ETV Bharat / state

ಮಹರ್ಷಿ ವಾಲ್ಮೀಕಿ ಜಾತಿ, ಮತ, ಪಂಥ ಬೆಳೆದ ವಿಶ್ವಗುರು.. ನಳಿನ್‌ಕುಮಾರ್ ಕಟೀಲ್ - MP Nalin Kumar Kateel

ದ.ಕ.ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದ.ಕ.ಜಿಲ್ಲಾ ವಾಲ್ಮೀಕಿ ನಾಯಕ ಅಸೋಸಿಯೇಷನ್ ಸಹಯೋಗದೊಂದಿಗೆ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು
author img

By

Published : Oct 13, 2019, 8:21 PM IST

ಮಂಗಳೂರು: ಸಾಮಾನ್ಯ ವ್ಯಕ್ತಿಯಾಗಿದ್ದ ವಾಲ್ಮೀಕಿ ತನ್ನ ಸಾಧನಾಶೀಲತೆಯಿಂದ ಜಗತ್ತಿಗೆ ರಾಮಾಯಣದಂತಹ ಆದರ್ಶ ಗ್ರಂಥವನ್ನು ನೀಡಿ ಸಂತರಾದರು. ಇದ್ದಕ್ಕೆ ಅವರಲ್ಲಿದ್ದ ಜ್ಞಾನ ಸಂಪನ್ನತೆ, ಸಾಧನೆ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ದ.ಕ.ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದ.ಕ. ಜಿಲ್ಲಾ ವಾಲ್ಮೀಕಿ ನಾಯಕ ಅಸೋಸಿಯೇಷನ್ ಸಹಯೋಗದೊಂದಿಗೆ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿ ಜಯಂತಿ ಕಾರ್ಯಕ್ರಮ..

ಇಡೀ ಮನುಕುಲದ ಅತಿಶ್ರೇಷ್ಠವಾದ ಗ್ರಂಥ ರಾಮಾಯಣ. ಎಲ್ಲಾ ಸಂದರ್ಭಗಳಲ್ಲಿಯೂ ಎಲ್ಲಾ ಯುಗಗಳಿಗೂ ಆದರ್ಶಪ್ರಾಯವಾದ ಗ್ರಂಥ ಅದು ರಾಮಾಯಣ. ವಾಲ್ಮೀಕಿ ಜಾತಿ, ಮತ, ಪಂಥವನ್ನು ಮೀರಿ ಬೆಳೆದಿರುವ ವಿಶ್ವಜ್ಞಾನ ಸಂಪನ್ನ ಗುರು. ಆದ್ದರಿಂದ ರಾಮಾಯಣ ಎಲ್ಲಾ ದೇಶಗಳಿಗೂ ಎಲ್ಲಾ ಕಾಲಕ್ಕೂ, ಎಲ್ಲಾ ಸಮಯಗಳಿಗೂ ಅನುಗುಣವಾದ ಗ್ರಂಥ. ವಾಲ್ಮೀಕಿಯ ಸಾಧನೆ ಅಖಂಡ ಭಾರತದ ಪರಿಕಲ್ಪನೆಯನ್ನು ಹೊಂದಿದೆ. ಮಹರ್ಷಿ ವಾಲ್ಮೀಕಿ ತಮ್ಮ ಕಾಲಘಟ್ಟದಲ್ಲಿ ಇಡೀ ಭಾರತದಾದ್ಯಂತ ಸಂಚರಿಸಿ ಆ ಕಲ್ಪನೆಗಳನ್ನು ನಮ್ಮ ಮುಂದಿರಿಸಿದ್ದಾರೆ. ರಾಮಾಯಣ ಒಂದು ಆದರ್ಶ ಕಾವ್ಯ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಡಾ.ಆರ್‌.ಸೆಲ್ವಮಣಿ, ತಾಪಂ ಅಧ್ಯಕ್ಷ ಮಹ್ಮದ್ ಮೋನು, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

Intro:ಮಂಗಳೂರು: ಸಾಮಾನ್ಯನಾಗಿದ್ದ ವಾಲ್ಮೀಕಿ ತನ್ನ ಸಾಧನಾಶೀಲತೆಯಿಂದ ಜಗತ್ತಿಗೆ ರಾಮಾಯಣದಂತಹ ದರ್ಶನವನ್ನು ನೀಡಿದ ಸಂತ. ಇದ್ದಕ್ಕೆ ಅವರಲ್ಲಿದ್ದ ಜ್ಞಾನ ಸಂಪನ್ನತೆ, ಸಾಧನೆ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

