ದಾವಣಗೆರೆ : ಜಿಲ್ಲೆಯ ಹೊನ್ನಾಳಿಯಲ್ಲಿ ಹಿಂದೂ ಮಹಾಸಾಗರ ಗಣೇಶ ಸೇವಾ ಸಮಿತಿಯಿಂದ ಹಾಕಿದ್ದ ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್ನ್ನು ಕಿಡಿಗೇಡಿಗಳು ಹರಿದು ಹಾಕಿರುವ ವದಂತಿ ಹಬ್ಬಿಸಲಾಗಿತ್ತು. ಅದರೆ ಇದೀಗ ಈ ವಿಚಾರ ಸತ್ಯಕ್ಕೆ ದೂರವಾಗಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಟಿಬಿ ವೃತ್ತದ ಬಳಿಯ ವಡ್ಡಿನ ಕೆರೆಯ ಹಳ್ಳದ ಬಳಿ ಗಣೇಶ ಹಬ್ಬದ ಪ್ರಯುಕ್ತ ಗಣೇಶ ಜೊತೆ ಸಾವರ್ಕರ್ ಫೋಟೋ ಫ್ಲೆಕ್ಸ್ ಅಳವಡಿಕೆ ಮಾಡಲಾಗಿತ್ತು. ಸಾವರ್ಕರ್ ಫೋಟೋ ಅಭಿಯಾನ ಮಾಡಿದ ಹಿಂದೂ ಕಾರ್ಯಕರ್ತರು ಮಂಗಳವಾರ ತಡರಾತ್ರಿ ಸಾವರ್ಕರ್ ಫೋಟೋ ಇರುವ ಫ್ಲೆಕ್ಸ್ನ್ನು ದುಷ್ಕರ್ಮಿಗಳು ಹರಿದು ಹಾಕಿದರು ಎಂದು ಬಿಜೆಪಿ ಕಾರ್ಯಕರ್ತರು ಹಾಗು ಹಿಂದು ಪರ ಸಂಘಟನೆಯ ಕಾರ್ಯಕರ್ತರು ಆರೋಪ ಮಾಡಿದ್ದರು. ಅದರೆ ಭಾರಿ ಗಾಳಿ ಬೀಸಿದ ಕಾರಣ ಫ್ಲೆಕ್ಸ್ ಹರಿದು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹೊನ್ನಾಳಿ ಪೊಲೀಸರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ ನಿನ್ನೆಯೇ ಗಾಳಿಗೆ ಹರಿದಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಹರಿದು ಹೋದ ಸಾವರ್ಕರ್ ಫೋಟೊ ಇರುವ ಫ್ಲೆಕ್ಸ್ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಆದರೂ ಕೂಡ ವಿನಾಃ ಕಾರಣ ಬಿಜೆಪಿ ಹಾಗು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಫ್ಲೆಕ್ಸ್ ಗಾಳಿಗೆ ಹರಿದಿಲ್ಲ. ಇದರ ಹಿಂದೆ ಕಿಡಿಗೇಡಿಗಳ ಕೈವಾಡ ಇದೆ. ಫ್ಲೆಕ್ಸ್ಗೆ ಬ್ಲೇಡ್ ಹಾಕಲಾಗಿದೆ. ಗಾಳಿಗೆ ಹರಿದಿದ್ದರೆ ನಗರದ ಇತರೆ ಫ್ಲೆಕ್ಸ್ಗಳಿಗೂ ಹಾನಿಯಾಗಬೇಕಿತ್ತು ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ : ಹೊನ್ನಾಳಿಯಲ್ಲಿ ರಾರಾಜಿಸುತ್ತಿರುವ ಸಾವರ್ಕರ್, ಬಾಲಗಂಗಾಧರ್ ತಿಲಕ್ ಫ್ಲೆಕ್ಸ್