ETV Bharat / state

ಪಿಎಂ ಸ್ವನಿಧಿ ಯೋಜನೆಯಲ್ಲಿ ಮೊದಲ ಸ್ಥಾನ ಪಡೆದ ಹು-ಧಾ ಮಹಾನಗರ ಪಾಲಿಕೆ

author img

By

Published : Aug 31, 2020, 4:38 PM IST

ಕೇಂದ್ರ ಸರ್ಕಾರ ಪಿಎಂ‌ ಸ್ವನಿಧಿ ವಿಶೇಷ ಕಿರುಸಾಲ ಯೋಜನೆಯ ಮೂಲಕ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ನೇರವಾಗಲು ಮುಂದಾಗಿದೆ.‌ ಈ ಯೋಜನೆ ಕಾರ್ಯಗತಗೊಳಿಸುವಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೊದಲ ಸ್ಥಾನದಲ್ಲಿದೆ.

hubli-dharwad-palike-stand-first-in-pm-swanidhi-prokect

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ್ತೊಂದು ದಾಖಲೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.

ಬೀದಿ ಬದಿಯ ವ್ಯಾಪಾರಿಗಳ ವ್ಯಾಪಾರಕ್ಕೆ ಉತ್ತೇಜನ ನೀಡುವ ಪ್ರಧಾನಮಂತ್ರಿ ‌ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ಯೋಜನೆಗೆ ಮಹಾನಗರ ಪಾಲಿಕೆ ವ್ಯಾಪ್ತಿಯ ವ್ಯಾಪಾರಿಗಳಿಂದ ಉತ್ತಮ‌ ಸ್ಪಂದನೆ ಸಿಕ್ಕಿದೆ. ಜೂನ್​ 1ರಿಂದ ಆರಂಭವಾಗಿರುವ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಕೆ ಹಾಗೂ ಸಾಲ ಮಂಜೂರಾತಿಯಲ್ಲಿ ರಾಜ್ಯದ 284 ಸ್ಥಳೀಯ ಸಂಸ್ಥೆಗಳ ಪೈಕಿ ಹು-ಧಾ ಮಹಾನಗರ ಪಾಲಿಕೆ ಮೊದಲ ಸ್ಥಾನದಲ್ಲಿದೆ.

ಕೊರೊನಾ ಹಿನ್ನೆಲೆ ಲಾಕ್​ಡೌನ್​ನಿಂದ ಪ್ರತಿಕೂಲ ಪರಿಣಾಮ ಅನುಭವಿಸುತ್ತಿರುವ ಬೀದಿ ಬದಿ ವ್ಯಾಪಾರಿಗಳಿಗೆ ಜೀವನೋಪಾಯಕ್ಕಾಗಿ ಕೇಂದ್ರ ಸರ್ಕಾರ ಪಿಎಂ‌ ಸ್ವನಿಧಿ ವಿಶೇಷ ಕಿರುಸಾಲ ಯೋಜನೆಯನ್ನು ಯಶಸ್ವಿಗೊಳಿಸಿ ಸಂಕಷ್ಟದಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ನೇರವಾಗಲು ಮುಂದಾಗಿದೆ.‌

