ETV Bharat / state

ಭಗವದ್ಗೀತೆ ಎಲ್ಲಾ ಕಷ್ಟಗಳನ್ನು ಪರಿಹರಿಸುವ ಪವಿತ್ರ ಗ್ರಂಥ: ಶ್ರೀ ಥಾವರ್ ಚಂದ್ ಗೆಹ್ಲೋಟ್ - ಶ್ರೀ ಗಂಗಾ ಧರಣೇಂದ್ರ ಸರಸ್ವತಿ ಸ್ವಾಮಿಜೀ

ಮಹಾಭಾರತ ಯುದ್ಧದ ಆರಂಭದ ಮೊದಲು, ಶ್ರೀಕೃಷ್ಣನು ಅರ್ಜುನನಿಗೆ ಜೀವನದಲ್ಲಿ ಕರ್ಮದ ವಿವಿಧ ಅಂಶಗಳನ್ನು ವಿವರಿಸಿದನು ಮತ್ತು ಅವನು ಬೋಧಿಸಿದ ಬೋಧನೆಗಳನ್ನು ಶ್ರೀಮದ್ ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಗೀತೆಯು ಜ್ಞಾನ, ಧರ್ಮ, ಸಂಸ್ಕೃತಿಯಾಗಿದೆ. ಗೀತೆಯು ಶುಭ ಜೀವನದ ಪುಸ್ತಕವಾಗಿದೆ. ಇದು ಒತ್ತಡ ಮುಕ್ತ ಜೀವನವನ್ನು ನಡೆಸುವ ಕಲೆಯನ್ನು ನಮಗೆ ಕಲಿಸುತ್ತದೆ ಎಂದರು.

Shri Thawar Chand Gehlot spoke on Bhagavad Gita at Davangere
ಭಗವದ್ಗೀತೆ ಎಲ್ಲಾ ಕಷ್ಟಗಳನ್ನು ಪರಿಹರಿಸುವ ಪವಿತ್ರ ಗ್ರಂಥ:ಶ್ರೀ ಥಾವರ್ ಚಂದ್ ಗೆಹ್ಲೋಟ್
author img

By

Published : Dec 4, 2022, 2:48 PM IST

ದಾವಣಗೆರೆ: ಧಾರ್ಮಿಕ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯ ಚಿಂತನೆಯೊಂದಿಗೆ ಮುನ್ನಡೆಯುವ ಜವಾಬ್ದಾರಿ ನಮ್ಮ ಯುವ ಪೀಳಿಗೆಯ ಮೇಲಿದೆ. ಯುವಕರು ಧರ್ಮ-ಸಂಸ್ಕೃತಿ ಮತ್ತು ಶ್ರೀ ಭಗವದ್ಗೀತಾ ಜ್ಞಾನವನ್ನು ಅಳವಡಿಸಿಕೊಂಡು ಸರ್ವರೂ ಸಮಾನರು, ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಸಮಾಜದಲ್ಲಿ ಶಾಂತಿ, ಸಮಾನತೆ, ಮಾನವೀಯತೆಯನ್ನು ಕಾಪಾಡಲು ಮುಂದಾಗಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

ದಾವಣಗೆರೆ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಯೋಜಿಸಲಾಗಿದ್ದ ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ-2ರ ರಾಜ್ಯ ಮಟ್ಟದ ಶ್ರೀ ಭಗವದ್ಗೀತಾ ಅಭಿಯಾನದ ಮಹಾ ಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 2007 ರಿಂದ ಶ್ರೀ ಗಂಗಾ ಧರಣೇಂದ್ರ ಸರಸ್ವತಿ ಸ್ವಾಮೀಜಿ ಅವರ ಮೂಲಕ ಶ್ರೀ ಭಗವದ್ಗೀತಾ ಅಭಿಯಾನವನ್ನು ನಡೆಸಲಾಗುತ್ತಿದೆ. ಬಾಲ್ಯದಿಂದಲೇ ಗೀತಾ ಜ್ಞಾನವನ್ನು ನೀಡಲಾಗುತ್ತಿದೆ. ನಿಮ್ಮ ಈ ಕಾರ್ಯ ಶ್ಲಾಘನೀಯ, ಇದಕ್ಕಾಗಿ ನಾವು ನಿಮಗೆ ಕೃತಜ್ಞರಾಗಿರುತ್ತೇವೆ ಎಂದರು.

