ETV Bharat / state

ರಾಜಕೀಯಕ್ಕೋಸ್ಕರ ಕೊಲೆಗಳು ನಡೆಯುತ್ತಿವೆ, ಇವುಗಳನ್ನು ಹತೋಟಿಗೆ ತರಬೇಕು: ಸಚಿವ ಮಾಧುಸ್ವಾಮಿ

author img

By

Published : Jul 30, 2022, 5:28 PM IST

ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರು ಅವರ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದರು- ಹಿಂದೂ-ಮುಸ್ಲಿಂ ಆಗಿದ್ದರೂ ಅವರೆಲ್ಲ ಒಡನಾಡಿಗಳಾಗಿದ್ದರು- ಸಚಿವ ಮಾಧುಸ್ವಾಮಿ

murders-are-happening-for-politics-in-state-says-minister-jc-madhuswamy
ರಾಜ್ಯದಲ್ಲಿ ರಾಜಕೀಯಕ್ಕೋಸ್ಕರ ಕೊಲೆಗಳು ನಡೆಯುತ್ತಿವೆ, ಇವುಗಳನ್ನು ಹತೋಟಿಗೆ ತರಬೇಕು: ಸಚಿವ ಮಾಧುಸ್ವಾಮಿ

ದಾವಣಗೆರೆ: ರಾಜ್ಯದಲ್ಲಿ ರಾಜಕೀಯಕ್ಕೋಸ್ಕರ ಕೊಲೆ‌ ಮಾಡುತ್ತಿರುವುದು ತಪ್ಪು, ಅದು ದುರ್ದೈವ. ಇಂತಹ ಕೊಲೆಗಳನ್ನು ಹತೋಟಿಗೆ ತೆಗೆದುಕೊಳ್ಳಬೇಕು. ಇವುಗಳನ್ನು ಉಲ್ಭಣಗೊಳ್ಳಲು ಬಿಡಬಾರದು ಎಂದು ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ನಡೆದ ಘಟನೆ ಸರ್ಕಾರ ಸಹಿಸುವುದಿಲ್ಲ. ಪರಿಸ್ಥಿತಿ ತಿಳಿ ಮಾಡಲಿಲ್ಲವೆಂದರೆ ತಾಪತ್ರಯ ಕಟ್ಟಿಟ್ಟ ಬುತ್ತಿ. ಹತ್ಯೆ‌ಮಾಡುವ ಹಂತಕ್ಕೆ ಯಾರು ಹೋಗಬಾರದು. ಆದರೆ, ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದವರು ಅವರ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಹಿಂದೂ-ಮುಸ್ಲಿಂ ಅಂತಾ ಬೇರೆ-ಬೇರೆ ಅಲ್ಲ. ಅವರೆಲ್ಲ ಒಡನಾಡಿಗಳಾಗಿದ್ದರು. ಆದರೆ, ಯಾಕೆ ಈ ರೀತಿ ನಡೆಯುತ್ತಿವೆ ಎಂದು ಹೇಳಲಾಗುವುದಿಲ್ಲ ಎಂದರು.

ಈ ಹಿಂದೆ ಸಿದ್ದರಾಮಯ್ಯನವರ ಸರ್ಕಾರದಲ್ಲೂ 36 ಕೊಲೆಗಳು ನಡೆದಿದ್ದು, ಆಗಲೂ ಕಾನೂನು ಸುವ್ಯವಸ್ಥೆ ಸರಿ ಇರಲಿಲ್ಲ ಎಂದು ಹೇಳೋಕೆ ಆಗಲ್ಲ. ಇದನ್ನು ಯಾರೂ ನಿರೀಕ್ಷೆ ಮಾಡಿದ್ದಲ್ಲ. ಹಠಾತ್​ ಆಗಿ ಎಲ್ಲೋ ಒಂದು ಕಡೆ ನಡೆಯುತ್ತವೆ. ಇದಕ್ಕೆ ಇಡೀ ಸರ್ಕಾರವನ್ನು ದೂಷಿಸೋಕೆ ಆಗಲ್ಲ. ಇಂತಹ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದರು.

ಪಿಎಫ್ಐ ಬಗ್ಗೆ ಅನುಕಂಪ ಇಲ್ಲ: ಈ ಹತ್ಯೆ ಹಿಂದೆ ಪಿಎಫ್ಐ ಕೈವಾಡ ಇದೆ‌ ಎನ್ನುವುದರ ಬಗ್ಗೆ ಆಧಾರ ಇಲ್ಲದೇ ಮಾತನಾಡಲು ಬರುವುದಿಲ್ಲ. ಈ ಹತ್ಯೆಗಳ ಹಿಂದೆ ಕೈವಾಡವಿದ್ದರೆ, ಅವರೇ ಅನುಭವಿಸುತ್ತಾರೆ. ಪಿಎಫ್ಐ ಕುರಿತು ಬಿಜೆಪಿಗಾಗಲಿ, ಕಾಂಗ್ರೆಸ್​ಗಾಗಲಿ ಬಳಿ ಅನುಕಂಪ ಇಲ್ಲ. ಪಿಎಫ್ಐ ವಿರುದ್ಧ ತನಿಖೆ ಮಾಡಲು ಸಾಕ್ಷಿಗಳು ಬೇಕಾಗುತ್ತವೆ. ಒಂದು ಸರ್ಕಾರ ಏಕಾಏಕಿ ಮತ್ತೊಬ್ಬರ ಕಡೆ ಬೊಟ್ಟು ಮಾಡಿ ತೋರಿಸಲು ಬರುವುದಿಲ್ಲ. ಇದನ್ನು ನಾವು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಒಂದು ಹಂತಕ್ಕೆ ತಂದೇ ತರುತ್ತೇವೆ. ಯಾರು ಹುಡುಗಾಟ ಆಡಲು ಬರುವುದಿಲ್ಲ. ಈ ಕೊಲೆಗೆ ಕಾರಣಕರ್ತರನ್ನು ಹುಡುಕಿ ಶಿಕ್ಷೆಗೊಳಪಡಿಸುತ್ತೇವೆ ಎಂದು ಮಾಧುಸ್ವಾಮಿ ಸ್ಪಪ್ಟಪಡಿಸಿದರು.

ಪ್ರವೀಣ್ ನೆಟ್ಟಾರು ಹಾಗು ಫಾಝಿಲ್ ಹತ್ಯೆಗೆ ಲಿಂಕ್ ಆಗಿರುವುದು ತಪ್ಪು. ವಿರೋಧ ಪಕ್ಷದವರು ಪ್ರವೀಣ್ ಹಾಗೂ ಫಾಝಿಲ್ ಕೊಲೆಗೆ ಲಿಂಕ್ ಮಾಡುತ್ತಿದ್ಧಾರೆ. ಇದು ಸತ್ಯಕ್ಕೆ ದೂರವಾಗಿರುವ ವಿಚಾರ ಎಂದು ಅವರು, ಫಾಝಿಲ್ ಹತ್ಯೆಯಾದಾಗ ಸಿಎಂ ಆಗಲಿ, ಸಚಿವರಾಗಲಿ ಮನೆಗೆ ಹೋಗದೆ ಇರಲು ಕಾರಣ ಇದೆ. ಫಾಝಿಲ್ ಕೊಲೆ ನಡೆದಾಗ ಸಿಎಂ ಏರ್​ ಕ್ರಾಫ್ಟ್​​ನಲ್ಲಿದ್ದರು. ಅಲ್ಲಿಂದ ಅವರು ಬೆಂಗಳೂರು ಕಡೆಗೆ ತಮ್ಮ ಪ್ರಯಾಣ ಬೆಳೆಸಿದ್ದರು. ಆದ್ದರಿಂದ ಪಾಝಿಲ್‌ ಮನೆಗೆ ಸಿಎಂ ಹೋಗಲು ಆಗಲಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.

