ದಾವಣಗೆರೆ: ನಗರದ ನಿವಾಸಿ ಮಂಜಪ್ಪ ಎಂಬ ಇವರು ಅತ್ಯುತ್ತಮ ಪವರ್ ಲಿಫ್ಟರ್. ಪವರ್ ಲಿಫ್ಟಿಂಗ್ ನಲ್ಲಿ ರಾಜ್ಯದ ಗಮನ ಸೆಳೆದಿರುವ ಈ ಕ್ರೀಡಾಪಟು, ಇದೇ ಬರುವ ಸೆಪ್ಟಂಬರ್ 15 ರಿಂದ 20 ರವರೆಗೆ ಕೆನಡಾದಲ್ಲಿ ನಡೆಯುವ ಕಾಮನ್ ವೆಲ್ತ್ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆಯಾಗಿದ್ದಾರೆ. ಆದರೆ, ವಿದೇಶಕ್ಕೆ ಹಾರುವಷ್ಟು ಹಣ ಇವರ ಬಳಿ ಇಲ್ಲದಂತಾಗಿದೆ.
ಕಳೆದ ವರ್ಷ ಇಂದೋರ್ ನಲ್ಲಿ ನಡೆದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ 175 ಕೆಜಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿಕೊಂಡಿದ್ದರು. ಹಾಗಾಗಿ ಇಂಡಿಯನ್ ಪವರ್ ಲಿಫ್ಟಿಂಗ್ ಅಸೋಸಿಯೇಶನ್, ಈ ವರ್ಷ ಜನವರಿಯಲ್ಲಿ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ಗೆ ಇವರನ್ನು ಆಯ್ಕೆ ಮಾಡಿತ್ತು. ಇಲ್ಲಿಯೂ ಸಹ ಮಂಜಪ್ಪ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ಇಲ್ಲಿಯವರೆಗೆ ಮಂಜಪ್ಪ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು 36 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಇದನ್ನು ಗಮನಿಸಿದ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಅಸೋಶಿಯೇಶನ್, ಬರುವ ಸೆಪ್ಟಂಬರ್ 15 ರಿಂದ 20 ರವರೆಗೆ ಕೆನಡಾದಲ್ಲಿ ನಡೆಯುವ ಕಾಮನ್ ವೆಲ್ತ್ ಅಂತರಾಷ್ಟ್ರೀಯ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೆ ಆಯ್ಕೆ ಮಾಡಿದೆ. ಆದರೆ ಅವಕಾಶ ಹುಡುಕಿಕೊಂಡು ಬಂದರೂ ಹೋಗಲು ಸಾಧ್ಯವಾಗುತ್ತಿಲ್ಲ ಕಾರಣ ಅಷ್ಟು ದೂರ ಹೋಗಲು ಇವರ ಬಳಿ ಹಣವಿಲ್ಲ.
ಎರಡು ವರ್ಷಗಳ ಹಿಂದೆ ಇಸ್ರೇಲ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದರು.ಆಗಲೂ ಸಹ ಆರ್ಥಿಕ ತೊಂದರೆಯಿಂದಾಗಿ ಅಲ್ಲಿಗೆ ಹೋಗಲು ಆಗಿರಲಿಲ್ಲ. ಇನ್ನು ಮನೆಯ ಆರ್ಥಿಕ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಒಂದು ಹೊತ್ತು ಊಟಕ್ಕೂ ಕಷ್ಟಪಡಬೇಕು. ಜೀವನ ಸಾಗಿಸುವ ಸಲುವಾಗಿ ಮಂಜಪ್ಪ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 8 ಗಂಟೆಯವರೆಗೆ ಹಮಾಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಸದ್ಯ ಮಂಜಪ್ಪ ಕೆನಡಾಗೆ ಹೋಗಿ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದು, ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಮಂಜಪ್ಪಗೆ ನೆರವು ನೀಡಲು ಬಯಸುವ ದಾನಿಗಳು ಈ ಬ್ಯಾಂಕ್ ಖಾತೆಗೆ ಆರ್ಥಿಕ ಸಹಾಯ ಮಾಡಬಹುದಾಗಿದೆ.
ಮಂಜಪ್ಪ ಪಿ. ಕರ್ನಾಟಕ ಬ್ಯಾಂಕ್ ದಾವಣಗೆರೆ ಮಂಡಿಪೇಟ್ ಶಾಖೆ ಐಎಫ್ ಎಸ್ ಸಿ ಕೋಡ್ KARB0000182.
Account number -1822500101660001