ETV Bharat / state

ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ಸೆಂಟ್ರಲ್ ಕ್ಷೇತ್ರದಲ್ಲಿ ತುರುಸಿನ ರಾಜಕೀಯ: 6 ಬಾರಿ ಗೆದ್ದ ಶೆಟ್ಟರ್ ಮೇಲೆ ಎಲ್ಲರ ಚಿತ್ತ - Hubli Dharwad Central Constituency

ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ತುರುಸಿನ ರಾಜಕೀಯ ನಡೆದಿದೆ. ಇದೇ ಕ್ಷೇತ್ರದಲ್ಲಿ 6 ಬಾರಿ ಗೆದ್ದ ಜಗದೀಶ್ ಶೆಟ್ಟರ್, ಏಳನೇ ಬಾರಿ ಗೆದ್ದು ಇತಿಹಾಸ ಬರೆಯುವ ತವಕದಲ್ಲಿದ್ದಾರೆ. ಆದರೆ, ಕನಸು ಈಡೇರುತ್ತಾ?

Hubli Dharwad Central Assembly Constituency
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ
author img

By

Published : Mar 15, 2023, 3:42 PM IST

Updated : Mar 15, 2023, 4:18 PM IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ರಾಜ್ಯದ ಗಮನ ಸೆಳೆದ ಮತಕ್ಷೇತ್ರಗಳಲ್ಲಿ ಒಂದು. ಇಬ್ಬರು ಮುಖ್ಯಮಂತ್ರಿಗಳನ್ನು ನೀಡಿದ ವಿಶೇಷತೆ ಈ ಕ್ಷೇತ್ರಕ್ಕೆ ಇದೆ. ಈ ಕ್ಷೇತ್ರದಿಂದ ಜನತಾ ಪಾರ್ಟಿಯಿಂದ ಗೆಲುವು ಸಾಧಿಸಿದ್ದ ಎಸ್.ಆರ್. ಬೊಮ್ಮಾಯಿ 1988-89ರ ವರೆಗೆ ಹಾಗೂ ಜಗದೀಶ ಶೆಟ್ಟರ್ 2012-13ರಲ್ಲಿ ಇದೇ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಪಟ್ಟಕ್ಜೇರಿದ ಉದಾಹರಣೆ ಇದೆ. ಆದರೆ, ಇಬ್ಬರೂ ಮುಖ್ಯಮಂತ್ರಿಗಳು ಅಲ್ಪಾವಧಿ ಆಡಳಿತ ನಡೆಸಿದ್ದಾರೆ ಎಂಬುದು ಗಮನಾರ್ಹವಾಗಿದೆ.

ಇದುವರೆಗೂ ಜಗದೀಶ ಶೆಟ್ಟರ್ ಬಿಟ್ಟರೆ ಬೇರೆ ಆಕಾಂಕ್ಷಿಗಳ ಹೆಸರು ಬಿಜೆಪಿಯಿಂದ ಕೇಳಿ ಬರುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಜಗದೀಶ ಶೆಟ್ಟರ್‌ ಸತತ 6 ಬಾರಿ ಗೆದ್ದಿದ್ದು, ಇದೀಗ 7ನೇ ಬಾರಿಯೂ ಕಣಕ್ಕಿಳಿದು ವಿಜಯ ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ.

