ಹುಬ್ಬಳ್ಳಿ: ನೀರಿನ ವಿಚಾರವಾಗಿ ಸಂಚಾರಿ ಠಾಣೆಯಲ್ಲಿ ಹೆಡ್ ಕಾನ್ಸ್ಸ್ಟೇಬಲ್ ಹಾಗೂ ನೆರೆ ಮನೆಯವರ ನಡುವಿನ ಹೊಡೆದಾಟದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಕಳೆದ ಕೆಲ ದಿನಗಳ ಹಿಂದೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಡ್ ಕಾನ್ಸ್ಟೇಬಲ್ ಪುರಾಣಿಕಮಠ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇತ್ತ ಅವರ ನೆರೆ ಮನೆಯವರು ಪೇದೆ ನಮ್ಮಮೇಲೆ ಹಲ್ಲೆ ಮಾಡಿ ನಮಗಿಂತ ಮೊದಲು ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆರೋಪಿಸಿದ್ದರು. ಸದ್ಯ ಎರಡು ಕುಟುಂಬದ ಸದಸ್ಯರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೀರಿನ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ಆರಂಭವಾಗಿ ವಿಕೋಪಕ್ಕೆ ತಿರುಗಿತ್ತು. ಒಬ್ಬರಿಗೊಬ್ಬರು ಇಟ್ಟಿಗೆ ಮತ್ತು ರಾಡ್ನಿಂದ ಬಡಿದಾಡಿಕೊಂಡಿರುವ ದೃಶ್ಯಗಳು ಎದುರು ಮನೆಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಇದೇ ವಿಡಿಯೋ ಇಟ್ಟುಕೊಂಡು ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.