ಹು-ಧಾ ಮಹಾನಗರ ಪಾಲಿಕೆಗೆ ಮತ್ತೊಂದು ದಾಖಲೆಯ ಗರಿ

ಇಲ್ಲಿಯವರೆಗೆ 1543 ಅರ್ಜಿಗಳು ಸಲ್ಲಿಕೆಯಾಗಿದ್ದು ,249 ವ್ಯಾಪಾರಿಗಳಿಗೆ ಸಾಲ ಮಂಜೂರಾಗಿದೆ. ಉಳಿದ ಅರ್ಜಿಗಳು ಪರಿಶೀಲನೆಯಲ್ಲಿದ್ದು, ಅರ್ಜಿ ಸಲ್ಲಿಕೆ ಹಾಗೂ ಸಾಲ ಮಂಜೂರಾತಿಯಲ್ಲಿ ಮಹಾನಗರ ಪಾಲಿಕೆ ಮುಂಚೂಣಿಯಲ್ಲಿದೆ. ಸಾಮಾನ್ಯ ಸೇವಾ ಕೇಂದ್ರ ಮೂಲಕ ಆನ್​ಲೈನ್ ಅರ್ಜಿ ಹಾಕಲು ಉತ್ತೇಜನ ನೀಡಲಾಗುತ್ತದೆ. ಮಹಾನಗರ ಪಾಲಿಕೆ ವತಿಯಿಂದ ಸಮೀಕ್ಷೆ ಮಾಡಿ 6123 ಬೀದಿ ಬದಿಯ ವ್ಯಾಪಾರಿಗಳನ್ನು ಗುರುತಿಸಿ ಅವರಿಗೆ ಗುರುತಿನ ಚೀಟಿ ನೀಡಲಾಗಿದೆ.

ಗುರುತಿಸಿದ ವ್ಯಾಪಾರಸ್ಥರನ್ನು ಎ - ಕೆಟಗರಿಯಲ್ಲಿ ಇರಿಸಿದ್ದು,ಸ ಮೀಕ್ಷೆ ಸಮಯದಲ್ಲಿ ಪತ್ತೆಯಾಗದ ಬಿ, ಸಿ ಹಾಗೂ ಡಿ ಕೆಟಗರಿ ವ್ಯಾಪಾರಿಗಳಿಗೆ ಸಾಲ ದೊರೆಯುವಲ್ಲಿ ಪ್ರಮಾಣಪತ್ರದೊಂದಿಗೆ ಶಿಫಾರಸ್ಸು ಪತ್ರ ನೀಡುವ ಕೆಲಸ ನಡೆಯುತ್ತಿದೆ. ಇಷ್ಟೊಂದು ವ್ಯಾಪಾರಿಗಳ ಪೈಕಿ ಕನಿಷ್ಠ ವ್ಯಾಪಾರಿಗಳಿಗೆ ಈ ಸೌಲಭ್ಯ ‌ಕಲ್ಪಿಸುವ ಗುರಿಯನ್ನು ಪಾಲಿಕೆ ಹೊಂದಿದ್ದು, ವ್ಯಾಪಾರಿಗಳನ್ನು ಗುರುತಿಸುವ ಸಮೀಕ್ಷೆಯಲ್ಲಿಯೂ ಉಳಿದೆಲ್ಲ ಸಂಸ್ಥೆಗಳಿಗಿಂತ ಪಾಲಿಕೆ‌ ಮುಂಚೂಣಿಯಲ್ಲಿರುವುದು ವಿಶೇಷವಾಗಿದೆ.

ಒಂದು ವರ್ಷದ ಅವಧಿಗೆ ಹತ್ತು ಸಾವಿರ ಸಾಲ ನೀಡಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕ್ ‌ಸೇರಿದಂತೆ ಇನ್ನಿತರ ಹಣಕಾಸು ಸಂಸ್ಥೆ ಮೂಲಕ ಫಲಾನುಭವಿಗಳು ಸಾಲ ಪಡೆಯಬಹುದಾಗಿದ್ದು, ಶೇ 7ರಷ್ಟು ಬಡ್ಡಿ ಸಬ್ಸಿಡಿ ದೊರೆಯಲಿದ್ದು, ಉಳಿದ ಬಡ್ಡಿಯನ್ನು ವ್ಯಾಪಾರಿ‌ ಪಾವತಿಸಬೇಕು. ಮೊದಲ ವರ್ಷದ ಸಾಲದ ಸರಿಯಾಗಿ ಪಾವತಿಸಿದರೇ ನಂತರದ ವರ್ಷ ಇಪ್ಪತ್ತು ಸಾವಿರ ಸಾಲ ದೊರೆಯಲಿದ್ದು, ಬೀದಿ ಬದಿಯ ವ್ಯಾಪಾರಿಗಳ ಹಿತಕಾಪಾಡುವ ಸದುದ್ದೇಶವನ್ನು ಈ ಯೋಜನೆ ಹೊಂದಿರುವುದು ವಿಶೇಷವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.