ದ.ಕ.ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ದ.ಕ.ಜಿಲ್ಲಾ ವಾಲ್ಮೀಕಿ ನಾಯಕ ಅಸೋಸಿಯೇಷನ್ ಸಹಯೋಗದೊಂದಿಗೆ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಮನುಕುಲದ ಅತಿಶ್ರೇಷ್ಠ ವಾದ ಗ್ರಂಥ ರಾಮಾಯಣ. ಸಮಾಜದ ಎಲ್ಲಾ ಸಂದರ್ಭದಲ್ಲಿಯೂ,ಯುಗಗಳ ಪರಿವರ್ತನೆ ಆದರೂ ಎಲ್ಲಾ ಯುಗಗಳಿಗೂ ಆದರ್ಶಪ್ರಾಯವಾದ ಗ್ರಂಥ ಅದು ರಾಮಾಯಣ. ಎಂದು ಅವರು ಅಭಿಪ್ರಾಯಪಟ್ಟರು.

Body:ವಾಲ್ಮೀಕಿ ಜಾತಿ, ಮತ, ಪಂಥವನ್ನು ಮೀರಿ ಬೆಳೆದಿರುವ ವಿಶ್ವ ಜ್ಞಾನ ಸಂಪನ್ನ ಗುರು. ಆದ್ದರಿಂದ ರಾಮಾಯಣ ಎಲ್ಲಾ ದೇಶಗಳಿಗೂ ಎಲ್ಲಾ ಕಾಲಕ್ಕೂ, ಎಲ್ಲಾ ಸಮಯಗಳಿಗೂ ಅನುಗುಣವಾದ ಗ್ರಂಥ. ವಾಲ್ಮೀಕಿಯ ಸಾಧನೆ ಅಖಂಡ ಭಾರತದ ಪರಿಕಲ್ಪನೆಯನ್ನು ರಾಮಾಯಣದಲ್ಲಿರಿಸಿದ್ದಾರೆ. ಉತ್ತರ ಭಾರತದಿಂದ ದಕ್ಷಿಣ ಭಾರತದ ಶ್ರೀಲಂಕಾದವರೆಗೆ ಕೊಂಡಿಯಾಗಿ ಸೇರಿಸಿದ್ದಾರೆ. ಇಡೀ ಭಾರತ, ಶ್ರೀಲಂಕಾವನ್ನು ನೋಡದೆ, ತಿರುಗದೆ ರಾಮಾಯಣ ಕಾವ್ಯವನ್ನು ರಚಿಸುವುದು ಅಸಾಧ್ಯ. ಆದ್ದರಿಂದಲೇ ಮಹರ್ಷಿ ವಾಲ್ಮೀಕಿ ತಮ್ಮ ಕಾಲಘಟ್ಟದಲ್ಲಿ ಇಡೀ ಭಾರತಾದ್ಯಂತ ಸಂಚರಿಸಿ ಆ ಕಲ್ಪನೆಗಳನ್ನು ನಮ್ಮ ಮುಂದಿರಿಸಿದರು. ರಾಮಾಯಣ ಒಂದು ಆದರ್ಶ ಕಾವ್ಯ. ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಬರುವ ಕಷ್ಟಗಳನ್ನು ಹೇಗೆ ಸಹಿಸಬೇಕು. ಕಷ್ಟವಿರುವ ಸಂದರ್ಭದಲ್ಲಿಯೂ ನಮ್ಮ ಮುಂದೆ ನಡೆಯುವ ಅನ್ಯಾಯಗಳ ವಿರುದ್ಧ ಯಾವ ರೀತಿ ಪ್ರತಿಭಟಿಸಬೇಕೆಂಬ ಜಾಗೃತಿ ರಾಮಾಯಣ ಕೃತಿಯಲ್ಲಿದೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಈ ಸಂದರ್ಭ ದ.ಕ.ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಜಿಪಂ ಮುಖ್ಯ ಕಾರ್ಯನಿರ್ವಾಹಕ ಡಾ.ಆರ್‌.ಸೆಲ್ವಮಣಿ, ತಾಪಂ ಅಧ್ಯಕ್ಷ ಮಹಮ್ಮದ್ ಮೋನು, ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath PanjimogaruConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.