ದಾವಣಗೆರೆ : ಕೊರೊನೊ ಭೀತಿ ಹಿನ್ನೆಲೆಯಲ್ಲಿ ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಲಾಕ್ಡಾನ್ ಕರೆಗೆ ದಾವಣಗೆರೆ ಜನತೆ ಕ್ಯಾರೇ ಎನ್ನುತ್ತಿಲ್ಲ.
ಇಂದು ಯುಗಾದಿ ಹಬ್ಬವಾದ ಕಾರಣ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಎದುರುಗಡೆಯ ತರಕಾರಿ ಮಾರುಕಟ್ಟೆಯಲ್ಲಿ ಜನರು ಹೂವು, ಹಣ್ಣು, ತರಕಾರಿ ಖರೀದಿಗೆ ಮುಗಿಬಿದ್ದಿದ್ದಾರೆ. ಕೆಲವರು ಮಾಸ್ಕ್ ಧರಿಸಿದ್ರೆ, ಉಳಿದವರು ಮಾಸ್ಕ್ ಧರಿಸದೇ ಖರೀದಿಯಲ್ಲಿ ಬ್ಯುಸಿಯಾಗಿದ್ರು. ಜಿಲ್ಲಾಡಳಿತ ಅಂತರ ಕಾಯ್ದುಕೊಳ್ಳಿ ಎಂಬ ಎಚ್ಚರಿಕೆ ನೀಡಿದ್ದರೂ ಜನ ಮಾತ್ರ ಇದನ್ನು ಪಾಲಿಸುತ್ತಿಲ್ಲ. ಬಳಿಕ ಜನಸಂದಣಿ ಹೆಚ್ಚಿರುವ ವಿಷಯವನ್ನ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರ ಗಮನಕ್ಕೆ ತರುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ವ್ಯಾಪಾರಿಗಳಿಗೆ ಜಾಗ ಖಾಲಿ ಮಾಡುವಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಬಳಿಕ ವ್ಯಾಪಾರಸ್ಥರು ಅರ್ಧಗಂಟೆ ಕಾಲಾವಕಾಶ ನೀಡಿ ಎಂದ್ರು. ಆದರೂ ಬಿಡದ ಪೊಲೀಸರು, ಕೂಡಲೇ ತೆರವುಗೊಳಿಸುವಂತೆ ಸೂಚಿಸಿದ್ರು.