ಮಹಾಭಾರತ ಯುದ್ಧದ ಆರಂಭದ ಮೊದಲು, ಶ್ರೀಕೃಷ್ಣನು ಅರ್ಜುನನಿಗೆ ಜೀವನದಲ್ಲಿ ಕರ್ಮದ ವಿವಿಧ ಅಂಶಗಳನ್ನು ವಿವರಿಸಿದನು ಮತ್ತು ಅವನು ಬೋಧಿಸಿದ ಬೋಧನೆಗಳನ್ನು ಶ್ರೀಮದ್ ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ. ಗೀತೆಯು ಜ್ಞಾನ, ಧರ್ಮ, ಸಂಸ್ಕೃತಿಯಾಗಿದೆ. ಗೀತೆಯು ಶುಭ ಜೀವನದ ಪುಸ್ತಕವಾಗಿದೆ. ಇದು ಒತ್ತಡ ಮುಕ್ತ ಜೀವನವನ್ನು ನಡೆಸುವ ಕಲೆಯನ್ನು ನಮಗೆ ಕಲಿಸುತ್ತದೆ ಎಂದು ನುಡಿದರು.

ಶ್ರೀಮದ್ ಭಗವದ್ಗೀತೆಯು ಮಾನವ ಜೀವನದ ಎಲ್ಲಾ ಕಷ್ಟಗಳನ್ನು ಪರಿಹರಿಸುವ ಪವಿತ್ರ ಗ್ರಂಥವಾಗಿದೆ. ಇದು ಹಂತ ಹಂತವಾಗಿ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಹೇಗೆ ಮುಂದುವರಿಯಬೇಕೆಂದು ನಮಗೆ ಕಲಿಸುತ್ತದೆ. ಗೀತೆಯಲ್ಲಿ ಹೀಗೆ ಹೇಳಲಾಗಿದೆ- "ಕೋಪವು ಗೊಂದಲವನ್ನು ಉಂಟುಮಾಡುತ್ತದೆ, ಗೊಂದಲವು ಬುದ್ಧಿಯನ್ನು ಕದಡುತ್ತದೆ." ಬುದ್ಧಿಯು ವಿಚಲಿತವಾದಾಗ, ವಿವೇಚನಾ ಸಾಮರ್ಥ್ಯವೂ ದುರ್ಬಲಗೊಳ್ಳುತ್ತದೆ. ಒಬ್ಬ ವ್ಯಕ್ತಿಯು ತಾರ್ಕಿಕ ಸಾಮರ್ಥ್ಯವನ್ನು ಕಳೆದುಕೊಂಡಾಗ, ಅವನು ಅವನತಿಯತ್ತ ಸಾಗುತ್ತಾನೆ. ಅದಕ್ಕಾಗಿಯೇ ಕೋಪವನ್ನು ತಪ್ಪಿಸಬೇಕು." ಎಂದು ಅವರು ಸಲಹೆ ನೀಡಿದರು.

ಭಾರತದ ಭೂಮಿ ಋಷಿ, ಮುನಿ, ತ್ಯಾಗಿ-ತಪಸ್ವಿ ಮತ್ತು ಸಂತ-ಮಹಾತ್ಮರ ನಾಡು. ಈ ಪುಣ್ಯಭೂಮಿಯಲ್ಲಿ ಅನೇಕ ಋಷಿಮುನಿಗಳು ಮತ್ತು ಸಂತರು ಇಳಿದಿದ್ದಾರೆ. ತಮ್ಮ ಕಠೋರ ತಪಸ್ಸು, ದುಡಿಮೆ, ಆರಾಧನೆಯ ಶಕ್ತಿಯಿಂದ ವಿಶ್ವಮಟ್ಟದಲ್ಲಿ ಧರ್ಮ, ಸಂಸ್ಕೃತಿ, ಅಧ್ಯಾತ್ಮದ ಪತಾಕೆಯನ್ನು ಹಾರಿಸಿ, ಗೀತಾ ಜ್ಞಾನದಿಂದ ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುವ ಮೂಲಕ ಮಾನವನ ಬದುಕನ್ನು ಸಾರ್ಥಕಗೊಳಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ.

ಮುಂದುವರೆದು, ಒಬ್ಬ ಮನುಷ್ಯನು ಮಾಡುವ ಕ್ರಿಯೆಗಳ ಪ್ರಕಾರ, ಅವನು ಅದರ ಫಲಿತಾಂಶವನ್ನು ಪಡೆಯುತ್ತಾನೆ ಎಂದು ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ಆದುದರಿಂದ ಜೀವನದಲ್ಲಿ ಒಳ್ಳೆಯ ಕೆಲಸಗಳಿಗೆ ಪ್ರಾಮುಖ್ಯತೆ ನೀಡಬೇಕು. ಗೀತೆಯ ಜ್ಞಾನವನ್ನು ಸ್ವೀಕರಿಸೋಣ ಮತ್ತು ಅದನ್ನು ಅನುಷ್ಠಾನಗೊಳಿಸುವ ಮೂಲಕ ಜೀವನವನ್ನು ಸಾರ್ಥಕಗೊಳಿಸೋಣ ಎಂದು ಹೇಳಿದರು.

ಇದನ್ನು ಓದಿ:ನಾನಾಗಲಿ, ಜಾರಕಿಹೊಳಿ ಆಗಲಿ ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ: ಮಹೇಶ್ ಕುಮಟಳ್ಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.