ETV Bharat / state

ಶಿವಮೊಗ್ಗದಲ್ಲಿ ‌ನಡೆಯುವ ಕೊಲೆಗಳಿಗೆ ಈಶ್ವರಪ್ಪ ಕಾರಣ.. ಸಿ ಎಂ ಇಬ್ರಾಹಿಂ ಗಂಭೀರ ಆರೋಪ - ಬಸವರಾಜ ಹೊರಟ್ಟಿ

ಈಶ್ವರಪ್ಪನ ಬಾಯಿ ಯಂತ್ರದಂತೆ. ಅವರು ಏನು ಮಾತನಾಡುತ್ತಾರೋ ಅವರಿಗೇ ಗೊತ್ತಿರಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಶಿವಮೊಗ್ಗ ಘಟನೆಗಳಿಗೆ ಪರೋಕ್ಷವಾಗಿ ಅವರೇ ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಗಂಭೀರವಾಗಿ ಆರೋಪಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ
author img

By

Published : Oct 26, 2022, 3:21 PM IST

Updated : Oct 26, 2022, 4:37 PM IST

ಹುಬ್ಬಳ್ಳಿ: ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣಕ್ಕೆ ಪರೋಕ್ಷವಾಗಿ ಸಚಿವ ಕೆ ಎಸ್ ಈಶ್ವರಪ್ಪ ಅವರೇ ಕಾರಣ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಸೋಲಿನ ಭೀತಿಯಲ್ಲಿ ಇರೋದ್ರಿಂದ ಇವೆಲ್ಲ ಅವಾಂತರ ಆಗುತ್ತಿದೆ. ಹಾಗಾಗಿ ಮುಖ್ಯಮಂತ್ರಿಗಳು ಈಶ್ವರಪ್ಪರನ್ನು ಹದ್ದು ಬಸ್ತಿನಲ್ಲಿ ಇಟ್ರೆ ಎಲ್ಲವೂ ಸರಿಹೋಗುತ್ತೆ. ಈಶ್ವರಪ್ಪನ ಬಾಯಿ ಯಂತ್ರದಂತೆ. ಏನು ಮಾತನಾಡುತ್ತಾರೋ ಅವರಿಗೇ ಗೊತ್ತಿರಲ್ಲ. ಶಿವಮೊಗ್ಗ ಘಟನೆಗಳಿಗೆ ಪರೋಕ್ಷವಾಗಿ ಅವರೇ ಕಾರಣ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿದರು

ಇನ್ನು, ಮಾಜಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನೂ ಆಗಲಿಲ್ಲ, ಯಡಿಯೂರಪ್ಪ ಅಥವಾ ರಾಘವೇಂದ್ರ ಮಾತಾಡಿದರೆ ಗಲಭೆಗಳು ಆಗೊಲ್ಲ. ಆದ್ರೆ ಈಶ್ವರಪ್ಪ ಮಾತಾಡಿದರೆ ಅಲ್ಲಿ ಗಲಭೆಗಳು ಆಗ್ತಿವೆ. ಚುನಾವಣೆ ಹತ್ತಿರ ಬಂದ ಸಂದರ್ಭದಲ್ಲಿ ಇವೆಲ್ಲವೂ ನಡೆಯುತ್ತಿವೆ. ಈಶ್ವರಪ್ಪ ಸೋಲೋ ಹತಾಶೆಯಲ್ಲಿದ್ದಾರೆ ಎಂದು ಹರಿಹಾಯ್ದರು.

ಗೃಹಸಚಿವ ಆರಗ ಜ್ಞಾನೇಂದ್ರ ಅದೇ ಜಿಲ್ಲೆಯವರು. ಆದರೆ, ಅವರು ಬರೀ ಹೋಮ್​ಗೆ ಸೀಮಿತ, ಮಿನಿಸ್ಟರ್ ಅಲ್ಲ. ಅವರ ಮನೆಯಲ್ಲೇ ಯಾರೂ ಮಾತು ಕೇಳ್ತಾ ಇಲ್ಲ, ಇನ್ನು ಹೊರಗಿನವರು ಏನ್ ಕೇಳ್ತಾರೆ. ಚುನಾವಣಾ ಸಂದರ್ಭದಲ್ಲಿ ಇಂಥದ್ದನ್ನು ನಡೆಸೋದೆ ಪಕ್ಷದ ಪಾಲಿಸಿಯಾಗಿದ್ರೆ ಏನೂ ಮಾಡಲಾಗಲ್ಲ ಎಂದರು.

ಶಾಸಕರಾದ ಯತ್ನಾಳ್ ಮತ್ತು ಬೆಲ್ಲದ್ ನಮ್ಮ ನಾಯಕರಲ್ಲ ಎಂಬ ಅರುಣ್ ಸಿಂಗ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ತಾಳಿ ಕಟ್ಟಿ ಮದುವೆ ಆದ್ಮೇಲೆ ನನ್ ಹೆಂಡ್ತಿ ಅಲ್ಲ ಅಂದ್ರೆ ಹೇಗೆ, ಕಟ್ಟಿದ ತಾಳಿ ಕೊರಳಲ್ಲಿ ಇರಬೇಕಾದರೆ ನಾವು ಕಟ್ಟಿಯೇ ಇಲ್ಲ ಅನ್ನೋದು ಸರಿಯಲ್ಲ. ಕರ್ನಾಟಕದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಏನಾದ್ರೂ ಅಧಿಕಾರಕ್ಕೆ ಬರಬೇಕೆಂದರೆ ಕಾಂಗ್ರೆಸ್ ತಪ್ಪಿನಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ್​ ಜೋಡೋ ಗೊತ್ತು ಗುರಿಯಿಲ್ಲದ ಯಾತ್ರೆ.. ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ಯಾಕೆ ಮಾಡುತ್ತಿದ್ದಾರೆ ಎಂಬುದು ಅವರಿಗೆ ಗೊತ್ತಿಲ್ಲ. ಅದೊಂದು ಗೊತ್ತು ಗುರಿಯಿಲ್ಲದ ಯಾತ್ರೆ. ಕಾಂಗ್ರೆಸ್ ನವರು ಜನರ ಸಂಕಷ್ಟವನ್ನು ಅರಿಯುವ, ಜನತೆಗೆ ಸ್ಪಂದಿಸಲು ಯಾತ್ರೆ ಮಾಡ್ತಿಲ್ಲ, ಯಾತ್ರೆ ಹೆಸರಲ್ಲಿ ಸಾವಿರಾರು ಜನರನ್ನು ಜಮಾಯಿಸಲಾಗ್ತಿದೆ. ಇದರಿಂದ ಕಾಂಗ್ರೆಸ್​ಗೆ ಯಾವುದೇ ಪ್ರಯೋಜನವಾಗಲ್ಲ ಎಂದರು.

