ದಾವಣಗೆರೆ : ಜೆಡಿಎಸ್-ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ, ತ್ಯಾಗ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದಲೇ ನಮಗೆ ಅಧಿಕಾರ ಸಿಕ್ತು ಎಂದು ಹೇಳುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಎಡವಟ್ಟು ಮಾಡಿಕೊಂಡಿದ್ದಾರೆ.
ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್.ಪಟೇಲ್ ಅವರ ಜನ್ಮದಿನ ಹಿನ್ನೆಲೆ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಮಾತನಾಡಿದ ರೇಣುಕಾಚಾರ್ಯ, ಜೆಎಡಿಎಸ್-ಕಾಂಗ್ರೆಸ್ ಪಕ್ಷದ 17 ಶಾಸಕರು ರಾಜೀನಾಮೆ ನೀಡಿ, ತ್ಯಾಗ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದರಿಂದಲೇ ನಮಗೆ ಅಧಿಕಾರ ಸಿಕ್ತು ಎಂದು ಹೇಳಿ, ಬಳಿಕ ಬಾಯಿ ತಪ್ಪಿನಿಂದ ಈ ಮಾತು ಬಂದಿದೆ. ಅವರು ಬಿಜೆಪಿ ಸೇರ್ಪಡೆಯಾಗಿಲ್ಲ, ಆದರೆ ಅನರ್ಹ ಶಾಸಕರ ತ್ಯಾಗದಿಂದ ನಮಗೆ ಕುರ್ಚಿ ಸಿಕ್ಕಿದೆ. ಅವರ ವಿರುದ್ಧ ಯಾರು ಹೇಳಿಕೆ ಕೊಡಬಾರದು ಸ್ಪಷ್ಟನೆ ಕೊಟ್ಟರು.
ಪಕ್ಷಾತೀತವಾಗಿ ವಿಜಯನಗರ ಜಿಲ್ಲೆ ಮಾಡುವಂತೆ ಕೋರಲಾಗಿದೆ. ಜಿಲ್ಲೆ ಮಾಡಿದರೆ ತಪ್ಪೇನಿಲ್ಲ. ಬದ್ದತೆ ಇದ್ದರೆ ಎಲ್ಲವು ಆಗುತ್ತೆ. ನಾಳೆ ಸಿಎಂ ಯಡಿಯೂರಪ್ಪ ಸ್ಥಳೀಯ ಶಾಸಕರ ಸಭೆ ಕರೆದಿದ್ದಾರೆ. ಗೊಂದಲ ಎಲ್ಲಾ ಬಗೆಹರಿಯುತ್ತೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಯಡಿಯೂರಪ್ಪ ಅವರ ಬಂಡವಾಳ ಬಯಲು ಮಾಡುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅಧಿವೇಶನದಲ್ಲಿ ರಣಾಂಗಣಕ್ಕೆ ಬರುತ್ತೇನೆ ಎಂದು ಎಂಟಿಬಿ ಗೆ ಬೆದರಿಕೆ ಹಾಕಿದ್ದರು. ಡಿಕೆಶಿ ವಿನಾಕಾರಣ ಅರಿವೆ ಹಾವು ಬಿಡುತ್ತಾರೆ ಎಂದರು ತಿರುಗೇಟು ನೀಡಿದರು.