ETV Bharat / state

ದಾವಣಗೆರೆಗೆ ಸಿಎಂ ಆಗಮನ : ಹಾನಗಲ್ ಉಪಚುನಾವಣೆ ಬಗ್ಗೆ ಮಹತ್ವದ ಚರ್ಚೆ - ದಾವಣಗೆರೆಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ

ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ ಸಚಿವರ ಜೊತೆ ಸಿಂ ಬೊಮ್ಮಾಯಿ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿಗಳು ಆಗಮಿಸಿದ ಕೆಲ ಹೊತ್ತಿನಲ್ಲಿ ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಕೂಡ ಅತಿಥಿ ಗೃಹಕ್ಕೆ ಆಗಮಿಸಿದ್ದಾರೆ..

CM Basavaraj bommai visit davanagere
ದಾವಣಗೆರೆಗೆ ಸಿಎಂ ಆಗಮನ
author img

By

Published : Oct 11, 2021, 10:57 PM IST

ದಾವಣಗೆರೆ : ಹಾನಗಲ್​​, ಸಿಂದಗಿ ಉಪಚುನಾವಣೆಯ ಕಾವು ಜೋರಾಗಿದೆ. ಆಡಳಿತ ಪಕ್ಷ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾಗಿದೆ. ಚುನಾವಣೆಯಲ್ಲಿ ಗೆಲ್ಲಬೇಕೆಂದು ಬಿಜೆಪಿ ನಾಯಕ ಪಣತೊಟ್ಟಿದ್ದಾರೆ.

ದಾವಣಗೆರೆಗೆ ಸಿಎಂ ಆಗಮನ

ಸಿಎಂ ಬಸವರಾಜ್ ಬೊಮ್ಮಾಯಿಯವರು ದಾವಣಗೆರೆ ನಗರದ ಜಿಎಂಐಟಿ ಕಾಲೇಜ್ ಅತಿಥಿ ಗೃಹಕ್ಕೆ ಆಗಮಿಸಿದ್ದು, ಹಾನಗಲ್ ಉಪ ಚುನಾವಣೆ ಸಂಬಂಧಿಸಿದಂತೆ ಮಹತ್ವದ ಚರ್ಚೆಯಾಗುವ ಸಾಧ್ಯತೆಯಿದೆ. ಸಿಎಂ ಜೊತೆಗೆ ಸಚಿವ ಶ್ರೀರಾಮುಲು, ಸುನೀಲ್ ಕುಮಾರ್, ಬಿಸಿ ಪಾಟೀಲ್, ಮುನಿರತ್ನ ಸೇರಿದಂತೆ ಪ್ರಮುಖ ಸಚಿವರು ಆಗಮಿಸಿದ್ದಾರೆ.

by-election meeting
ಹಾನಗಲ್ ಉಪಚುನಾವಣೆ ಬಗ್ಗೆ ಮಹತ್ವದ ಚರ್ಚೆ

ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ ಸಚಿವರ ಜೊತೆ ಸಿಂ ಬೊಮ್ಮಾಯಿ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ದಟ್ಟವಾಗಿದೆ. ಮುಖ್ಯಮಂತ್ರಿಗಳು ಆಗಮಿಸಿದ ಕೆಲ ಹೊತ್ತಿನಲ್ಲಿ ಹಾನಗಲ್ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಕೂಡ ಅತಿಥಿ ಗೃಹಕ್ಕೆ ಆಗಮಿಸಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿಯವರು ಆಗಮಿಸಿದ ಬೆನ್ನಲ್ಲೇ ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್​​ ಅವರು ಸ್ವಾಗತ ಕೋರಿದರು.

ಇದನ್ನೂ ಓದಿ: ಆನ್​ಲೈನ್​​​ ಜೂಜು ನಿಷೇಧ: ರಾಜ್ಯದಲ್ಲಿ ಡ್ರೀಮ್ 11 ಸೇವೆ ಸ್ಥಗಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.