ದಾವಣಗೆರೆ: ಮಸೀದಿ ಹಾಗೂ ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಿರುದ್ಧ ಜಿಲ್ಲೆಯಲ್ಲಿ ಪ್ರಗತಿಪರ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ನಗರದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸುತ್ತಿದ್ದಾರೆ, ಮುಸ್ಲಿಂ ಕೇರಿಗಳಿಗೆ ಬಂದ ಸರ್ಕಾರದ ಹಣವನ್ನು ಹಿಂದೂಗಳ ಕೇರಿಗೆ ಕೊಡುತ್ತೇನೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಬಾಯಿಗೆ ಬಂದಂತೆ ಹೇಳಿಕೆ ಕೊಡದೇ ಎಚ್ಚರಿಕೆಯಿಂದ ಹೇಳಿಕೆ ನೀಡಬೇಕು, ನಾವೆಲ್ಲ ಕಾರ್ಮಿಕರ ಮಕ್ಕಳು, ರೈತರ ಮಕ್ಕಳು. ನಮ್ಮೆಲ್ಲರ ಮೈಯಲ್ಲಿ ಕೆಂಪು ರಕ್ತ ಹರಿಯುತ್ತಿದೆ, ಕೋಮುವಾದಿ ಎಂಪಿ ರೇಣುಕಾಚಾರ್ಯ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಮುಸ್ಲಿಮರ ವಿರುದ್ಧ ನೀಡಿದ ಹೇಳಿಕೆಯನ್ನು ಹಿಂಪಡೆಯಲು ಆಗ್ರಹಿಸಿ ಎಸಿಯವರಿಗೆ ಮನವಿ ಸಲ್ಲಿಸಿದರು.