ETV Bharat / state

ಪ್ರಿಯಕರನಿಂದ ಮದುವೆಯಾಗುವಂತೆ ಕಿರುಕುಳ : ದಾವಣಗೆರೆಯಲ್ಲಿ ಅಪ್ರಾಪ್ತೆ ಆತ್ಮಹತ್ಯೆ - davanagere girl suicide case

ಅಪ್ರಾಪ್ತೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಆಕೆಯ ಪೋಷಕರು ದೂರು ನೀಡಿದ್ದಾರೆ..

minor girl suicide in davanagere
ದಾವಣಗೆರೆಯಲ್ಲಿ ಅಪ್ರಾಪ್ತೆ ಆತ್ಮಹತ್ಯೆ
author img

By

Published : May 16, 2022, 7:17 PM IST

ದಾವಣಗೆರೆ : ಯುವಕನನ್ನು ಪ್ರೀತಿಸಿದ್ದ ಬಾಲಕಿಯೋರ್ವಳು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಆತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಾಲಕಿ ಮನೆಯಲ್ಲಿ ಬೇರೊಬ್ಬನೊಂದಿಗೆ ಮದುವೆ ಮಾಡಲು ಆಕೆಯನ್ನು ಒಪ್ಪಿಸಿದ್ದರು. ಈ ವಿಚಾರ ತಿಳಿದ ಯುವಕ ಬಾಲಕಿಗೆ ಮದುವೆಯಾಗುವಂತೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ದಾವಣಗೆರೆ ಹೊರವಲಯದಲ್ಲಿ ಪೋಷಕರೊಂದಿಗೆ ವಾಸವಿದ್ದ ಬಾಲಕಿಗೆ ಅದೇ ಪ್ರದೇಶದ ಯುವಕನೊಂದಿಗೆ ಪರಿಚಯವಾಗಿ, ಬಳಿಕ ಅದು ಪ್ರೇಮಕ್ಕೆ ತಿರುಗಿತ್ತು. ಇವರಿಬ್ಬರ ಪ್ರೀತಿ ವಿಚಾರ ಬಾಲಕಿಯ ಮನೆಯವರಿಗೆ ಗೊತ್ತಾಗಿದೆ. ನಂತರ ಬಾಲಕಿಯ ತಂದೆ ಬುದ್ದಿವಾದ ಹೇಳಿದ್ದು, ಕೆಲ ತಿಂಗಳು ಪ್ರೇಮಿಗಳು ದೂರವಾಗಿದ್ದರು.

ಇದೇ ವೇಳೆ ಮನೆಯವರು ಆಕೆಗೆ ಬೇರೆ ಯುವಕನೊಂದಿಗೆ ಮದುವೆ ಮಾಡಲು ಯೋಚಿಸಿದ್ದರು. ಇದನ್ನರಿತ ಯುವಕ ತನ್ನನ್ನೇ ಮದುವೆ ಆಗುವಂತೆ ಬಾಲಕಿಗೆ ಕಾಟ ಕೊಡುತ್ತಿದ್ದ. ಇದರಿಂದ ಬೇಸತ್ತ ಅಪ್ರಾಪ್ತೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಯುವಕ ಹಾಗೂ ಆತನ ಸ್ನೇಹಿತರು ಬಾಲಕಿಗೆ ಕಿರುಕುಳ ನೀಡುತ್ತಿದ್ದರು.

ಯುವಕನ ಜೊತೆ ಆತನ ಪಕ್ಕದ ಮನೆಯವರು, ಸ್ನೇಹಿತರು ಕೂಡ ಬೆಂಬಲ ನೀಡಿದ್ದರು ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ. ಈ ಬಗ್ಗೆ ವಿದ್ಯಾನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿ ಯುವಕನನ್ನು ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮೊಬೈಲ್​ ಬಳಸಿದ್ದಕ್ಕೆ ಗದರಿಸಿದ ತಂದೆ: ಆತ್ಮಹತ್ಯೆ ಮಾಡಿಕೊಂಡ ಮುಂಗೋಪಿ ಮಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.