ETV Bharat / state

ರಾಷ್ಟ್ರಮಟ್ಟದ ಹಾಕಿ ತಂಡಕ್ಕೆ ಆಯ್ಕೆ: ಹೊಸೂರು ಸರ್ಕಾರಿ ಶಾಲೆ ಪ್ರಥಮ ದರ್ಜೆ ಸಹಾಯಕ ಸಂಭಾಜಿ ಎನ್ ಶಿಂಧೆ - ಸಂಭಾಜಿ ಎನ್ ಶಿಂಧೆ

Selected for national level Hockey team: ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನವೆಂಬರ್ 15 ರಿಂದ ನ.24 ರವರೆಗೆ ನಡೆಯಲಿರುವ ಪಂದ್ಯಕ್ಕೆ ನ.‌13 ರಂದು ಸಂಭಾಜಿ ಎನ್ ಶಿಂಧೆ ಓಡಿಶಾಗೆ ಪ್ರಯಾಣ ಬೆಳೆಸಲಿದ್ದಾರೆ.

Sambhaji N Shinde
ಸಂಭಾಜಿ ಎನ್ ಶಿಂಧೆ
author img

By ETV Bharat Karnataka Team

Published : Nov 9, 2023, 8:04 PM IST

ಹೊಸೂರು ಸರ್ಕಾರಿ ಶಾಲೆ ಪ್ರಥಮ ದರ್ಜೆ ಸಹಾಯಕ ಸಂಭಾಜಿ ಎನ್ ಶಿಂಧೆ

ಹುಬ್ಬಳ್ಳಿ: ಶಾಲಾ ದಿನಗಳಿಂದಲೂ‌ ಹಾಕಿ ಎಂದರೆ ಅವರಿಗೆ ಪಂಚ ಪ್ರಾಣ. ಶಾಲಾ ಕಾಲೇಜು ದಿನಗಳಲ್ಲಿ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ಹಾಗೂ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಗೆ ಆಟವಾಡಿರುವ ಇವರು ಈಗ ಮತ್ತೊಮ್ಮೆ ಅಖಿಲ ಭಾರತ ನಾಗರೀಕ ಸೇವಾ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಹುಬ್ಬಳ್ಳಿ ಕೀರ್ತಿ ಹೆಚ್ಚಿಸಿದ್ದಾರೆ. ಅವರೇ ಹೊಸೂರಿನ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕರಾಗಿರುವ ಸಂಭಾಜಿ ಎನ್ ಶಿಂಧೆ.

ಅವರು ಮೂಲತಃ ಧಾರವಾಡದವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಾಗೂ ಕಾಲೇಜು ಸಮಯದಿಂದಲೇ ಹಾಕಿ ಬಗ್ಗೆ ಅಪಾರ ಗೌರವ ಹೊಂದಿರುವ ಅವರು ರಾಜ್ಯಮಟ್ಟದ ಹಾಕಿಗೆ ಆಯ್ಕೆಯಾಗಿ ಆಟ ಆಡಿದ್ದರು. ಆದರೆ, ಮುಂದೆ ಜೀವನೋಪಾಯಕ್ಕಾಗಿ ಸರ್ಕಾರಿ ನೌಕರಿಗೆ ಸೇರಿದರು. ‌ಮೊದಲು‌ ಕಲಘಟಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕೆಲಸ ನಿರ್ವಹಿಸಿದ ಅವರು, ಈಗ ಹೊಸೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿದ್ದಾರೆ. ಕರ್ತವ್ಯದ ನಡುವೆ ಹಲವು ಬಾರಿ ಅಖಿಲ ಭಾರತ ನಾಗರೀಕ ಸೇವಾ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿ ರಾಜ್ಯದ ಪರವಾಗಿ ಆಟವಾಡಿದ್ದಾರೆ.

