ದಾವಣಗೆರೆ : ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಹರಿಹರ ತಾಲೂಕಿನ ಬಾನುವಳ್ಳಿ, ಕಮಲಾಪುರ, ಯಲವಟ್ಟಿ ಸೇರಿ ಹಲವು ಕಡೆ ಮಳೆ ಅವಾಂತರ ಸೃಷ್ಟಿಸಿದೆ.
ಮಳೆಯಿಂದಾಗಿ ರೈತರ ಜಮೀನುಗಳು ದ್ವೀಪದಂತಾಗಿವೆ. ಸಂಪೂರ್ಣ ಬೆಳೆಗಳು ಮುಳುಗಡೆಯಾಗಿವೆ. ಅಲ್ಲದೇ, ಅಡಿಕೆ, ಎಲೆಬಳ್ಳಿ, ಭತ್ತದ ಗದ್ದೆಗಳು ಮುಳುಗಡೆಯಾಗಿವೆ. ಅಡಿಕೆ ಹಾಗೂ ಎಲೆ ಬಳ್ಳಿಗಳು ಕೊಳೆಯುವ ಸ್ಥಿತಿಗೆ ತಲುಪಿವೆ.
20ಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದರೂ ಕೂಡ ಯಾವೊಬ್ಬ ಅಧಿಕಾರಿಗಳು ಇತ್ತ ತಲೆ ಹಾಕದೆ ಇರುವುದು ರೈತರ ಆಕ್ರೋಶಕ್ಕೆ ಕಾರಣ ಆಗಿದೆ. ದಯವಿಟ್ಟು ನಮಗೆ ಪರಿಹಾರ ಕೊಡಿಸಿ ಎಂದು ಜಮೀನಿನ ಮಾಲೀಕರು ಅಂಗಲಾಚಿಕೊಂಡಿದ್ದಾರೆ.
ಓದಿ: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕಾಕರಣದಿಂದ ಸದ್ಯಕ್ಕೆ ಸ್ವಲ್ಪ ನೆಮ್ಮದಿ.. ಸಚಿವ ಡಾ ಸುಧಾಕರ್