ETV Bharat / state

ನಮ್ಮನ್ನು ವಲಸೆ ವಲಸೆ ಎಂದು ಯಾಕೆ ಕರೆಯುತ್ತೀರಿ?: ಸಚಿವ ಬಿ.ಸಿ. ಪಾಟೀಲ್

ಕಾಂಗ್ರೆಸ್ ಪಕ್ಷಕ್ಕೆ ವಿಚ್ಛೇದನ ಕೊಟ್ಟು ಬಂದಿದ್ದೇವೆ. ಮತ್ತೆ ಅದೇ ಪಕ್ಷಕ್ಕೆ ಹೋಗಲು ಹೇಗೆ ಸಾಧ್ಯ? ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರಶ್ನಿಸಿದ್ದಾರೆ. ಬಿಜೆಪಿಯಿಂದ ಗೆದ್ದ ಮೇಲೆ ವಲಸೆ, ಶಾಸಕರು, ಸಚಿವರು ಎಂಬ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಸಚಿವರು ಹೇಳಿದರು.

Minister B.C. Patil
ಕೃಷಿ ಸಚಿವ ಬಿ.ಸಿ. ಪಾಟೀಲ್
author img

By

Published : Jan 12, 2021, 12:23 PM IST

ದಾವಣಗೆರೆ: ನಮ್ಮನ್ನು ವಲಸೆ ವಲಸೆ ಎಂದು ಯಾಕೆ ಕರೆಯುತ್ತೀರಿ?, ಮದುವೆಯಾಗಿ ಬಂದ ಹೆಣ್ಣುಮಗಳು ಅದೇ ಮನೆಯವಳಾಗ್ತಾಳೆ. ಒಂದು ಕೆಟ್ಟ ಸರ್ಕಾರ ಹಾಗೂ ರೈತ ಪರ ಇಲ್ಲದ ಸರ್ಕಾರವನ್ನು ತೆಗೆಯಲು ನಾವು ಹೊರಬಂದಿದ್ದು, ಬಿಜೆಪಿಯಿಂದ‌ ಗೆದ್ದಿದ್ದೇವೆ. ನಾವು ಬಿಜೆಪಿಗರು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ್ ಪ್ರತಿಕ್ರಿಯೆ

ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಮ್ಮರಘಟ್ಟ ಗ್ರಾಮದಲ್ಲಿ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಕಾಂಗ್ರೆಸ್, ಜೆಡಿಎಸ್​ನಿಂದ ಬಂದು ಸೋತವರಿಗೆ ಪರಿಷತ್ ಸದಸ್ಯರನ್ನಾಗಿಸಿ ದೊಡ್ಡತನ ಮೆರೆದಿದ್ದಾರೆ. ಈಗಾಗಲೇ ನಾವು ಕಾಂಗ್ರೆಸ್ ಪಕ್ಷಕ್ಕೆ ವಿಚ್ಛೇದನ ಕೊಟ್ಟು ಬಂದಿದ್ದೇವೆ. ಮತ್ತೆ ಅದೇ ಪಕ್ಷಕ್ಕೆ ಹೋಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಓದಿ: ಬಿಜೆಪಿಗೆ ನಾನು ಹೊಸ ಸೊಸೆ ಬಂದಂತೆ ಬಂದಿದ್ದೇನೆ: ಬಿ.ಸಿ. ಪಾಟೀಲ

ನಟ ದರ್ಶನ ಅವರು 5ಜಿ ಯಿಂದ ದೊಡ್ಡ ಸ್ಕ್ಯಾಮ್ ಇದೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಒಟಿಟಿ ಸಿನಿಮಾ ರಂಗಕ್ಕೇನು ಮಾರಕವಲ್ಲ. ಒಟಿಟಿ ಆಧುನಿಕತೆಗೆ ತಕ್ಕ ಹಾಗೆ ಕೆಲ ಬದಲಾವಣೆ ಆಗುತ್ತೆ. ಆದರೆ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದಾಗ ಸಿಗುವ ಖುಷಿ ಒಟಿಟಿ, ಟಿವಿಯಲ್ಲಿ ಸಿಗಲ್ಲ. ಚಿತ್ರರಂಗದಲ್ಲಿ ನಿರ್ದೇಶಕರು ಮನೆ ಮಠ ಮಾರಿಕೊಂಡು ಸಿನಿಮಾ ಮಾಡಿರುತ್ತಾರೆ. ಹೀರೋಗಳು ತಮ್ಮ ಪರಿಶ್ರಮ ಹಾಕಿ ಸಿನಿಮಾ ಮಾಡುತ್ತಿದ್ದು, ಚಲನಚಿತ್ರಗಳನ್ನು ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಹೊಡೆದು ಥಿಯೇಟರ್​​ನಲ್ಲಿ ನೋಡಿದ್ರೆ ಒಂದು ರೀತಿ ಖುಷಿ ಇರುತ್ತದೆ ಎಂದು ಸಚಿವ ಬಿಸಿಪಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.