ಇವರು 2014 -15ರಲ್ಲಿ ಹರಿಯಾಣದ ಕುರುಕ್ಷೇತ್ರ, 2015-16ರಲ್ಲಿ ಕರ್ನಾಟಕದ ಬೆಂಗಳೂರು, 2017-18 ರಲ್ಲಿ ಜಾರ್ಜಂಡ್ ರಾಂಚಿ, 2018-19 ರಲ್ಲಿ ರಾಯಪುರದ ಛತ್ತೀಸಘಡ, ಹಾಗೂ 2021-22 ರಲ್ಲಿ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದ ಅಖಿಲ ಭಾರತ ನಾಗರೀಕ ಸೇವಾ ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಗೆ ಆಯ್ಕೆಯಾಗಿ ಆಟವಾಡಿದ್ದಾರೆ‌.

ಈಗ ಓಡಿಶಾ ರಾಜ್ಯದ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನವೆಂಬರ್ 15 ರಿಂದ ನ.24 ರವರೆಗೆ 2023-24ನೇ ಸಾಲಿನ ಪಂದ್ಯಗಳು ನಡೆಯಲಿವೆ. ಇವರು ನ.‌13 ರಂದು ಒಡಿಶಾಗೆ ಪ್ರಯಾಣ ಬೆಳೆಸಲಿದ್ದು, ರಾಜ್ಯ ತಂಡಕ್ಕೆ ಆಯ್ಕೆಯಾದವರಲ್ಲಿ ಧಾರವಾಡ ಜಿಲ್ಲೆಯವರು ಇವರೊಬ್ಬರೇ. ಇವರನ್ನು ಬಿಟ್ಟರೆ, ಬಾಗಲಕೋಟೆ, ಕೊಡಗು ಸೇರಿದಂತೆ ‌ಬೇರೆ ಬೇರೆ ಜಿಲ್ಲೆಯವರು ತಂಡಕ್ಕೆ ಆಯ್ಕೆಯಾಗಿದ್ದಾರೆ.‌ ಇವರ ಆಟದ ವೈಖರಿ ನೋಡಿದ ಯುವಜನ ಹಾಗೂ ಕ್ರೀಡಾ ಇಲಾಖೆ ನಿರಂತರವಾಗಿ ರಾಷ್ಟ್ರಮಟ್ಟಕ್ಕೆ ಆಡುವ ರಾಜ್ಯದ ತಂಡಕ್ಕೆ ಆಯ್ಕೆ ಮಾಡುತ್ತಿದೆ. ಇದಕ್ಕೆ ಇವರು ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ.

ರಾಷ್ಟ್ರಮಟ್ಟದ ಹಾಕಿ ತಂಡಕ್ಕೆ ಆಯ್ಕೆಯಾದ ಸಂಭಾಜಿ ಶಿಂಧೆಯವರಿಗೆ ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಚನ್ನಪ್ಪಗೌಡ, ಶಾಲಾ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು, ಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರ ವೃಂದ ಹಾಗೂ ಎಸ್​ಡಿಎಂಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಶಿಂಧೆ ಅವರ ಸಾಧನೆ ಬಗ್ಗೆ ಶಾಲೆಯ ಪ್ರಭಾರಿ ಮುಖ್ಯಶಿಕ ವಿ ಜಿ ಗಲಭಿ ಅವರು ಮಾತನಾಡಿದ್ದು, ಇವರು ನಮ್ಮ ಶಾಲೆಯ ಹೆಮ್ಮೆಯ ಪ್ರತೀಕವಾಗಿದ್ದಾರೆ. ಬಾಲ್ಯದಿಂದಲೇ ಹಾಕಿಪ್ರಿಯರಾಗಿರುವ ಅವರು ಈ ರಾಷ್ಟ್ರಮಟ್ಟದ ಹಾಕಿ ಕ್ರೀಡೆಯಲ್ಲಿ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.

ಇದನ್ನೂ ಓದಿ: 63ರ ಹರೆಯದಲ್ಲಿ ಸೈಕ್ಲಿಂಗ್; ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಹುಬ್ಬಳ್ಳಿ ಸಾಧಕನ ದಾಖಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.