ದಾವಣಗೆರೆ: ಎಸ್ಟಿ ಮೀಸಲಾತಿಗಾಗಿ ಕುರುಬ ಸಮುದಾಯ ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಇಂದು ಕಾಗಿನೆಲೆ ನಿರಂಜನಾನಂದ ಪುರಿ ಶ್ರೀ ನೇತೃತ್ವದಲ್ಲಿ ಚಿಂತನ ಸಭೆ ನಡೆಸಲಾಯಿತು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಶಾಖಾ ಮಠದಲ್ಲಿ ಎಲ್ಲ ಶಾಖಾ ಮಠಗಳ ಶ್ರೀಗಳನ್ನು ಕರೆಸಿ ನಿರಂಜನಾನಂದ ಪುರಿ ಶ್ರೀಯವರು ಚಿಂತನ ಸಭೆ ನಡೆಸಿದರು. ಈ ಸಭೆಯಲ್ಲಿ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಕೂಡ ಭಾಗಿಯಾಗಿದ್ದು, ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸಿದರು.
ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಯನ್ನು ಕೇಂದ್ರವಾಗಿಸಿಕೊಂಡು ಜನವರಿ 06 ರಂದು ದಾವಣಗೆರೆಯಲ್ಲಿ ಎಸ್ಟಿ ಮೀಸಲಾತಿಗಾಗಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಆ ಸಮಾವೇಶದ ಬಗ್ಗೆ ಚರ್ಚಿಸಲು ಎಲ್ಲ ಶಾಖಾ ಮಠಗಳ ಶ್ರೀಗಳನ್ನು ಒಂದೆಡೆ ಸೇರಿಸಿ ಚಿಂತನ ಸಭೆ ನಡೆಸಿ ಸಮಾವೇಶದಲ್ಲಿ ಭಾಗಿಯಾಗುವಂತೆ ಹಾಲುಮತ ಸಮುದಾಯದ ಜನರಿಗೆ ಮನವಿ ಮಾಡಲಾಯಿತು.