Details of hubli dharwad central constituency details
ಜಗದೀಶ್ ಶೆಟ್ಟರ್

ಆದರೆ, ಕಳೆದ ಹಲವು ಚುನಾವಣೆಯಲ್ಲಿ ಶೆಟ್ಟರ್ ವಿರುದ್ಧ ಸ್ಪರ್ಧಿಸಿದ್ದ ಹಲವು ಎದುರಾಳಿ ಪಕ್ಷದ ಬಹುತೇಕ ಮುಖಂಡರು ಬಿಜೆಪಿಗೆ ಸೇರಿದ್ದು ಗಮನಿಸಬೇಕಾದ ಅಂಶ. ಬಸವರಾಜ ಬೊಮ್ಮಾಯಿ (ಮುಖ್ಯಮಂತ್ರಿ), ಶಂಕರಣ್ಣ ಮುನವಳ್ಳಿ, ಡಾ. ಮಹೇಶ ನಾಲವಾಡ, ರಾಜಣ್ಣ ಕೊರವಿ ಸೇರಿದಂತೆ ಹಲವರು ಬಿಜೆಪಿ ಸೇರಿದ್ದಾರೆ. ಸಂಘಟನಾತ್ಮಕವಾಗಿ ಬಿಜೆಪಿ ಈ ಕ್ಷೇತ್ರದಲ್ಲಿ ಪ್ರಬಲವಾಗಿದೆ. ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ಸದಸ್ಯರನ್ನು ನೋಂದಣಿ ಮಾಡುವ ಮೂಲಕ ರಾಜ್ಯದಲ್ಲಿಯೇ ಈ ಕ್ಷೇತ್ರ ಪ್ರಥಮ ಸ್ಥಾನದಲ್ಲಿದೆ. ಈ ಅಂಶಗಳು ಶೆಟ್ಟರ್​ಗೆ ಪ್ಲಸ್ ಆಗುತ್ತಲೇ ಬಂದಿವೆ.

ಏಳನೇ ಬಾರಿಯೂ ತಾವೇ ಅಭ್ಯರ್ಥಿ ಎಂದು ಜಗದೀಶ ಶೆಟ್ಟರ್‌ ಈಗಾಗಲೇ ಹೇಳಿಕೊಂಡಿದ್ದಾರೆ. ಆದರೆ, ಟಿಕೆಟ್​ ಘೋಷಣೆ ಮಾತ್ರ ಬಾಕಿ ಇದೆ. ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರಶ್ನಿಸಿದಾದ, ಬೇರೆ ಕ್ಷೇತ್ರಕ್ಕೆ ಹೋಗುವ ಪ್ರಶ್ನೆ ಇಲ್ಲವೇ ಇಲ್ಲ ಎಂದು ಅವರು ಹಲವು ಬಾರಿ ಸ್ಪಷ್ಟಪಡಿಸಿದ್ದು ಉಂಟು. ಇದರ ಜೊತೆ ಪುತ್ರ ಸಂಕಲ್ಪ ಶೆಟ್ಟರ್‌ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ರಾಜಕೀಯ ಭವಿಷ್ಯ ಕಟ್ಟಿಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಒಂದು ವೇಳೆ ಶೆಟ್ಟರ್​ ಅವರಿಗೆ ಟಿಕೆಟ್ ತಪ್ಪಿದರೆ ಅವರ ಪುತ್ರ ಅಷ್ಟೇ ಅಲ್ಲದೇ ಹಲವರು ಕಣಕ್ಕಿಳಿಯುವ ಇಂಗಿತ ಕೂಡ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರೊಂದಿಗೆ ಉದ್ಯಮಿ ವಿ.ಎಸ್.ವಿ. ಪ್ರಸಾದ್​, ಡಾ.ಮಹೇಶ ನಾಲವಾಡ ಅವರ ಹೆಸರು ಕೂಡ ಬಲವಾಗಿ ಕೇಳಿ ಬರುತ್ತಿದೆ.

ಉಳಿದ ಪಕ್ಷಗಳಲ್ಲಿ ಯಾರ್ಯಾರು ಆಕಾಂಕ್ಷಿಗಳು: ಇನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲಿಯೂ ಹಲವರು ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. ರಜತ ಉಳ್ಳಾಗಡ್ಡಿಮಠ, ಮಾಜಿ ಮೇಯರ್ ಅನಿಲ ಪಾಟೀಲ, ಸದಾನಂದ ಡಂಗನವರ, ಗಿರೀಶ ಗದಿಗೆಪ್ಪಗೌಡರ, ಸತೀಶ ಮೆಹರವಾಡೆ, ಫಾರುಕ್ ಅಬುನವರ, ಮೆಹಬೂಬ್​ ಪಾಷಾ ಹಾಗೂ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಇನ್ನೂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಟಿಕೆಟ್​ ಆಕಾಂಕ್ಷಿತರು ಇದ್ದಾರೆ. ರಾಜು ನಾಯಕವಾಡ, ತುಳಸಿಕಾಂತ ಖೋಡೆ, ಸಿದ್ದು ಮಹಾಂತ ಒಡೆಯರ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ, ಕ್ಷೇತ್ರವನ್ನು ಸತತವಾಗಿ 6 ಬಾರಿ ತಮ್ಮ ಹಿಡಿತದಲ್ಲಿಟ್ಟುಕೊಂಡಿರುವ ಜಗದೀಶ್ ಶೆಟ್ಟರ್ ಅಷ್ಟು ಸುಲಭಾಗಿ ಯಾರಿಗೂ ಬಿಟ್ಟುಕೊಡಲಾರರು ಅನ್ನೋದು ರಾಜಕೀಯ ವಿಶ್ಲೇಷಕರ ಅನಿಸಿಕೆ. ಇದಕ್ಕೂ ಮುನ್ನ 1989 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​​ನಿಂದ ಸ್ಪರ್ಧಿಸಿದ್ದ ಜಿ.ಆರ್. ಸಾಂಡ್ರಾ ಗೆಲುವು ಸಾಧಿಸಿದ್ದೇ ಕೊನೆಯದ್ದಾಗಿದೆ.

