ETV Bharat / state

ಹುಬ್ಬಳ್ಳಿಯಿಂದ ಜೋಗ್​ ಫಾಲ್ಸ್​ಗೆ ವೋಲ್ವೊ- ರಾಜಹಂಸ ಬಸ್ : ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

author img

By

Published : Aug 6, 2021, 11:01 PM IST

ರಾಜಹಂಸ ಬಸ್ ಬೆಳಗ್ಗೆ 7-45ಕ್ಕೆ ಹೊರಡುತ್ತದೆ. ಹೋಗಿ ಬರಲು ಸೇರಿ ಪ್ರಯಾಣ ದರ ರೂ. 435 ನಿಗದಿಪಡಿಸಲಾಗಿದೆ. ವೋಲ್ವೊ ಬಸ್ ಬೆಳಗ್ಗೆ 8-00ಕ್ಕೆ ಹೊರಡುತ್ತದೆ. ಪ್ರಯಾಣ ದರ ರೂ. 605 ನಿಗದಿಪಡಿಸಲಾಗಿದೆ. ಇವುಗಳೊಂದಿಗೆ ಹಿಂದಿನಂತೆ ವೇಗದೂತ ಬಸ್ ಬೆಳಗ್ಗೆ 7-30ಕ್ಕೆ ಹೊರಡುತ್ತದೆ. ಪ್ರಯಾಣ ದರ ರೂ.350 ನಿಗದಿಪಡಿಸಲಾಗಿದೆ..

corona-report-mandatory-for-jog-falls-viewing
ಜೋಗ್​ ಫಾಲ್ಸ್​

ಹುಬ್ಬಳ್ಳಿ: ಜೋಗ್​ಫಾಲ್ಸ್ ವೀಕ್ಷಣೆಗೆ ರವಿವಾರ ಮತ್ತು ಸಾರ್ವಜನಿಕ ರಜೆ ದಿನಗಳಂದು ಹುಬ್ಬಳ್ಳಿ ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ವೋಲ್ವೊ ಮತ್ತು ರಾಜಹಂಸ ಮಾದರಿಯ ವಿಶೇಷ ಪ್ಯಾಕೇಜ್ ಟೂರ್ ಬಸ್ ವ್ಯವಸ್ಥೆ ಮಾಡಲಾಗಿದೆ.

ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ವಿಶ್ವ ವಿಖ್ಯಾತ ಜೋಗ ಫಾಲ್ಸ್ ಮೈದುಂಬಿಕೊಂಡಿದೆ. ಹೀಗಾಗಿ, ಸಾಕಷ್ಟು ಜನ‌ ಪ್ರಯಾಣಿಕರು ಫಾಲ್ಸ್ ವೀಕ್ಷಣೆಗೆ ತೆರಳುತ್ತಿದ್ದಾರೆ. ಆದರೆ, ಹೀಗೆ ತೆರಳುವ ಪ್ರವಾಸಿಗರಿಗೆ ವಾಯವ್ಯ ಸಾರಿಗೆ ಸಂಸ್ಥೆ ಕೋವಿಡ್ ನೆಗಟಿವ್ ವರದಿ ಕಡ್ಡಾಯ ಮಾಡಿದೆ. ಈ ಮೂಲಕ ಕೊರೊನಾ ತಡೆಗೆ ದಿಟ್ಟ ನಿರ್ಧಾರ ಕೈಗೊಂಡಿದೆ.

ಹುಬ್ಬಳ್ಳಿಯಿಂದ ಜೋಗ್​ ಫಾಲ್ಸ್​ಗೆ ವಾರಾಂತ್ಯ ದಿನಗಳಂದು ಶನಿವಾರ ಮತ್ತು ರವಿವಾರ ಹಾಗೂ ಸಾರ್ವಜನಿಕ ರಜೆ ದಿನ ಈಗಾಗಲೇ ವೇಗದೂತ ಮಾದರಿಯ ಪ್ಯಾಕೇಜ್ ಟೂರ್ ಬಸ್ ವ್ಯವಸ್ಥೆ ಮಾಡಲಾಗಿದೆ.

ಸಾರ್ವಜನಿಕರ ಬೇಡಿಕೆಯ ಮೇರೆಗೆ ಯಾತ್ರಿಗಳಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವೋಲ್ವೊ ಮತ್ತು ರಾಜಹಂಸ ಬಸ್ ಕಾರ್ಯಾಚರಣೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಸ್ವಂತ ವಾಹನಕ್ಕೆ ಹೋಲಿಸಿದಾಗ ಪ್ರಯಾಣ ದರ ಬಹಳ ಮಿತವ್ಯಯಕರ. ಮಳೆಗಾಲದಲ್ಲಿ ಘಟ್ಟ ಪ್ರದೇಶಗಳಲ್ಲಿ ಸ್ವಯಂ ವಾಹನ ಚಾಲನೆ ಕಷ್ಟಕರ. ಇದರಿಂದ ಪ್ಯಾಕೇಜ್ ಟೂರ್ ಬಸ್​ಗೆ ಬೇಡಿಕೆ ಹೆಚ್ಚಿದೆ.

ರಾಜಹಂಸ ಬಸ್ ಬೆಳಗ್ಗೆ 7-45ಕ್ಕೆ ಹೊರಡುತ್ತದೆ. ಹೋಗಿ ಬರಲು ಸೇರಿ ಪ್ರಯಾಣ ದರ ರೂ. 435 ನಿಗದಿಪಡಿಸಲಾಗಿದೆ. ವೋಲ್ವೊ ಬಸ್ ಬೆಳಗ್ಗೆ 8-00ಕ್ಕೆ ಹೊರಡುತ್ತದೆ. ಪ್ರಯಾಣ ದರ ರೂ. 605 ನಿಗದಿಪಡಿಸಲಾಗಿದೆ. ಇವುಗಳೊಂದಿಗೆ ಹಿಂದಿನಂತೆ ವೇಗದೂತ ಬಸ್ ಬೆಳಗ್ಗೆ 7-30ಕ್ಕೆ ಹೊರಡುತ್ತದೆ. ಪ್ರಯಾಣ ದರ ರೂ.350 ನಿಗದಿಪಡಿಸಲಾಗಿದೆ.

ಈ ವಿಶೇಷ ಬಸ್​ಗಳಿಗೆ ಹೋಗುವಾಗ ಶಿರಸಿಯಲ್ಲಿ ಮಾರಿಕಾಂಬಾ ದೇವಾಲಯ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 12-30ರಿಂದ 1-00ಕ್ಕೆ ಜೋಗ ತಲುಪುತ್ತವೆ. ಅಲ್ಲಿ ಸ್ಥಳ ವೀಕ್ಷಣೆ, ಊಟೋಪಚಾರಕ್ಕೆ ನಾಲ್ಕು ತಾಸು ಸಮಯಾವಕಾಶವಿರುತ್ತದೆ. ಸಂಜೆ ಜೋಗದಿಂದ ಬಿಟ್ಟು ರಾತ್ರಿ 9-00ಕ್ಕೆ ಹುಬ್ಬಳ್ಳಿಗೆ ಆಗಮಿಸುತ್ತವೆ.

ಓದಿ: ಪಂಚಮಸಾಲಿ ಪೀಠಕ್ಕೆ ಸಿಎಂ ಭೇಟಿ.. ಶ್ರೀಗಳಿಂದ ಆಶೀರ್ವಾದ ಪಡೆದ ಬಿ ಎಸ್ ಬೊಮ್ಮಾಯಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.