ಹುಬ್ಬಳ್ಳಿ: ಹಣಕಾಸು ದುರುಪಯೋಗ ಪ್ರಕರಣದಲ್ಲಿ ಭಾಗಿಯಾಗಿದ್ದ ಕಲಘಟಗಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸಲು ಸಚಿವ ಸಂಪುಟ ತೀರ್ಮಾನಿಸಿದೆ.
ಕಲಘಟಗಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್.ಮೇಟಿ ಅವರ ಬಗ್ಗೆ ಉಪಲೋಕಾಯುಕ್ತರು ಶಿಫಾರಸು ಮಾಡಿದ ಹಿನ್ನೆಲೆಯಲ್ಲಿ ಸಂಪುಟ ಈ ತೀರ್ಮಾನ ತೆಗೆದುಕೊಂಡಿದೆ.
ಅಧಿಕಾರಿ ಮೇಟಿ ಹಲವು ಬಾರಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಕೆಲವು ಪ್ರಮುಖ ವ್ಯಕ್ತಿಗಳ ಬೆಂಬಲದಿಂದ ಅಪಾಯದಿಂದ ಪಾರಾಗುತ್ತಿದ್ದರು. ಆದ್ರೆ, ರಾಜ್ಯ ಸರ್ಕಾರ ಕೊನೆಗೂ ಅವರನ್ನು ಸರ್ಕಾರಿ ಸೇವೆಯಿಂದ ತೆಗೆದು ಹಾಕಲು ಮುಂದಾಗಿದೆ. ಇವರ ಪರವಾಗಿ ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣನವರ್ ಸಾಕಷ್ಟು ಲಾಬಿ ನಡೆಸಿದ್ದರು. ಇದರ ನಡುವೆಯೂ ಮೇಟಿ ಅವರಿಗೆ ಹಿನ್ನಡೆಯಾಗಿದೆ.
ಇದನ್ನೂ ಓದಿ: ಜೆಡಿಎಸ್ ಸದಸ್ಯರ ಅಶಿಸ್ತಿಗೆ ಸಿಟ್ಟಾದ ಸ್ಪೀಕರ್: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಕಾಗೇರಿ