ETV Bharat / state

ಅನೈತಿಕ ಸಂಬಂಧ ಶಂಕೆ: ಉಳ್ಳಾಲದಲ್ಲಿ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ - ದಂಪತಿ ಅನುಮಾನಾಸ್ಪದವಾಗಿ ಮೃತ

ಅನೈತಿಕ ಸಂಬಂಧದ ಶಂಶಯದಿಂದ ಪತ್ನಿಯನ್ನು ಕೊಂದು ಪತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Mangaluru couple dead body
Mangaluru couple dead body
author img

By

Published : Oct 27, 2022, 4:01 PM IST

Updated : Oct 27, 2022, 6:32 PM IST

ಮಂಗಳೂರು: ಪತ್ನಿ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪತಿ ಆಕೆಯನ್ನು ಹತ್ಯೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ‌ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೋಮೇಶ್ವರ ಗ್ರಾಮದ ಪಿಲಾರ್​​ನ ಪಂಜಂದಾಯ ದೇವಸ್ಥಾನದ ಸಮೀಪ ಈ ಘಟನೆ ನಡೆದಿದೆ.

ಶೋಭ (46) ಕೊಲೆಗೀಡಾದ ಪತ್ನಿ. ಶಿವಾನಂದ (55) ಆತ್ಮಹತ್ಯೆ ಮಾಡಿಕೊಂಡಿರುವ ಪತಿ. ಅನುಮಾನ ಸ್ವಭಾವದ ಶಿವಾನಂದ ಪತ್ನಿ ಶೋಭ ಜೊತೆಗೆ ಸಣ್ಣ ಪುಟ್ಟ ವಿಷಯಕ್ಕೂ ಪ್ರತಿದಿನ ಜಗಳವಾಡುತ್ತಿದ್ದರು. ಹಲವರ ಜೊತೆಗೆ ಅನೈತಿಕ ಸಂಬಂಧ ಇದೆ ಎಂದು ಪತ್ನಿಯ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದರು. ಗುರುವಾರ ಬೆಳಗ್ಗೆ ಕೂಡ ಪತ್ನಿಯೊಂದಿಗೆ ಜಗಳವಾಡಿದ್ದರು ಎನ್ನಲಾಗ್ತಿದೆ.

ಮಗ ಕೆಲಸಕ್ಕೆ ತೆರಳಿದ್ದ ವೇಳೆ ಶಿವಾನಂದ ತಮ್ಮ ಪತ್ನಿಯನ್ನು ಹತ್ಯೆ ಮಾಡಿ ಬಳಿಕ ತಾವು ಸಹ ನೇಣು ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರಿಗೆ ಓರ್ವ ಪುತ್ರಿಯೂ ಇದ್ದಾರೆ.

(ಓದಿ: ಮಂಗಳೂರಿನಲ್ಲಿ ಕಸಾಯಿಖಾನೆ ವಿರುದ್ಧ ಕ್ರಮ: 3 ಕಡೆ ಆಸ್ತಿ ಮುಟ್ಟುಗೋಲು)

Last Updated : Oct 27, 2022, 6:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.