ದಾವಣಗೆರೆ: ಕೋಟಿ ಕೋಟಿ ಅನುದಾನ ಇದ್ದರೂ ಬಹುಮುಖ್ಯ ಯೋಜನೆಗಳಲ್ಲಿ ಒಂದಾದ ಜಿಲ್ಲೆಯ 60 ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಮೊಟಕುಗೊಳಿಸಿವುದಕ್ಕೆ ರೈತರು ಮತ್ತು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಬರಡು ಭೂಮಿಯನ್ನು ಹಸನು ಮಾಡಲೆಂದು ಅಂದಿನ ಕೈ ಸರ್ಕಾರ ತುಂಗಭದ್ರಾ ನದಿಯ ತಟದಲ್ಲಿರುವ ಗರ್ಭಗುಡಿ ಹಾಗೂ ನಿಟ್ಟೂರು ಬಳಿ ಜಾಕ್ವೆಲ್ ಮತ್ತು ಬ್ರಿಡ್ಜ್ ಕಮ್ ಬ್ಯಾರೇಜ್ ನಿರ್ಮಿಸಲು ಹಣ ಮಂಜೂರು ಮಾಡಿತ್ತು. ಆದರೆ, ಶಾಸಕ ಕರುಣಾಕರರೆಡ್ಡಿ ತಮ್ಮ ರಾಜಕೀಯ ಪ್ರಭಾವದಿಂದ ಈ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಎಂ ಬಿ ಪಾಟೀಲ್ ಮತ್ತು ಮಾಜಿ ಶಾಸಕ ಎಂ ಪಿ ರವೀಂದ್ರರವರ ನೇತೃತ್ವದಲ್ಲಿ ನಿಟ್ಟೂರು ಗ್ರಾಮದ ಬಳಿ 60 ಕೆರೆ ತುಂಬಿಸಲು 208 ವೆಚ್ಚದಲ್ಲಿ ಜಾಕ್ವೆಲ್ ನಿರ್ಮಾಣ ಮಾಡಲು ಅನುದಾನ ಹಾಗೂ ಗರ್ಭಗುಡಿ ಗ್ರಾಮದ ಬಳಿ ಬ್ರಿಡ್ಜ್ ಕಮ್ ಬ್ಯಾರೇಜ್ಗೆ 58 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು.
ಆದರೆ, ಇಂದಿನ ಡಬಲ್ ಇಂಜಿನ್ ಸರ್ಕಾರ ಈ ಕಾಮಗಾರಿಯನ್ನು ನಿಲ್ಲಿಸಿ ನಮ್ಮ ಜೀವನಕ್ಕೆ ಮಣ್ಣು ಹಾಕುತ್ತಿದೆ ಎಂದು ರೈತರು ಆರೋಪಿಸಿದ್ದಾರೆ. ಈ ಬಗ್ಗೆ ಶಾಸಕ ಕರುಣಾಕರ ರೆಡ್ಡಿ ಅವರನ್ನು ಕೇಳಿದ್ರೆ ಶೇ. 90 ರಷ್ಟು ಕಾಮಗಾರಿ ಮುಗಿದಿದೆ. ಕೆಲವೇ ದಿನಗಳಲ್ಲಿ 60 ಕೆರೆಗಳನ್ನು ತುಂಬಿಸಲಾಗುವುದೆಂದು ಪೊಳ್ಳು ಭರವಸೆ ನೀಡುತ್ತಿದ್ದಾರೆ. ಆದ್ದರಿಂದ ಪಾದಯಾತ್ರೆ ಮಾಡಿ ಬಿಸಿ ಮುಟ್ಟಿಸುತ್ತಿದ್ದೆವೇ ಎಂದು ಮಾಜಿ ಶಾಸಕ ದಿ. ಎಂ ಪಿ ರವೀಂದ್ರ ಅವರ ಸಹೋದರಿ ವೀಣಾ ಮಹಾಂತೇಶ್ ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುವಂತೆ ರೈತರು, ಪ್ರಗತಿಪರ ಸಂಘಟನೆ ಹಾಗೂ ಮಹಿಳಾ ಸಂಘಟನೆಯ ಸಹೋಗದಲ್ಲಿ ವೀಣಾ ಅವರು ಪಾದಯಾತ್ರೆ ಸೇರಿದಂತೆ ಇತರೆ ಹೋರಾಟಗಳನ್ನು ಮಾಡುವ ಮೂಲಕ ಆಳುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡರ ಬಂಧನ: ಬಿಜೆಪಿಯಿಂದ ಅಧಿಕಾರ ದುರ್ಬಳಕೆ, ದ್ವೇಷದ ರಾಜಕಾರಣ- ಡಿಕೆಶಿ