ETV Bharat / state

ಮಳೆ ನೀರಿನಿಂದ ಅಡಕೆ ತೋಟ‌ ಜಲಾವೃತ: ಮಳೆನೀರಿನ ನಡುವೆ ಅಡಕೆ ಕೊಯ್ಲು ಮಾಡಿದ ರೈತ - ಈಟಿವಿ ಭಾರತ ಕನ್ನಡ

ದಾವಣಗೆರೆ ತಾಲೂಕಿನಲ್ಲಿ ಭಾರಿ ಮಳೆಗೆ ಕೆರೆಕೋಡಿ ಬಿದ್ದ ಪರಿಣಾಮ ಅಡಕೆ ತೋಟಗಳು ಜಲಾವೃತವಾಗಿದೆ. ಮಳೆಗೆ ಅಡಕೆ ಬೆಳೆಗಳು ಕೊಳೆರೋಗಕ್ಕೆ ತುತ್ತಾಗುವ ಭೀತಿ ರೈತರಿಗೆ ಎದುರಾಗಿದ್ದು, ಜಲಾವೃತವಾದ ತೋಟದಲ್ಲಿ ಅಡಕೆ ಕೊಯ್ಲು ಮಾಡುತ್ತಿದ್ದಾರೆ.

nut-plantation-flooded-with-rain-water
ಮಳೆ ನೀರಿನಿಂದ ಅಡಿಕೆ ತೋಟ‌ ಜಲಾವೃತ : ಮಳೆನೀರಿನ ನಡುವೆ ಅಡಿಕೆ ಕೊಯ್ಲು ಮಾಡಿದ ರೈತ
author img

By

Published : Sep 14, 2022, 3:24 PM IST

ದಾವಣಗೆರೆ : ಮಳೆ ನೀರಿನಿಂದ ಇಲ್ಲಿನ ಅಡಕೆ ತೋಟ‌ಗಳು ಜಲಾವೃತವಾಗಿದ್ದು, ರೈತರು ಜಲಾವೃತವಾದ ತೋಟದಲ್ಲೇ ಅಡಿಕೆ ಕೊಯ್ಲು ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಬಳಿಯ ಕೆರೆಯಾಗಲಹಳ್ಳಿಯ ಜಮೀನುಗಳು ಬಾರಿ ಮಳೆಗೆ ಕೆರೆಕೋಡಿ ಬಿದ್ದು ಜಲಾವೃತವಾಗಿದೆ.

ಜಲಾವೃತವಾದ ತೋಟದಲ್ಲಿ ರೈತರು ಫಸಲಿಗೆ ಬಂದ ಅಡಕೆ ಕೊಯ್ಲು ಮಾಡಲು ಪರದಾಡುವಂತಾಗಿದೆ. ಸದ್ಯ ಅಡಕೆಗೆ ಉತ್ತಮ ಬೆಲೆ ದೊರೆಯುತ್ತಿದ್ದು, ಕ್ವಿಂಟಾಲ್​ಗೆ 60 ಸಾವಿರ ರೂ. ತಲುಪಿರುವುದರಿಂದ ಜಲಾವೃತವಾದ ತೋಟದಲ್ಲಿಯೇ ರೈತರು ಅಡಕೆ ಕೊಯ್ಲು ಮಾಡುತ್ತಿದ್ದಾರೆ.

ಮಳೆ ನೀರಿನಿಂದ ಅಡಿಕೆ ತೋಟ‌ ಜಲಾವೃತ : ಮಳೆನೀರಿನ ನಡುವೆ ಅಡಕೆ ಕೊಯ್ಲು ಮಾಡಿದ ರೈತ

ಇನ್ನು ಕೆಲ ರೈತರು ತೆಪ್ಪ ಹಾಗೂ ಉದ್ದನೆಯ ಕೋಲು ಬಳಸಿ ಅಡಕೆ ಕೊಯ್ಯುತ್ತಿದ್ದಾರೆ. ಅಡಕೆಗೆ ಉತ್ತಮ ಬೆಲೆ ದೊರೆಯುತ್ತಿದ್ದರೂ ಕೆರೆ ನೀರು ಬಂದು ತೋಟಗಳಿಗೆ ನುಗ್ಗಿರುವುದರಿಂದ ರೈತರಲ್ಲಿ ಆತಂಕ ಮನೆ ಮಾಡಿದೆ. ಜಲಾವೃತವಾಗಿರುವ ತೋಟಗಳಲ್ಲಿ ಅಡಕೆಯನ್ನು ಹಾಗೇ ಬಿಟ್ಟರೆ ಕೊಳೆ ರೋಗಕ್ಕೆ ತುತ್ತಾಗುವ ಆತಂಕ ರೈತರಿಗೆ ಎದುರಾಗಿದೆ.

ಇದನ್ನೂ ಓದಿ : ದಾವಣಗೆರೆಯಲ್ಲಿ ಧಾರಾಕಾರ ಮಳೆಗೆ ಒಡೆದ ಕೆರೆ ಏರಿ.. ಮುನ್ನೂರು ಎಕರೆ ಜಮೀನಿಗೆ ನುಗ್ಗಿದ ನೀರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.