, ಇವರು ಕೆಲವೊಂದು ವೇಳೆ ಹೊರತುಪಡಿಸಿದ್ರೆ ಇನ್ನುಳಿದ ಸಮಯದಲ್ಲಿ ರಿವಾಲ್ವರ್ ಇರುವುದಿಲ್ಲ. ಅವುಗಳನ್ನು ಮನೆಯಲ್ಲೋ ಅಥವಾ ಆಫೀಸಿನಲ್ಲೋ ಇಟ್ಟು ಕಾನೂನು ಸುವ್ಯವಸ್ಥೆ ಕಾಪಾಡಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆ ಯಾವ ಪುಡಿ ರೌಡಿಗಳು ಇವರ ಮಾತಿಗೆ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.