ದಾವಣಗೆರೆ: ಕೊರೊನಾಗೆ ಐವರು ಬಲಿಯಾಗಿದ್ದು, ಮೃತರ ಸಂಖ್ಯೆ 105ಕ್ಕೆ ಏರಿದೆ. 172 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,840 ಕ್ಕೆ ಏರಿಕೆಯಾಗಿದೆ.
ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಮೂವರು, ಸಿಟಿ ಸೆಂಟ್ರಲ್ ಹಾಗೂ ಎಸ್ಎಸ್ ಹೈಟೆಕ್ ಆಸ್ಪತ್ರೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. 71 ವರ್ಷದ ವೃದ್ಧ ಸೇರಿ ಮೂವರು ಪುರುಷರು, 70 ಹಾಗೂ 62 ವರ್ಷದ ವೃದ್ಧೆ ಮಹಾಮಾರಿಯಿಂದ ಮೃತಪಟ್ಟಿದ್ದಾರೆ. 145 ಮಂದಿ ಇಂದು ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಇದುವರೆಗೆ ಒಟ್ಟು 2,478 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.
1,247 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ದಾವಣಗೆರೆ 81, ಹರಿಹರ 23, ಜಗಳೂರು 1, ಚನ್ನಗಿರಿ 29, ಹೊನ್ನಾಳಿ 36 ಹಾಗೂ ಅಂತರ್ ಜಿಲ್ಲೆಯಿಂದ ಬಂದಿದ್ದ ಇಬ್ಬರಲ್ಲಿ ಕೊರೊನಾ ಸೋಂಕಿರುವುದು ಖಚಿತವಾಗಿದೆ.