ಕಡಬ : ಕೊಂಬಾರು ಗ್ರಾಮದ ಕೊಲ್ಕಜೆಯಿಂದ ಕಲ್ಲರ್ತನೆ ಹೋಗುವ ರಸ್ತೆಯಲ್ಲಿ ಮರಳು ತುಂಬಿದ ಲಾರಿಯೊಂದು ಪಲ್ಟಿಯಾದ ಘಟನೆ ಜರುಗಿದೆ.
ಲಾರಿಯಲ್ಲಿ ಅಧಿಕ ಮರಳು ತುಂಬಿಕೊಂಡು ಹೋಗುವ ಭರಾಟೆಯಲ್ಲಿ ರಸ್ತೆ ಬದಿ ಕುಸಿದು ಲಾರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾನೆ.
ಲಾಕ್ ಡೌನ್ ಬಂಡವಾಳ ಮಾಡಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ ಸಾಗುವ ಮರಳು ಸಾಗಾಟಗಾರರನ್ನು ಪೊಲೀಸರು, ಕಂದಾಯ ಇಲಾಖೆ, ಸ್ಥಳೀಯಾಡಳಿತ ಸೇರಿದಂತೆ ಯಾರೂ ಪ್ರಶ್ನಿಸದ ಪರಿಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.