ETV Bharat / state

ಹೆಣ್ಣು ಎಂದು ಸ್ವಂತ ಮಗುವನ್ನೇ ಕೊಂದ ಆರೋಪ: ಪತ್ನಿ ಕಡೆಯವರಿದಂಲೇ ಪತಿಗೆ ಬಿಸಿ ಬಿಸಿ ಕಜ್ಜಾಯ - ಆರೋಪಿಗಳಿಗೆ ಮನಬಂದಂತೆ ಥಳಿಸಿದ ಸಾರ್ವಜನಿಕರು

ಮಗಳನ್ನು ಕೊಂದ ಆರೋಪದ ಮೇಲೆ ವ್ಯಕ್ತಿಯನ್ನು ಸ್ಥಳೀಯರು ಮನಬಂದಂತೆ ಥಳಿಸಿ ಮೆರವಣಿಗೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

locals beaten to accused
ಸ್ವಂತ ಮಗುವನ್ನೇ ಕೊಂದ ಕೀಚಕ ತಂದೆ
author img

By

Published : Dec 20, 2021, 9:28 AM IST

Updated : Dec 21, 2021, 5:51 PM IST

ದಾವಣಗೆರೆ: ಹೆಣ್ಣು ಮಗು ಜನಿಸಿದೆ ಎಂದು ಮಗುವನ್ನು ಎತ್ತಿಕೊಂಡು ಮೇಲಿಂದ ನೆಲಕ್ಕೆ ಬಿಟ್ಟು ಕೊಂದುಹಾಕಿದ್ದಾನೆ ಎಂದು ಆರೋಪಿಸಿ ತಂದೆಗೆ ಸಂಬಂಧಿಕರೇ ಮನಬಂದಂತೆ ಥಳಿಸಿ ಮೆರವಣಿಗೆ ಮಾಡಿರುವ ಘಟನೆ ಬೆಣ್ಣೆ ನಗರಿಯ ಅಖ್ತರ್ ರಜಾ ವೃತ್ತದ ಬಳಿ ನಡೆದಿದೆ.

ದಾವಣಗೆರೆ ನಗರದ ಮಿಲ್ಲತ್ ಕಾಲೋನಿಯ ನಿವಾಸಿ ಮನ್ಸೂರ್ ಥಳಿತಕ್ಕೊಳಗಾದವರು. ಮಿಲ್ಲತ್ ಕಾಲೋನಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮಗಳನ್ನು ಸಾಯಿಸಿರುವ ಆರೋಪದ ಮೇಲೆ ಪತ್ನಿ ಕಡೆಯವರು, ಕಳೆದ ದಿನ ಆರೋಪಿ ಗಂಡ ಮನ್ಸೂರ್ ಹಾಗೂ ಆತನ ತಮ್ಮ ಮೈನುದ್ದೀನ್​ನನ್ನು ಹಿಗ್ಗಾಮುಗ್ಗಾ ಥಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.

ಅಖ್ತರ್ ರಜಾ ವೃತ್ತದಿಂದ ಬಾಷಾ ನಗರದ ತನಕ ಮನಬಂದಂತೆ ಥಳಿಸಿ ಮೆರವಣಿಗೆ ಮಾಡಿದ್ರು.‌ ಈ ಹಿಂದೆ ಮಸೀದಿ ಜಮಾಯತ್​ನಿಂದ ಪಂಚಾಯಿತಿ ಮಾಡಲು ಸಭೆ ಕರೆಯಲಾಗಿತ್ತು. ಸಭೆಗೆ ಆರೋಪಿ ಬಾರದ ಹಿನ್ನೆಲೆ ಸಂಬಂಧಿಸಕರು ಮನ್ಸೂರ್​ ಹಾಗೂ ಆತನ ತಮ್ಮ ಮೈನುದ್ದೀನ್ ಅನ್ನು ಹಿಡಿದು ಜಮಾಯತ್ ಬಳಿ ಕರೆ ತಂದಿದ್ದಾರೆ.

ದಾವಣಗೆರೆಯಲ್ಲಿ ಆರೋಪಿಗಳಿಗೆ ಥಳಿಸಿದ ಸಾರ್ವಜನಿಕರು

ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಮೈನುದ್ದೀನ್ ಭಾಗಿಯಾಗಿದ್ದಾನೆಂಬ ಶಂಕೆ:

ಆರೋಪಿ ಮನ್ಸೂರ್​ ಸಹೋದರನಾಗಿರುವ ಕಾಂಗ್ರೆಸ್ ಮುಖಂಡ ಮೈನುದ್ದೀನ್ ಇದರಲ್ಲಿ ಭಾಗಿಯಾಗಿದ್ದಾನೆಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಮೈನುದ್ದೀನ್ ಆತನ ಅಣ್ಣ ಮನ್ಸೂರ್ ಇಬ್ಬರನ್ನೂ ಥಳಿಸಿದ್ದಾರೆ.

ಮೂರು ತಿಂಗಳ‌ ಹಿಂದೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಮನ್ಸೂರ್​ ಪತ್ನಿ ಕಡೆಯವರು ಅಸ್ವಸ್ಥಗೊಂಡ ಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಸಹ ಆತ ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಆಕ್ರೋಶಗೊಂಡ ಜನ ಆರೋಪಿಗಳನ್ನು ಮೆರವಣಿಗೆ ಮಾಡಿಸಿದ್ದಾರೆ. ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Last Updated : Dec 21, 2021, 5:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.