ರಾಹುಲ್ ಯಾತ್ರೆ ನೋಡಿ ಬಿಜೆಪಿ ಜನ ಸಂಕಲ್ಪ ಸಮಾವೇಶ ಮಾಡ್ತಿದೆ. ಜನ ಸಂಕಲ್ಪ ಸಮಾವೇಶದಲ್ಲಿ ಜನರಿಗಾಗಿ ಮಾಡಿದ ಕಾರ್ಯಗಳ ಬಗ್ಗೆ ಹೇಳ್ತಾನೇ ಇಲ್ಲ. ಬಿಜೆಪಿಯವರದ್ದು ಏನಿದ್ದರೂ ಪರ್ಸಂಟೇಜ್ ವ್ಯವಹಾರ. ಇದಕ್ಕೆ ಭಿನ್ನವಾಗಿ ಜೆಡಿಎಸ್ ನಿಂದ ಪಂಚರತ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಮುಖ್ಯವಾಗಿ ಶಿಕ್ಷಣ, ಆರೋಗ್ಯ, ನೀರಾವರಿ ಸೇರಿ ಮುಂದೆ ಕೈಗೊಳ್ಳಲಿರುವ ಯೋಜನೆಗಳ ಬಗ್ಗೆ ಜನರಿಗೆ ಹೇಳ್ತಾ ಇದ್ದೇವೆ. ಖಂಡಿತಾ ಜನ ನಮ್ಮನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಪಡಿಸಿದರು.

ಮೂರು ಬಣವಾದ ಕಾಂಗ್ರೆಸ್.. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್ ನಲ್ಲಿ ಎರಡಿದ್ದ ಬಣಗಳು ಮೂರಾಗಿವೆ. ಸಿದ್ದರಾಮಯ್ಯ, ಡಿಕೆಶಿ ಬಣದ ನಂತರ ಇದೀಗ ಖರ್ಗೆ ಬಣ ಮುನ್ನೆಲೆಗೆ ಬಂದಿದ್ದು, ರಾಹುಲ್ ಗಾಂಧಿಗೆ ಈ ಮೂರೂ ಬಣಗಳನ್ನು ಜೋಡಿಸುವುದೇ ಕೆಲಸವಾಗಿದೆ‌.

ಖರ್ಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೇ ಕರ್ನಾಟಕದಲ್ಲಿ ಕಾಂಗ್ರೆಸ್ ಸೋತಿತ್ತು. ಕೇವಲ 80 ಸೀಟು ಗಳಿಸಿತ್ತು. ಈಗ ಎಐಸಿಸಿ ಅಧ್ಯಕ್ಷರಾದ ಮೇಲೆ ಮಹತ್ವದ ಬದಲಾವಣೆ ನಿರೀಕ್ಷಿಸುವಂತಿಲ್ಲ. ಕಾಂಗ್ರೆಸ್ ಗೆ ಬೂಸ್ಟ್ ಸಿಗೋಕೆ ಸಾಧ್ಯವಿಲ್ಲ. ಮತ್ತೊಬ್ಬರ ಕೈಗೊಂಬೆ ರೀತಿಯಲ್ಲಿ ಅವರು ಕೆಲಸ ಮಾಡುತ್ತಾರೆ ಅಷ್ಟೇ ಎಂದು ಇಬ್ರಾಹಿಂ ಟೀಕಿಸಿದರು.

ಅನಾಥ ಮಗುವಾದ ಹೊರಟ್ಟಿ.. ಬಸವರಾಜ ಹೊರಟ್ಟಿಗೆ ಸ್ಪೀಕರ್ ಸ್ಥಾನ ಸಿಗದ ವಿಚಾರವಾಗಿ ಪ್ರತಿಕ್ರಿಯಿಸಿ, ಅನಾಥ ಮಗು ಆದ ಸ್ಥಿತಿ ಹೊರಟ್ಟಿ ಅವರದ್ದಾಗಿದೆ. ಈಗಲೂ ಕಾಲ ಮಿಂಚಿಲ್ಲ, ‌ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್​ಗೆ ಬರಲಿ. ಹಿಂದಿನಂತೆಯೇ ಗೌರವ ಸ್ಥಾನಮಾನಗಳು ಜೆಡಿಎಸ್​ನಿಂದ ಸಿಗುತ್ತೆ ಎಂದರು.

ಓದಿ: ನಿಮ್ಮ ಮಕ್ಕಳಿಗೆ ಬುದ್ಧಿ ಹೇಳದಿದ್ದರೆ ಅರೆಸ್ಟ್​ ಆಗ್ತಾರೆ: ಈಶ್ವರಪ್ಪ ಎಚ್ಚರಿಕೆ

Last Updated : Oct 26, 2022, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.