ETV Bharat / state

ಜನರ ಕುಂದುಕೊರತೆ ನಿವಾರಣೆಗೆ ಕ್ರಮ; ಪಾಲಿಕೆಯಿಂದ ವಾಟ್ಸ್​ಆ್ಯಪ್​ ನಂಬರ್​ ಅನಾವರಣ

ದಾವಣಗೆರೆ ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ಬರುವ 45 ವಾರ್ಡ್​ಗಳ ಸಮಸ್ಯೆಗಳನ್ನು ಜನರಿಂದ ಸುಲಭವಾಗಿ ತಿಳಿದುಕೊಳ್ಳಲು ವಾಟ್ಸ್​ಆ್ಯಪ್​ ನಂಬರ್​ ಅನಾವರಣಗೊಳಿಸಿದೆ.

Devanagere municipality
ದಾವಣಗೆರೆ ಮಹಾನಗರ ಪಾಲಿಕೆ
author img

By

Published : Mar 5, 2021, 7:21 PM IST

ದಾವಣಗೆರೆ: ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ 45 ವಾರ್ಡ್​ಗಳ ಕುಂದುಕೊರತೆ ನೀಗಿಸಲು ಹಾಗೂ ಸ್ಥಳದಿಂದಲೇ ಮಾಹಿತಿ ಪಡೆಯಲು ನೂತನ ವಾಟ್ಸ್​ಆ್ಯಪ್​​ ನಂಬರನ್ನು ಮೇಯರ್ ವೀರೇಶ್ ಅನಾವರಣಗೊಳಿಸಿದರು.

ದಾವಣಗೆರೆ ಮಹಾನಗರ ಪಾಲಿಕೆಯ ಯಾವುದೇ ವಾರ್ಡ್​ನಲ್ಲಿ ಏನೇ ಸಮಸ್ಯೆಗಳಿದ್ದರೂ ವಿಳಾಸ ಸಹಿತ ಫೋಟೊ ಹಾಕಿ ವಾಟ್ಸ್‌ಆ್ಯಪ್‌ ಸಂಖ್ಯೆಗೆ ಕಳುಹಿಸಿದರೆ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ಕೆ ಮುಂದಾಗುವುದಾಗಿ ಮೇಯರ್​ ತಿಳಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆ

ಕಸ, ವಿದ್ಯುತ್ ದೀಪ, ಗಟರ್ ಸಮಸ್ಯೆ, ಕಸದ ವಾಹನ ಮನೆಯ ಹತ್ತಿರ ಬಾರದೇ ಇರುವ ಬಗೆಗಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಕೆಲವರನ್ನು ನೇಮಕ ಮಾಡಲಾಗಿದೆ. ಜನರ ಬಳಿ ಈ ಮೊಬೈಲ್ ಸಂಖ್ಯೆಯನ್ನು ಕೊಂಡೊಯ್ಯಲು ಈಗಾಗಲೇ ನೂತನ ಮೇಯರ್ ವೀರೇಶ್ ಸಿದ್ಧತೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.