ETV Bharat / state

ಸಮಾನತೆ ಸಾರಿದ ಬಾಬಾ ಸಾಹೇಬರ ಮೂರ್ತಿಗಿಲ್ಲ ನೆಲೆ: ಸವರ್ಣೀಯರ ವಿರುದ್ಧ ಹೋರಾಟಕ್ಕಿಳಿದ ದಲಿತರು - ಬಾಬಾ ಸಾಹೇಬರ ಮೂರ್ತಿ ಸ್ಥಾಪನೆಗೆ ಸವರ್ಣೀಯರ ತಕರಾರು

ದಾವಣಗೆರೆ ಹಾಗು ವಿಜಯನಗರ ಜಿಲ್ಲೆಯ ಗಡಿ ಗ್ರಾಮವಾಗಿರುವ ಚಿಕ್ಕಮೆಗಳಗೇರಿ ಗ್ರಾಮದಲ್ಲಿ ಬಾಬಾ ಸಾಹೇಬರಿಗೆ ನೆಲೆ ಇಲ್ಲದಂತಾಗಿದೆ. ಇದೇ ಗ್ರಾಮದ ದಲಿತರೆಲ್ಲಾ ಸೇರಿ 2018ರಲ್ಲಿ ಅಂಬೇಡ್ಕರ್​ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.

ಸಮಾನತೆ ಸಾರಿದ ಬಾಬಾ ಸಾಹೇಬರ ಮೂರ್ತಿಗಿಲ್ಲ ನೆಲೆ

author img

By

Published : Apr 11, 2022, 8:20 PM IST

Updated : Apr 11, 2022, 9:30 PM IST

ದಾವಣಗೆರೆ: ಈ ಗ್ರಾಮದಲ್ಲಿ ಅಂಬೇಡ್ಕರ್ ಮೂರ್ತಿಗೆ ನೆಲೆ ಇಲ್ಲದಂತಾಗಿದೆ. ದೇಶದ ದೀನ ದಲಿತರಿಗೆ ಸೂರನ್ನು ನೀಡಿದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಜಾಗ ನೀಡಿ ಎಂದು ದಲಿತರು ಸವರ್ಣೀಯರ ಮುಂದೆ ಹೋರಾಟಕ್ಕೆ ಇಳಿಯುವಂತಾಗಿದೆ. ಗ್ರಾಮದ ದಲಿತರು ಕೋರ್ಟ್ ಆದೇಶಕ್ಕೆ ತಲೆಬಾಗಿ ಮೂರ್ತಿಯನ್ನು ಮೊದಲಿದ್ದ ಸ್ಥಳದಿಂದ ಬೇರೆ ಕಡೆ ಸ್ಥಳಾಂತರ ಮಾಡಿದ್ದರು. ಅದರೆ, ಸ್ಥಳಾಂತರ ಮಾಡಿದ ಸ್ಥಳದಲ್ಲಿಯೂ ಮೂರ್ತಿ ಪ್ರತಿಷ್ಠಾಪಿಸಲು ಸವರ್ಣಿಯರು ಮತ್ತೆ ತಕರಾರು ತೆಗೆದಿದ್ದಾರೆ.

ದಾವಣಗೆರೆ ಹಾಗು ವಿಜಯನಗರ ಜಿಲ್ಲೆಯ ಗಡಿ ಗ್ರಾಮವಾಗಿರುವ ಚಿಕ್ಕಮೆಗಳಗೇರಿ ಗ್ರಾಮದಲ್ಲಿ ಬಾಬಾ ಸಾಹೇಬರಿಗೆ ನೆಲೆ ಇಲ್ಲದಂತಾಗಿದೆ. ಇದೇ ಗ್ರಾಮದ ದಲಿತರೆಲ್ಲಾ ಸೇರಿ 2018ರಲ್ಲಿ ಅಂಬೇಡ್ಕರ್​ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಪ್ರತಿಷ್ಠಾಪನೆ‌ ಮಾಡಿದ ಸ್ಥಳದಲ್ಲಿ ದೇವಸ್ಥಾನವಿದೆ, ಕರಿಕಲ್ಲು ಇದೆ. ಇಂತಹ ಸ್ಥಳದಲ್ಲಿ ಅಂಬೇಡ್ಕರ್​​ ಮೂರ್ತಿ ಇರುವುದು ಬೇಡ ಎಂದು ಗ್ರಾಮದ ಕೆಲವರು ತಕರಾರು ತೆಗೆದಿದ್ದರು. ಇದೇ ವಿಚಾರಕ್ಕಾಗಿ ಹೋರಾಟವಾಗಿ ಕೊನೆಗೂ ಹೈಕೋರ್ಟ್ ಮೆಟ್ಟಿಲೇರಿತ್ತು.

ಸಮಾನತೆ ಸಾರಿದ ಬಾಬಾ ಸಾಹೇಬರ ಮೂರ್ತಿಗಿಲ್ಲ ನೆಲೆ

ಇದನ್ನೂ ಓದಿ: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪುಂಡರ ಜೀಪ್​ ರೈಡಿಂಗ್ : ಪರಿಸರ ಪ್ರೇಮಿಗಳ ಆಕ್ರೋಶ

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅಂಬೇಡ್ಕರ್ ಮೂರ್ತಿಯನ್ನು ಬೇರೆ ಕಡೆ ಸ್ಥಾಪಿಸಲು ಆದೇಶ ಮಾಡಿತ್ತು. ಕೋರ್ಟ್ ಆದೇಶದಂತೆ ಕರಿಕಲ್ಲು, ದೇವಸ್ಥಾನ ಇರುವ ಸ್ಥಳದಿಂದ ತೆಗೆದು ಆ ಮೂರ್ತಿಯನ್ನು ಆಂಜನೇಯ ದೇವಸ್ಥಾನದ ಎದುರಿಗೆ ಸ್ಥಳಾಂತರ ಮಾಡಿ ಪ್ರತಿಷ್ಠಾಪಿಸಲಾಗಿದೆ. ದುರಾದೃಷ್ಟ ಎಂದರೆ ಆ ಸ್ಥಳದಿಂದಲೂ ಮೂರ್ತಿ ತೆಗಿಸಲು ಕೆಲವರು ಹುನ್ನಾರ ನಡೆಸಿದ್ದು, ದಲಿತರನ್ನು ಕೆರಳಿಸಿದೆ.

ಈ ಸಮಸ್ಯೆಯಿಂದ ಆಗಾಗ್ಗೆ ಜಗಳ ನಡೆಯುತ್ತಲೇ ಇದೆ. ಇದಕ್ಕೆ ಗ್ರಾಮದ ಪರಿಶಿಷ್ಟ ಪಂಗಡ ವ್ಯಕ್ತಿಯೇ ಕಾರಣ ಎಂದು ಆರೋಪಿಸಲಾಗುತ್ತಿದೆ. ಕೆಲ ಸವರ್ಣೀಯರು ಆತನ ಹಿಂದೆ ನಿಂತು ಆತನನ್ನು ದಲಿತರ ವಿರುದ್ಧ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Last Updated : Apr 11, 2022, 9:30 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.