ETV Bharat / state

ಟ್ರಾಫಿಕ್‌ ಸಮಸ್ಯೆಗೆ ಬ್ರೇಕ್.. ಫಜಲ್ ಪಾರ್ಕಿಂಗ್ ಸೇವೆ ಮುಂದಿನ ವಾರದಿಂದ ಪ್ರಾರಂಭದ ನಿರೀಕ್ಷೆ.. - ಹುಬ್ಬಳ್ಳಿ ಫಜಲ್ ಪಾರ್ಕಿಂಗ್ ಸೌಲಭ್ಯ

ರಾಜ್ಯದಲ್ಲಿ ಮೊದಲನೆಯದಾದ ಈ ಹೊಸ ಸೌಲಭ್ಯವನ್ನು 180 ಚದರ ಮೀಟರ್‌ನಲ್ಲಿ 4.59 ಕೋಟಿ ರೂ.ಗಳ ವೆಚ್ಚದಲ್ಲಿ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ನಿರ್ಮಿಸಲಾಗಿದೆ..

Fazal Parking
ಫಜಲ್ ಪಾರ್ಕಿಂಗ್
author img

By

Published : Feb 2, 2021, 7:25 PM IST

ಹುಬ್ಬಳ್ಳಿ : ಹು-ಧಾ ಮಹಾನಗರದ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿ ಚುರುಕಾಗಿ ನಡೆದಿದೆ. ಪಾರ್ಕಿಂಗ್ ಸಮಸ್ಯೆಗಳಿಗೆ ಕಡಿವಾಣ ಹಾಕಲು ನಿರ್ಮಾಣ ಮಾಡಿರುವ ಫಜಲ್ ಪಾರ್ಕಿಂಗ್ ಮುಂದಿನ ವಾರದಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗುವ ಲಕ್ಷಣಗಳು ಕಾಣುತ್ತಿವೆ.

ಫಜಲ್ ಪಾರ್ಕಿಂಗ್ ನಿರ್ಮಾಣ ಪೂರ್ಣಗೊಂಡಿರುವುದರಿಂದ ಮುಂದಿನ ವಾರ ಪ್ರಾರಂಭವಾಗುವ ನಿರೀಕ್ಷೆಯಿದೆ. ಸ್ಥಿರತೆಯನ್ನು ಪರೀಕ್ಷಿಸಲು ಪಾರ್ಕಿಂಗ್ ವ್ಯವಸ್ಥೆಯ ಐದು ಹಂತಗಳಲ್ಲಿ ಇತ್ತೀಚೆಗೆ 37 ಕಾರುಗಳನ್ನು ನಿಲ್ಲಿಸಲಾಗಿತ್ತು.

ಫಜಲ್ ಪಾರ್ಕಿಂಗ್

ಹುಬ್ಬಳ್ಳಿ ಮತ್ತು ಧಾರವಾಡದ ನಾಗರಿಕರು ಎದುರಿಸುತ್ತಿರುವ ಪಾರ್ಕಿಂಗ್ ಸಮಸ್ಯೆಗಳನ್ನು ಎದುರಿಸಲು ಹುಬ್ಬಳ್ಳಿ-ಧಾರವಾಡ್ ಸ್ಮಾರ್ಟ್ ಸಿಟಿ ಲಿಮಿಟೆಡ್ ಫಜಲ್ ಪಾರ್ಕಿಂಗ್ ಸೌಲಭ್ಯ ಒದಗಿಸುತ್ತಿದೆ. ದೆಹಲಿ ಮೂಲದ ಗುತ್ತಿಗೆದಾರ ಐದು ವರ್ಷಗಳಲ್ಲಿ ಪಾರ್ಕಿಂಗ್ ಸೌಲಭ್ಯ ನಿರ್ಮಾಣ ಮತ್ತು ನಿರ್ವಹಣೆಗಾಗಿ ಟೆಂಡರ್ ಸ್ವೀಕರಿಸಿದ್ದಾರೆ.

ರಾಜ್ಯದಲ್ಲಿ ಮೊದಲನೆಯದಾದ ಈ ಹೊಸ ಸೌಲಭ್ಯವನ್ನು 180 ಚದರ ಮೀಟರ್‌ನಲ್ಲಿ 4.59 ಕೋಟಿ ರೂ.ಗಳ ವೆಚ್ಚದಲ್ಲಿ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ ನಿರ್ಮಿಸಲಾಗಿದೆ.

ವಿದ್ಯುತ್ಕಾಂತೀಯ ಸೌಲಭ್ಯವು ವಾಹನಗಳನ್ನು ಎತ್ತುವಂತೆ ಮತ್ತು ಯಾವುದೇ ತೊಂದರೆಯಿಲ್ಲದೆ ಒದಗಿಸಲಾದ ಸೀಮಿತ ಪ್ರದೇಶದಲ್ಲಿ ನಿಲ್ಲಿಸಲು ಸಹಾಯ ಮಾಡುತ್ತದೆ. ಇದರಿಂದ ಇನ್ನು ಮುಂದೆ ಪಾರ್ಕಿಂಗ್ ಸಮಸ್ಯೆಗೆ ಕಡಿವಾಣ ಬೀಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.