ETV Bharat / state

ಸಿಎಂ ಬದಲಾವಣೆ ಕೇವಲ ಊಹಾಪೋಹ: ಕಟೀಲ್ ಮತ್ತೊಮ್ಮೆ​​​ ಸ್ಪಷ್ಟನೆ

ಮೂರು ರೀತಿಯಲ್ಲಿ ಕಾರ್ಯಾಕಾರಿಣಿ ನಡೆಯುತ್ತದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ನಡೆದಿದೆ. ಈ ಬಾರಿ ಹುಬ್ಬಳ್ಳಿಯಲ್ಲಿ‌ ನಡೆಯುತ್ತಿದೆ. ಸರ್ಕಾರದ ಸುಗಮ ಕಾರ್ಯಗಳಿಗಾಗಿ ಕೆಲವೊಂದು ಬದಲಾವಣೆ‌ ಮಾಡಿದ್ದೇವೆ ಎಂದು ನಳಿನ್​​ ಕುಮಾರ್ ಕಟೀಲ್​​ ಹೇಳಿದರು.

ನಳಿನ್​​ ಕುಮಾರ್ ಕಟೀಲ್​​
ನಳಿನ್​​ ಕುಮಾರ್ ಕಟೀಲ್​​
author img

By

Published : Dec 27, 2021, 9:41 PM IST

ಹುಬ್ಬಳ್ಳಿ : ಸಿಎಂ ಬದಲಾವಣೆ ಆಗುತ್ತಾರೆ ಎಂಬುವುದು ಕೇವಲ ಊಹಾಪೋಹ. ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿಯವರೇ ಇರುತ್ತಾರೆ. ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ ಮರು ದಿನದಿಂದಲೇ ಸಿಎಂ ಬದಲಾವಣೆ ಎಂಬ ಮಾತು ಇತ್ತು. ಆದರೆ‌, ಅವರು 2 ವರ್ಷ ಪೂರೈಸಿ ಪಕ್ಷದ ಆದೇಶದಂತೆ ರಾಜೀನಾಮೆ ನೀಡಿದರು.

ಆ ಬಳಿಕ ಬೊಮ್ಮಾಯಿ ಅವರು ಸಿಎಂ ಆಗಿದ್ದಾರೆ. ಮುಂದಿನ ಚುನಾವಣೆವರೆಗೂ ಅವರೇ ಸಿಎಂ ಆಗಿ ಇರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್ ಕಟೀಲ್​​ ಸ್ಪಷ್ಟಪಡಿಸಿದರು.

ನಳಿನ್​​ ಕುಮಾರ್ ಕಟೀಲ್​​ ಸ್ಪಷ್ಟನೆ

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎರಡು ಪ್ರಮುಖ ವಿಷಯಗಳ ಕಾರ್ಯಾಕಾರಿಣಿ ಚರ್ಚೆ ನಡೆಯಲಿದೆ.‌ ನಾಳೆಯೇ ಆ ಬಗ್ಗೆ ಮಾಹಿತಿ ಕೊಡುತ್ತೇವೆ. ಎಲ್ಲ ರೀತಿಯಲ್ಲಿ ತಯಾರಿ ಮಾಡಿದ್ದೇವೆ. ಜೋಶಿ,‌ ಶೆಟ್ಟರ್ ನೇತೃತ್ವದಲ್ಲೇ ಎಲ್ಲಾ ತಯಾರಿ ನಡೆದಿದೆ ಎಂದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.