ಮಂಗಳೂರು: ಕರಾವಳಿಯಲ್ಲಿ ಹಲವು ದಿನಗಳಿಂದ ಸಮುದ್ರದ ನೀರು ರಾತ್ರಿಯಾಗುತ್ತಿದ್ದಂತೆ ನೀಲಿಯಾಗಿ ಕಾಣಿಸಿಕೊಳ್ಳತೊಡಗಿದ್ದು, ಬೆಳಗ್ಗೆ ಹಸಿರು ಬಣ್ಣದಲ್ಲಿ ಕಾಣುತ್ತಿರೋದು ಜನರ ಕುತೂಹಲಕ್ಕೆ ಕಾರಣವಾಗಿದೆ.
ಸಮುದ್ರ ನೀರಿನಲ್ಲಿರುವ ಡೈನೋಪ್ಲಾಜಲ್ಲೇಟ್ ಎನ್ನುವ ಪಾಚಿಯಂತಹ ಜೀವಿಗಳು ದೇಹದಲ್ಲಿರುವ ರಾಸಾಯನಿಕದಿಂದಾಗಿ ಈ ರೀತಿಯ ನೀಲಿ, ಹಸಿರು ಬಣ್ಣದ ಬೆಳಕು ಕಾಣಿಸಿಕೊಳ್ಳುತ್ತದೆ. ಈ ನೀಲಿ ಬಣ್ಣ ರೇಡಿಯಂನಂತೆ ಹೊಳೆಯುತ್ತಿರುವುದು ಎಲ್ಲರಿಗೂ ಸೋಜಿಗದ ಸಂಗತಿಯಾಗಿದೆ.
ಓದಿ:ಮತ್ಸ್ಯಕ್ಷಾಮದಿಂದ ಬರಿಗೈಯಲ್ಲಿ ಮರಳುವ ಬೋಟುಗಳು: ಸಂಕಷ್ಟದಲ್ಲಿ ಮೀನುಗಾರರು
ಸಾಮಾನ್ಯವಾಗಿ ಅಮವಾಸ್ಯೆ ರಾತ್ರಿಯಲ್ಲಿ ಇದು ಹೆಚ್ಚಾಗಿ ಕಂಡು ಬರುತ್ತಿದ್ದು, ಹೆಚ್ಚು ಬೆಳಕಿರುವ ಕಡಲ ತೀರಗಳಲ್ಲಿ ಗೋಚರಿಸುವುದಿಲ್ಲ. ಬದಲಾಗಿ ದಟ್ಟ ಕತ್ತಲ ತೀರದಲ್ಲಿ ಕಾಣಿಸುತ್ತದೆ. ಇದು ಪ್ರತಿ ವರ್ಷವೂ ಅಕ್ಟೋಬರ್ ನವೆಂಬರ್ ನಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಪ್ರಕ್ರಿಯೆ ಎಂದು ಮೀನುಗಾರರು ಹೇಳುತ್ತಿದ್ದಾರೆ.