ದಾವಣಗೆರೆ: ಕೊರೊನಾ ಭೀತಿ ದೇಶಾದ್ಯಂತ ದೂರವಾಗಲಿ ಎಂದು ಪ್ರಾರ್ಥಿಸಿ ನಗರದ ರಾಘವೇಂದ್ರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಿತ್ಯ ರಾಯರ ಸನ್ನಿಧಾನದಲ್ಲಿ ವಿಶೇಷ ಪೂಜೆ ಪುನಸ್ಕಾರ, ಹೋಮ ಹವನ ನೆರವೇರಿಸಲಾಗುತ್ತಿದೆ. ಹೆಮ್ಮಾರಿ ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿದ್ದು, ಜನರು ಭಯಭೀತರಾಗಿದ್ದಾರೆ. ದೇಶದೆಲ್ಲೆಡೆ ಸೋಂಕು ದೂರವಾಗಲಿ ಎಂದು ಪ್ರಾರ್ಥಿಸಿ ಮಠದ ಅರ್ಚಕರು ಪೂಜೆ ಸಲ್ಲಿಸಿದರು.