ಕ್ಷೇತ್ರದ ಜಾತಿ ಲೆಕ್ಕಾಚಾರ: ಸೆಂಟ್ರಲ್ ಕ್ಷೇತ್ರದಲ್ಲಿ ಲಿಂಗಾಯತ ಹಾಗೂ ಮುಸ್ಲಿಂ ಮತದಾರರು ನಿರ್ಣಾಯಕ. ಪರಿಶಿಷ್ಟ ಜಾತಿ, ಮರಾಠಾ ಮತ್ತು ಬ್ರಾಹ್ಮಣ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಪ್ರಯತ್ನ ಇದೆ. ಈವರೆಗೂ ಮರಾಠ ಸಮಾಜದ ಮತಗಳು ಬಿಜೆಪಿ ಪರವಾಗಿ ಇದ್ದವು. ಆದರೆ, ಈ ಬಾರಿ ಶೇ‌. 8.15 ಮತಗಳು ಒಡೆಯುವ ಭೀತಿ ಇದೆ. ಮರಾಠ ಸಮಾಜದ ಹನುಮಂತ ಸಾ ನಿರಂಜನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು, ಮರಾಠ ಮತಗಳು ವಿಭಜನೆಯಾದರೆ ಬಿಜೆಪಿಗೆ ಹೊಡೆತ ಕೊಡುವ ಸಾಧ್ಯತೆ ಹೆಚ್ಚು.

Hubli Dharwad Central Assembly Constituency
ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರ

ಹಿಂದಿನ ಚುನಾವಣಾ ಫಲಿತಾಂಶ: 2013ರಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ 58,201 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್​ನ ಡಾ.‌ಮಹೇಶ ನಾಲವಾಡ 40,447 ಮತಗಳನ್ನು ಪಡೆದಿದ್ದರೆ ಜೆಡಿಎಸ್​ನ ತಬರೇಜ ಸಂಶಿ 7898 ಮತಗಳನ್ನು ಪಡೆದಿದ್ದರು. ಜಗದೀಶ್ ಶೆಟ್ಟರ್ ಅವರು 17,754 ಮತಗಳ ಅಂತರದಿಂದ ಜಯ ಸಾಧಿಸಿದ್ದರು.

2018ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಜಗದೀಶ್ ಶೆಟ್ಟರ್ 74,794 ಮತಗಳನ್ನು ಪಡೆದರೆ, ಕಾಂಗ್ರೆಸ್​ನ ಡಾ.‌ಮಹೇಶ ನಾಲವಾಡ 54,488 ಮತಗಳು, ಜೆಡಿಎಸ್ ರಾಜಣ್ಣ ಕೊರವಿ 13,000 ಮತಗಳನ್ನು ಪಡೆದಿದ್ದರು. ಇದರಲ್ಲಿ 21,306 ಮತಗಳ ಅಂತರದಿಂದ ಜಗದೀಶ್ ಶೆಟ್ಟರ್ ಜಯಸಾಧಿಸಿದ್ದರು.

ಇದನ್ನೂ ಓದಿ: ಒಕ್ಕಲಿಗರ ಪ್ರಾಬಲ್ಯದ ಚಾಮುಂಡೇಶ್ವರಿಯಲ್ಲಿ ಗೆಲುವು ಯಾರಿಗೆ? ಹೀಗಿದೆ ಲೆಕ್ಕಾಚಾರ

Last Updated : Mar 15, 2023, 4:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.