ETV Bharat / state

ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ವಿಚಾರಣೆ ನಡೆಸಿದ ಸಿಬಿಐ

ಕುಟುಂಬಸ್ಥರು ಐದು ನಿಮಿಷ ಭೇಟಿ‌ ಮಾಡಲು ಕೋರ್ಟ್ ಅನುಮತಿ‌ ನೀಡಿದ್ದರಿಂದ ಹುಬ್ಬಳ್ಳಿಯ ಹೊರ ವಲಯದ ಸಿಎಆರ್ ಮೈದಾನಕ್ಕೆ‌ ವಿನಯ್​ ಕುಲಕರ್ಣಿ ಪತ್ನಿ ಶಿವಲೀಲಾ ಹಾಗೂ ಮಕ್ಕಳಾದ ವೈಶಾಲಿ, ದೀಪಾಲಿ, ಹೇಮಂತ್ ಆಗಮಿಸಿದ್ದರು..

ನಾಗರಾಜ್ ಗೌರಿ ವಿಚಾರಣೆ ನಡೆಸಿದ ಸಿಬಿಐ
ನಾಗರಾಜ್ ಗೌರಿ ವಿಚಾರಣೆ ನಡೆಸಿದ ಸಿಬಿಐ
author img

By

Published : Nov 8, 2020, 7:12 PM IST

ಹುಬ್ಬಳ್ಳಿ : ಜಿಪಂ ಸದಸ್ಯ ಯೋಗೇಶ್ ಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಕೈ ಮುಖಂಡ ನಾಗರಾಜ್ ಗೌರಿ ಅವರನ್ನು ಸಿಬಿಐ ಅಧಿಕಾರಿಗಳು ಕರೆದಿದ್ದರು. ಈ ಹಿನ್ನೆಲೆ ಹುಬ್ಬಳ್ಳಿಯ ಸಿಎಆರ್ ಮೈದಾನಕ್ಕೆ ನಾಗರಾಜ್​​ ಗೌರಿ ಅವರು ಕುಟುಂಬ ಸಮೇತ ಆಗಮಿಸಿದ್ದರು.

ವಿಚಾರಣೆಗೆ ಹೋಗುವಾಗ ಕುಟುಂಬ ಸದಸ್ಯರನ್ನ ಹೊರಗಡೆ ಬಿಟ್ಟು ನಾಗರಾಜ್ ಗೌರಿ ಒಳಗೆ ಹೋದರು. ಈ ಹಿಂದೆಯು ನಾಗರಾಜ್ ಗೌರಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ‌ನಡೆಸಿದ್ದರು. ನಾಗರಾಜ್ ಗೌರಿ, ವಿನಯ್ ಕುಲಕರ್ಣಿ ಆಪ್ತನಾಗಿದ್ದು, ಮೃತ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರ್ಪಡೆಯಲ್ಲಿ‌ ಪ್ರಮುಖ ಪಾತ್ರ ವಹಿಸಿದ್ದರು.

ಅಲ್ಲದೇ ಮಲ್ಲಮ್ಮನಿಗೆ ಇವರಿಂದ ಹಣ ಸಂದಾಯವಾಗಿದೆ ಎನ್ನಲಾಗಿದೆ‌. ಈ ಎಲ್ಲಾ ಅಂಶಗಳ ಬಗ್ಗೆ ಸಿಬಿಐ ವಿಚಾರಣೆ ನಡೆಸುತ್ತಿದೆ.

ನಾಗರಾಜ್ ಗೌರಿ ವಿಚಾರಣೆ ನಡೆಸಿದ ಸಿಬಿಐ
ನಾಗರಾಜ್ ಗೌರಿ ವಿಚಾರಣೆ ನಡೆಸಿದ ಸಿಬಿಐ

ಇನ್ನು ಮಾಜಿ ಸಚಿವ ವಿನಯ್​​ ಕುಲಕರ್ಣಿ ಸಿಬಿಐ ವಿಚಾರಣೆ ಎರಡನೇ ದಿನವೂ ಮುಂದುವರೆದಿದೆ.‌ ಈ ಹಿನ್ನೆಲೆ ವಿನಯ್​ ಕುಲಕರ್ಣಿ ಭೇಟಿಗೆ ಅವರ ಕುಟುಂಬಸ್ಥರು ಆಗಮಿಸಿದ್ದರು.‌

ಕುಟುಂಬಸ್ಥರು ಐದು ನಿಮಿಷ ಭೇಟಿ‌ ಮಾಡಲು ಕೋರ್ಟ್ ಅನುಮತಿ‌ ನೀಡಿದ್ದರಿಂದ ಹುಬ್ಬಳ್ಳಿಯ ಹೊರ ವಲಯದ ಸಿಎಆರ್ ಮೈದಾನಕ್ಕೆ‌ ವಿನಯ್​ ಕುಲಕರ್ಣಿ ಪತ್ನಿ ಶಿವಲೀಲಾ ಹಾಗೂ ಮಕ್ಕಳಾದ ವೈಶಾಲಿ, ದೀಪಾಲಿ, ಹೇಮಂತ್ ಆಗಮಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.