ETV Bharat / state

ದಾವಣಗೆರೆಯಲ್ಲಿ ಇಂದು ಒಂದೂ ಕೊರೊನಾ ಪಾಸಿಟಿವ್​​ ಇಲ್ಲ... ನಿಟ್ಟುಸಿರು ಬಿಟ್ಟ ಬೆಣ್ಣೆ ನಗರಿ!

author img

By

Published : May 6, 2020, 10:57 PM IST

ದಾವವಣಗೆರೆಯಲ್ಲಿ ಇಂದು ಒಂದೂ ಕೊರೊನಾ ವೈರಸ್​ ಪ್ರಕರಣ ವರದಿಯಾಗದಿರುವುದು ಜಿಲ್ಲೆಯ ಜನರನ್ನು ಕೊಂಚ ನಿರಾಳರನ್ನಾಗಿ ಮಾಡಿದೆ.

ದಾವಣಗೆರೆಯಲ್ಲಿ ಇಂದು ಕೊರೊನಾ ಪಾಸಿಟಿವ್​ ಪ್ರಕರಣ ಇಲ್ಲ

ದಾವಣಗೆರೆ: ಕಳೆದ ಎರಡು ದಿನ ಬೆಣ್ಣೆ ನಗರಿಯಲ್ಲಿ ಕೊರೊನಾ ಆತಂಕ ಸೃಷ್ಟಿಸಿತ್ತು. ಆದರೆ ಇಂದು ಒಂದೂ ಪಾಸಿಟಿವ್​ ಕೇಸ್​ ಪತ್ತೆಯಾಗಿಲ್ಲ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ. ಇದು ಸ್ವಲ್ಪಮಟ್ಟಿಗೆ ಸಮಾಧಾನ ತರುವಂತೆ ಮಾಡಿದೆ. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 95 ಜನರ ಸ್ಯಾಂಪಲ್ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.

ಇಂದು 180 ಸ್ಯಾಂಪಲ್​​ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ‌. ಇನ್ನು 288 ಜನರ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ಬರಬೇಕಿದೆ. ದಾವಣಗೆರೆಯಲ್ಲಿ ಒಟ್ಟು 44 ಕೊರೊನಾ ಸೋಂಕಿತರಿದ್ದು, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ. 39 ಆ್ಯಕ್ಟೀವ್ ಕೊರೊನಾ ಸೋಂಕಿತರಿದ್ದು, ಚಿಕಿತ್ಸೆ ಮುಂದುವರೆದಿದೆ.

ಸೋಂಕು ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ‌. ಇಂದು ಸಹ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ ಮುಂದುವರೆದಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಿಗೆ ಹೋಗುವುದಕ್ಕೆ ಬ್ರೇಕ್ ಹಾಕಲಾಗಿದೆ. ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.