ETV Bharat / state

ಸರ್ಕಾರದ ಆಡಳಿತದಲ್ಲಿ ನನ್ನ ಸಹೋದರನ ಹಸ್ತಕ್ಷೇಪವಿಲ್ಲ: ಬಿ.ವೈ.ರಾಘವೇಂದ್ರ

author img

By

Published : Feb 21, 2020, 7:20 PM IST

ನನ್ನ ಸಹೋದರನ ಮೇಲೆ ಬೆಂಗಳೂರಿನಲ್ಲಿ ಹಲವು ಕಣ್ಣುಗಳಿವೆ.‌ ನಾನು ಜಿಲ್ಲೆಯಲ್ಲಿದ್ದೇನೆ, ಅವನು ಬೆಂಗಳೂರಿನಲ್ಲಿರುತ್ತಾನೆ.‌ ಹಾಗಾಗಿ ಹಲವು ಕಣ್ಣುಗಳು ಆತನ ಮೇಲಿರುತ್ತವೆ. ಇದು ಸಹಜ ಕೂಡ. ಅದನ್ನೇ ಬಳಸಿಕೊಂಡು ರಾಜಕಾರಣದಲ್ಲಿ ಟೀಕೆ ಮಾಡುವುದು ಸಹಜ ಎಂದು ಬಿ.ವೈ.ರಾಘವೇಂದ್ರ ಹೇಳಿದರು.

B.Y Raghavendra
ಬಿ. ವೈ. ರಾಘವೇಂದ್ರ

ದಾವಣಗೆರೆ: ನನ್ನ ಸಹೋದರ ಬಿ.‌ವೈ.ವಿಜಯೇಂದ್ರ ರಾಜ್ಯ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇದು ಸತ್ಯಕ್ಕೆ ದೂರವಾದುದು ಎಂದು ಸಿಎಂ ಯಡಿಯೂರಪ್ಪ ಪುತ್ರ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸ್ಪಷ್ಟನೆ ನೀಡಿದರು.

ಹಿರೇಕಲ್ಮಠದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ

ಜಿಲ್ಲೆಯ ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನನ್ನ ಸಹೋದರನ ಮೇಲೆ ಬೆಂಗಳೂರಿನಲ್ಲಿ ಹಲವು ಕಣ್ಣುಗಳಿವೆ.‌ ನಾನು ಜಿಲ್ಲೆಯಲ್ಲಿದ್ದೇನೆ, ಅವನು ಬೆಂಗಳೂರಿನಲ್ಲಿರುತ್ತಾನೆ.‌ ಹಾಗಾಗಿ ಹಲವು ಕಣ್ಣುಗಳು ಆತನ ಮೇಲಿರುತ್ತವೆ. ಇದು ಸಹಜ ಕೂಡ. ಅದನ್ನೇ ಬಳಸಿಕೊಂಡು ರಾಜಕಾರಣದಲ್ಲಿ ಟೀಕೆ ಮಾಡುವುದು ಸಹಜ ಎಂದು ಹೇಳಿದರು.

ತಂದೆಯವರು ಸಿಎಂ ಆಗಿರುವುದರಿಂದ ನನ್ನ ಬಳಿಯೂ ಹಲವರು ನಿರೀಕ್ಷೆ ಇಟ್ಟುಕೊಂಡು ಬರುತ್ತಾರೆ. ಆತನ ಬಳಿಯೂ ಹೋಗುತ್ತಾರೆ. ಇದಕ್ಕೆ ಅಪಾರ್ಥ ಕಲ್ಪಿಸುವುದು ಬೇಡ. ಬಿಜೆಪಿ ಯುವ ಮೋರ್ಚಾದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಪಕ್ಷ ಕಟ್ಟುವ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ಬೆಂಗಳೂರಿನಲ್ಲಿ ಇರುವುದರಿಂದ ಸಹಜವಾಗಿಯೇ ಭೇಟಿಯಾಗುತ್ತಾರೆ ಎಂದು ಸಹೋದರನ ಮೇಲಿನ ಆರೋಪ ತಳ್ಳಿಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.