ಉತ್ತರ ಪ್ರದೇಶ ಮಾದರಿ ಚಿಂತನೆ ಇಲ್ಲ: ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿ ತರಲು ಒತ್ತಡ ಬಂದಾಗ ಸಿಎಂ ಬೊಮ್ಮಾಯಿ ಅವರೇ ಉತ್ತರ ಪ್ರದೇಶವೇ ಬೇರೆ, ಕರ್ನಾಟಕ ರಾಜ್ಯನೇ ಬೇರೆ. ಅಲ್ಲಿನ ಸಮಸ್ಯೆಗೂ ಇಲ್ಲಿ ಸಮಸ್ಯೆಗು ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ. ಆದರೂ, ಮಾಧ್ಯಮದವರು ಕೆಲ ದಿನಗಳ‌ ಹಿಂದೆ ಒತ್ತಿ-ಒತ್ತಿ ಇದೇ ವಿಷಯ ಕೇಳಿದ್ದಕ್ಕಾಗಿ ಕರ್ನಾಟಕದಲ್ಲೂ ಉತ್ತರ ಪ್ರದೇಶ ಮಾದರಿ ಜಾರಿ ಆಗಬಹುದು ಎಂದಿದ್ದಾರೆ. ಆದರೆ, ಅದು ಸತ್ಯಕ್ಕೆ ದೂರವಾದ ವಿಚಾರ. ಇಂತಹ ಚಿಂತನೆ ಇಲ್ಲ ಎಂದು ಸಚಿವರು ಸ್ಪಪ್ಟಪಡಿಸಿದರು.

ಯಡಿಯೂರಪ್ಪನವರೇ ನಮ್ಮ ಲೀಡರ್: ಬಿ.ಎಸ್​.ಯಡಿಯೂರಪ್ಪನವರೇ ನಮ್ಮ ಲೀಡರ್. ಅದರಲ್ಲಿ ಎರಡು ಮಾತಿಲ್ಲ, ಅವರನ್ನು ಮೂಲೆ ಗುಂಪು ಮಾಡಬೇಕೆಂಬುದು ಇಡೀ ಬಿಜೆಪಿಯಲ್ಲಿ ಯಾರೊಬ್ಬರ ತಲೆಯಲ್ಲಿಲ್ಲ‌. ಒಂದು ಪಕ್ಷ‌ ಅಂದರೆ ಕಾರ್ಯಕರ್ತರು ಸಂಘಟನೆ ಮಾಡಿಕೊಂಡು ಪ್ರವಾಸ ಮಾಡಬೇಕಾಗುತ್ತದೆ. ಯಡಿಯೂರಪ್ಪನವರು ಒಬ್ಬರೇ ಮಾಡಲು ಆಗುತ್ತಾ ?, ಆಗಲ್ಲ. ಬೇರೆ-ಬೇರೆ ಘಟನೆ‌ಗಳು ಜರುಗಿದ್ದರಿಂದ ಜನೋತ್ಸವ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಯಡಿಯೂರಪ್ಪನವರನ್ನು ಸಂಘಟನೆ ಮಾಡುವ ವಿಚಾರದಲ್ಲಿ ಯಾರೂ ತಡೆಯಲು ಆಗುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಿ ಸೋತ್ರು: ಸಿದ್ದರಾಮಯ್ಯ ಸಿಎಂ ಆಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 30 ಸಾವಿರ ಮತದಿಂದ ಸೋತರು. ಅವರು ಸೋಲುತ್ತಾರೆ ಎಂದು ನಿರೀಕ್ಷೆ ಮಾಡಿದ್ವಾ?, ಜನರ ನಿರ್ಣಯ ಅದು ಏನ್ಮಾಡಕ್ಕೆ ಆಗುತ್ತದೆ. ದಾವಣಗೆರೆಯಲ್ಲಿ ಸಿದ್ದರಾಮಯ್ಯ ಅಮೃತ ಮಹೋತ್ಸವ ಮಾಡಿದರೆ ರಾಜ್ಯದಲ್ಲಿ ಕಾಂಗ್ರೆಸ್​​ ಗೆದ್ದು ಬಿಡುತ್ತಾ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದರು.

ಇದನ್ನೂ ಓದಿ: ಎಬಿವಿಪಿ ಪ್ರತಿಭಟನೆ ವಿಚಾರ: ಸಿದ್ದರಾಮಯ್ಯ ಸರ್ಟಿಫಿಕೇಟ್​ ನನಗೆ ಬೇಕಿಲ್ಲ, ತಿರುಗೇಟು ಕೊಟ್ಟ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.