ದಾವಣಗೆರೆ: ಜಿಲ್ಲೆಯಲ್ಲಿ ಇಂದು ನಾಲ್ಕು ಜನರಿಗೆ ಕೊರೊನಾ ಸೋಂಕು ಧೃಢಪಟ್ಟಿದ್ದು, ಒಟ್ಟು ಸಕ್ರಿಯ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 75ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಇಂದು 18 ಮಂದಿ ಇಂದು ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಲ್ಲಿಯವರೆಗೆ ಒಟ್ಟು 46 ಜನರು ಗುಣಮುಖರಾಗಿದ್ದು, ಚಿಗಟೇರಿ ಜಿಲ್ಲಾಸ್ಪತ್ರೆಯ ವೈದ್ಯರು, ವೈದ್ಯಕೀಯ ಸಿಬ್ಬಂದಿ ಗುಣಮುಖರಾದವರನ್ನು ಚಪ್ಪಾಳೆ ತಟ್ಟಿ ಶುಭ ಹಾರೈಸಿ ಬೀಳ್ಕೊಟ್ಟರು. ಕೊರೊನಾ ಸೋಂಕಿಗೆ ತುತ್ತಾದವರೆಲ್ಲಾ ಮಹಿಳೆಯರೇ ಆಗಿದ್ದಾರೆ. ಇಬ್ಬರು ಕಂಟೇನ್ಮೆಂಟ್ ಝೋನ್ನಲ್ಲಿ ಇದ್ದರವರಿಗೆ ಸೋಂಕು ತಗುಲಿದ್ದರೆ, P- 1251 ರ ಸಂಪರ್ಕದಿಂದ ಇಬ್ಬರಲ್ಲಿ ಸೋಂಕು ತಗುಲಿದೆ.
ಇಲ್ಲಿಯವರೆಗೆ ಜಿಲ್ಲೆಯಲ್ಲಿ 128 ಸ್ಯಾಂಪಲ್ಗಳು ನೆಗೆಟಿವ್ ಬಂದಿದ್ದು, ಇನ್ನು 1412 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರಬೇಕಿದೆ.