ದಾವಣಗೆರೆ: ರಾಜ್ಯ ಸರ್ಕಾರದ ಆರೋಗ್ಯ ಇಲಾಖೆ ನಿರ್ದೇಶನದಂತೆ ನಗರದ ಬಾಷಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಂದು ಡ್ರೈ ರನ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾಶಂಕರ್ ಹಾಗೂ ಡಿಸಿ ಮಹಾಂತೇಶ್ ಬೀಳಗಿ ಅವರು ಚಾಲನೆ ನೀಡಿದರು.
ಕೊವ್ಯಾಕ್ಸಿನ್ ಚುಚ್ಚುಮದ್ದು ಬಂದಾದ ಬಳಿಕ ಮೊದಲಿಗೆ ಚುಚ್ಚುಮದ್ದನ್ನು ಪಡೆಯಲು ತಯಾರಿ ನಡೆಸಲಾಯಿತು. ವ್ಯಾಕ್ಸಿನ್ ಪಡೆಯಲು ಪ್ರತ್ಯೇಕ ಕೋಣೆ ಸಿದ್ಧ ಪಡಿಸಲಾಗಿದ್ದು, ಚುಚ್ಚುಮದ್ದು ಪಡೆದವರಿಗೆ ನಿಗಾ ಇರಿಸಲು ನಿಗಾವಣೆ ಕೊಠಡಿ ಕೂಡ ಸಿದ್ಧ ಮಾಡಲಾಗಿದೆ.
ಇದೇ ವೇಳೆ ಮಾತನಾಡಿದ ಡಿಸಿ ಮಹಾಂತೇಶ್ ಬೀಳಗಿ, ಈಗಾಗಲೇ ದಾವಣಗೆರೆ ಜಿಲ್ಲೆಯ ಚಿಗಟೇರಿ ಆಸ್ಪತ್ರೆ, ಎಸ್ಎಸ್ ಆಸ್ಪತ್ರೆ, ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆ, ಸಂತೆಬೆನ್ನೂರು ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಂಡಜ್ಜಿ ಹಾಗೂ ನಗರ ಆರೋಗ್ಯ ಕೇಂದ್ರ ಬಾಷಾ ನಗರದಲ್ಲಿಂದು ಜಿಲ್ಲಾಡಳಿತ ಡ್ರೈ ರನ್ ಮಾಡಿದೆ ಎಂದು ಮಾಹಿತಿ ನೀಡಿದರು.