ಬಂಟ್ವಾಳ: ತಾಲೂಕಿನ ವಿಟ್ಲ ಸಮೀಪ ಕೊಳ್ನಾಡು ಖಂಡಿಗ ಎಂಬಲ್ಲಿ ನಡೆದ ಮಗಳು ಹಾಗೂ ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಆಸ್ತಿ ವಿವಾದವೇ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ವಿಟ್ಲ ಸಮೀಪ ಕೊಳ್ನಾಡು ಖಂಡಿಗ ಎಂಬಲ್ಲಿ ಸುರೇಶ್ ಪ್ರಭು ಅಲಿಯಾಸ್ ಕಾಳೇಶ್ವರ ಸ್ವಾಮಿ ಎಂಬಾತ ತನ್ನ ಪತ್ನಿ ಹಾಗೂ ಇತರರೊಂದಿಗೆ ಸೇರಿಕೊಂಡು ಮಗಳು, ಅಳಿಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಸಂಬಂಧ ಸುರೇಶ್ ಪ್ರಭು (57), ಶಿವಾನಂದ ಕಾಮತ್ (33) ಹಾಗೂ ಚಂದ್ರ (30) ಎಂಬುವರನ್ನು ಬಂಧಿಸಲಾಗಿದೆ.
ಮಗಳು ಕಿರಣ ತನ್ನ ಪತಿ ಚೇತನ್ ಜೊತೆ ಶುಕ್ರವಾರ ತವರು ಮನೆಗೆ ಬಂದಿದ್ದ ವೇಳೆ ತಂದೆ, ತಾಯಿ ಸುಮತಿ, ಶಿವಾನಂದ ಕಾಮತ್, ಆತನ ಹೆಂಡತಿ ಜಯಲಕ್ಷ್ಮೀ ಇತರರು ಸೇರಿಕೊಂಡು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿದ್ದರು. ಬಳಿಕ ಚೇತನ್ನನ್ನು ವಿಟ್ಲ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಿ ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಸುರೇಶ್ ಪ್ರಭು ಮಗಳು ಕಿರಣ ನೀಡಿದ ದೂರಿನ ಅನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ರಾಬಿನ್ಸನ್ 5 ವಿಕೆಟ್: ಭಾರತಕ್ಕೆ ಇನ್ನಿಂಗ್ಸ್ ಮತ್ತು 76ರನ್ಗಳ ಸೋಲು, ಸರಣಿ 1-1ರಲ್ಲಿ ಸಮಬಲ